Headlines

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ

Katrina Kaif Pregnancy: ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಅವರು ಪಾಲಕರಾಗುತ್ತಿದ್ದಾರೆ ಎಂದು 2 ವರ್ಷಗಳಿಂದ ಒಂದಲ್ಲ ಒಂದು ಗಾಸಿಪ್‌ ಹರಡುತ್ತಲೇ ಇತ್ತು. ಈ ಬಗ್ಗೆ ಈ ಜೋಡಿ ಮೌನ ಮುರಿದಿರಲಿಲ್ಲ. ಈಗ ತಾಯಿ ಆಗುತ್ತಿರೋದು ಸತ್ಯ ಎಂದು ಹೇಳಿಕೊಂಡಿದ್ದಾರೆ.

42 ವರ್ಷದ ಈ ನಟಿ ಕಳೆದ ಮಾರ್ಚ್‌ನಲ್ಲಿಯೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಸರ್ಪ ಸಂಸ್ಕಾರ ಮಾಡಿಸಿಕೊಂಡಿದ್ದರು. ಈಗ ದೇವರು ಕಣ್ಣು ಬಿಟ್ಟಿದ್ದಾನೆ.

“ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ” ಎಂದು ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮಾಡಲಾಗುವುದು. ಕುಟುಂಬದಲ್ಲಿ ಸರ್ಪದೋಷ ಇದ್ದರೆ ಮಕ್ಕಳಾಗೋದಿಲ್ಲ, ಚರ್ಮ ಸಮಸ್ಯೆ ಕೂಡ ಬರುವುದು. ಹೀಗಾಗಿ ಆಶ್ಲೇಷ ಬಲಿ ಎಂದು ಸರ್ಪ ಸಂಸ್ಕಾರ ಮಾಡಲಾಗುವುದು. ಆಗ ಸರ್ಪ ದೋಷ ನಿವಾರಣೆ ಆಗಿ ಮಕ್ಕಳಾಗುತ್ತವೆ. ಕರ್ನಾಟಕದಲ್ಲಿರುವ ಈ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ.

42 ನೇ ವಯಸ್ಸಿನಲ್ಲಿ ತಾಯಿಯಾಗೋದು ಸುಲಭವಿಲ್ಲ. ಫಿಟ್‌ ಆಗಿದ್ದರೂ ಕೂಡ ಮಗು ಮಾಡಿಕೊಳ್ಳೋದು ಕಷ್ಟ. ಪ್ರಿಯಾಂಕಾ ಚೋಪ್ರಾ ಅವರಿಂದ ಹಿಡಿದು, ಶಿಲ್ಪಾ ಶೆಟ್ಟಿಯವರೆಗೆ ಸಾಕಷ್ಟು ನಟಿಯರು ಮಗು ಆಗಿಲ್ಲ ಎಂಬ ಕಾರಣಕ್ಕೆ ಸರೋಗಸಿ ಮೊರೆ ಹೋಗಿದ್ದರು. ಶಾರುಖ್‌ ಖಾನ್-ಗೌರಿ ಖಾನ್‌ ಕೂಡ ತಮ್ಮ ಮೂರನೇ ಮಗುವನ್ನು ಸರೋಗಸಿ ಮೂಲಕ ಪಡೆದರು.

ಈಗ ಕತ್ರಿನಾ ಕೈಫ್‌ ಅವರು ಇಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿದ್ದಾರೆ. ಈ ಮೂಲಕ ಅವರು ಸಂತಾನಕ್ಕೋಸ್ಕರ ಪ್ರಾರ್ಥನೆ ಮಾಡಿದ್ದರು. ಈ ಬಗ್ಗೆ ಅವರು ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ಮಾರ್ಚ್‌ ತಿಂಗಳಿನಲ್ಲಿ ಕತ್ರಿನಾ ಕೈಫ್‌ ಅವರು ಕುಕ್ಕೆಗೆ ಭೇಟಿ ನೀಡಿದ್ದರು. ಇದಾಗಿ ಆರು ತಿಂಗಳುಗಳು ಕಳೆದಿವೆ. ಈಗ ಅವರು ಗರ್ಭಿಣಿಯಾಗಿರೋ ನ್ಯೂಸ್‌ ಕೊಟ್ಟಿದ್ದಾರೆ. ಈ ಮೂಲಕ ಅವರ ಭಕ್ತಿಗೆ ದೇವರು ಒಲಿದಿದ್ದಾನೆ ಎಂದಾಯಿತು.

Source link

Leave a Reply

Your email address will not be published. Required fields are marked *