ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ ಬಿಚ್ಚಿಟ್ಟಿದ್ದಾರೆ. ಹಲವು ಧರ್ಮದ ಪುಣ್ಯಗಳಿಂದ ನನಗೆ ಸನಾತನ ಧರ್ಮದಲ್ಲಿರುವ ಸಾಧ್ಯವಾಗಿದೆ ಎಂದಿದ್ದಾರೆ.

ಬಿಗ್ ಬಾಸ್, ಸಿನಿಮಾ, ಸೀರಿಯಲ್ ಮೂಲಕ ಭಾರಿ ಜನಪ್ರಿಯರಾಗಿರುವ ನಟಿ ತಾವು ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಇದು ನನ್ನ ಹಲವು ಜನ್ಮಗಳ ಪುಣ್ಯ ಎಂದಿದ್ದಾರೆ. ಹೌದು, ಸಬೀನಾ ಅಬ್ದುಲ್ ಲತೀಫ್ ಈಗ ಜನಪ್ರಿಯ ಲಕ್ಷ್ಮಿ ಪ್ರಿಯಾ ಎಂದೇ ಗುರುತಿಸಿಕೊಂಡಿದ್ದಾರೆ. ಮಲೆಯಾಳಂ ನಟಿಯ ಮತಾಂತರದ ರೋಚಕ ಘಟನೆ ಇಲ್ಲಿದೆ.

ಸಿನಿಮಾ ಮತ್ತು ಸೀರಿಯಲ್‌ಗಳ ಮೂಲಕ ನಟನಾ ಕ್ಷೇತ್ರದಲ್ಲಿ ಹೆಸರು ಮಾಡಿದವರು ನಟಿ ಲಕ್ಷ್ಮಿಪ್ರಿಯಾ. ಬಿಗ್ ಬಾಸ್ ಮಲಯಾಳಂ ಸೀಸನ್ 4ರಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನವನ್ನೂ ಪಡೆದಿದ್ದರು. 2005ರಲ್ಲಿ ತೆರೆಕಂಡ ಮೋಹನ್‌ಲಾಲ್-ಜೋಷಿ ಜೋಡಿಯ ‘ನರನ್’ ಚಿತ್ರದ ಮೂಲಕ ಲಕ್ಷ್ಮಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟರು. ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದ ಲಕ್ಷ್ಮಿಪ್ರಿಯಾ ಅವರ ಮೊದಲ ಹೆಸರು ಸಬೀನಾ ಅಬ್ದುಲ್ ಲತೀಫ್. ಮದುವೆಗೂ ಮುನ್ನವೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಬಗ್ಗೆ ಬಿಗ್ ಬಾಸ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದೀಗ, ತಮ್ಮ ಮತಾಂತರದ ಬಗ್ಗೆ ಸಂದರ್ಶನವೊಂದರಲ್ಲಿ ಲಕ್ಷ್ಮಿಪ್ರಿಯಾ ಹಂಚಿಕೊಂಡಿರುವ ಮಾತುಗಳು ಗಮನ ಸೆಳೆಯುತ್ತಿವೆ.

ತಾನು ಮುಸ್ಲಿಂ ಆಗಿದ್ದರೂ, ಆ ಧರ್ಮದ ಸಂಪ್ರದಾಯಗಳ ಪ್ರಕಾರ ಯಾವತ್ತೂ ಬದುಕಿಲ್ಲ ಎಂದು ಲಕ್ಷ್ಮಿಪ್ರಿಯಾ ಹೇಳಿದ್ದಾರೆ. "ನಾನು ಇಲ್ಲಿಯವರೆಗೆ ಕುರಾನ್ ಓದಿಲ್ಲ, ನನಗೆ ಅರೇಬಿಕ್ ಕೂಡ ಗೊತ್ತಿಲ್ಲ. ಸನಾತನ ಧರ್ಮದ ದೀಕ್ಷೆ ಸಿಗೋದು ಒಂದೇ ಜನ್ಮದ ಪುಣ್ಯವಲ್ಲ. ನಾನು ಹಿಂದಿನ ಜನ್ಮದಲ್ಲೂ ಇದೇ ಆಗಿದ್ದೆ ಅಂತ ನನಗೆ ಅನಿಸುತ್ತೆ. ಆ ಜನ್ಮದಲ್ಲಿ ನನ್ನೊಳಗೆ ಇದ್ದಿದ್ದೇ ಈ ಜನ್ಮದಲ್ಲೂ ಹೊರಬಂದಿದೆ. ಕೆಲವೊಮ್ಮೆ ‘ನಾನು ಜನ್ಮದಿಂದ ಬ್ರಾಹ್ಮಣ ಸ್ತ್ರೀ, ಆದರೂ ಲಕ್ಷ್ಮಿ ಹೇಳುವ ಹಾಗೆ ಲಲಿತಾ ಸಹಸ್ರನಾಮ ಹೇಳಲು ಆಗಲ್ಲ’ ಅಂತ ಕೆಲವರು ಹೇಳುತ್ತಾರೆ. ಆದರೆ ನನಗೆ ಹಾಗಲ್ಲ. ನಾನು ಊರು ಓಣಾಟುಕರ. ನಮ್ಮ ಕಾಲದಲ್ಲಿ ಅಲ್ಲಿ ಮದುವೆ, ಸಾವು ಸಂಭವಿಸಿದಾಗ ಮಾತ್ರ ಜಾತಿ, ಧರ್ಮವನ್ನು ನೋಡುತ್ತಿದ್ದರು.

ಧರ್ಮ ಬದಲಾಯಿಸುವಾಗ ನನಗೆ ಯಾವುದೇ ಕಷ್ಟ ಆಗಲಿಲ್ಲ. ನನ್ನ ಗಂಡ ಸಂಘದವನು, ಅದಕ್ಕೆ ನಾನು ಧರ್ಮ ಬದಲಾಯಿಸಿದೆ ಅಂತ ಕೆಲವರು ಹೇಳ್ತಾರೆ. ಆದರೆ ನನ್ನ ಪತಿಗೆ ನನ್ನ ಪ್ರೀತಿ, ಧರ್ಮ ಬದಲಾವಣೆ ಏನೂ ಗೊತ್ತಿರಲಿಲ್ಲ. ನಾನು ಸಬೀನಾ ಆಗಿರುವುದೇ ಜಯೇಶ್ ಅವರಿಗೆ ಇಷ್ಟವಾಗಿತ್ತು. ಪತಿ ಜಯೇಶ್ ಮತಾಂತರಗೊಳ್ಳಲು ಹೇಳಿಲ್ಲ, ನಾನೇ ಮತಾಂತರವಾಗಲು ಮುಂದಾದೆ. ಹೆಸರು, ಜಾತಿ ಎಲ್ಲವನ್ನೂ ಅಧಿಕೃತವಾಗಿ ಬದಲಾಯಿಸಿದೆ.

ಮದುವೆಗೋಸ್ಕರ ಮತಾಂತರಗೊಂಡಿದ್ದು ನಿಜ. ಧರ್ಮ ಬದಲಾವಣೆ ಹಳೆಯ ಬಟ್ಟೆ ಬದಲಿಸಿ ಹೊಸ ಬಟ್ಟೆ ಧರಿಸಿದ ಅನುಭವವಾಯಿತಷ್ಟೇ. ಆ ಹಳೆ ಬಟ್ಟೆಯನ್ನು ತೊಳೆದು, ಒಣಗಿಸಿ ಎಲ್ಲೋ ಒಂದು ಕಡೆ ಇಟ್ಟಿದ್ದೇನೆ, ಅಷ್ಟೇ. ನನ್ನ ಮಗು ಅಪ್ಪನ ಸಂಸ್ಕೃತಿಯನ್ನೇ ಪಾಲಿಸಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಜಯೇಶ್ ಅವರು ನನ್ನ ಜೀವನಕ್ಕೆ ಬಂದಿರಲಿಲ್ಲ ಅಂದಿದ್ರೆ, ನಾನು ಒಬ್ಬ ಮುಸ್ಲಿಂ ಯುವಕನನ್ನು ಮದುವೆ ಆಗುತ್ತಿರಲಿಲ್ಲ ಎಂದು ಲಕ್ಷ್ಮಿಪ್ರಿಯಾ ಹೇಳಿದ್ದಾರೆ. ಅಬಾಕ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ನನ್ನ ತಾಯಿಯ ಮನೆಯವರು ಹೆಚ್ಚು ಸಂಪ್ರದಾಯಸ್ಥ ಮುಸ್ಲಿಮರು. ಆದರೆ ತಂದೆಯ ಮನೆಯವರು ಪ್ರಗತಿಪರ ಚಿಂತನೆ ಉಳ್ಳವರಾಗಿದ್ದರು. ಅವರು ಸಂಪ್ರದಾಯಸ್ಥ ಮುಸ್ಲಿಮರಾಗಿದ್ದರೂ, ಚೆಟ್ಟಿಕುಳಂಗರ ಭಗವತಿ ನಮ್ಮ ಕುಲದೇವರಂತೆ ಇದ್ದಳು. ನನ್ನ ತಂದೆಯ ತಾತ ಹರಿಪ್ಪಾಡ್ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಹರಿಪ್ಪಾಡ್ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೊದಲ ಕಾಣಿಕೆ ಎಣ್ಣೆಯನ್ನು ನಮ್ಮ ಕುಟುಂಬದಿಂದಲೇ ಕೊಡಲಾಗುತ್ತಿತ್ತು. ನಾನು ಕುರಾನ್ ಕಲಿತಿಲ್ಲ. ನನ್ನ ಅಜ್ಜಿ ಓದು-ಬರಹ ಬಾರದಿದ್ದರೂ, ಉಸ್ತಾದ್‌ರಿಂದ ಕಲಿತು ಹತ್ತು ಪುಸ್ತಕ ಓದಿದವರಾಗಿದ್ದರು. ಆದರೂ ಅವರು ನನಗೆ ಧರ್ಮವನ್ನು ಕಲಿಯುವಂತೆ ಎಂದಿಗೂ ಒತ್ತಾಯಿಸಲಿಲ್ಲ. ಅರೇಬಿಕ್ ಅಕ್ಷರಗಳು ಈಗಲೂ ನನಗೆ ಜಿಲೇಬಿ ತರಾನೇ ಕಾಣಿಸುತ್ತೆ. ನಾನು ಒಂದು ದಿನವೂ ರಂಜಾನ್ ಉಪವಾಸ ಮಾಡಿಲ್ಲ. ಮುಸ್ಲಿಂ ಸಂಪ್ರದಾಯದಂತೆ ನಾನು ಎಂದಿಗೂ ಬದುಕಿಲ್ಲ. ಅದೆಲ್ಲಾ ನನಗೆ ಯಾವತ್ತೂ ಒಗ್ಗಲೇ ಇಲ್ಲ ಎಂದು ಲಕ್ಷ್ಮಿಪ್ರಿಯಾ ವಿವರಿಸಿದ್ದಾರೆ.

ತಾಯಿ ಮನೆಯವರು ಸಂಪ್ರದಾಯಸ್ಥ ಮುಸ್ಲಿಮರು

Source link
ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ