ತಮಿಳಿನ ‘ಗೋಟ್’, ‘ಸಿಂಗಾಪುರ್ ಸಲೂನ್’ ಚಿತ್ರಗಳ ನಾಯಕಿ ಮೀನಾಕ್ಷಿ ಚೌಧರಿ, ತನ್ನ ಗಂಡ ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಕಂಡೀಷನ್‌ಗಳನ್ನು ಹಾಕಿದ್ದಾರೆ. ಈ ವಿಚಾರ ಈಗ ಸಖತ್ ವೈರಲ್ ಆಗಿದೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಟಿಯರಲ್ಲಿ ಮೀನಾಕ್ಷಿ ಚೌಧರಿ ಕೂಡ ಒಬ್ಬರು. ಹಿಂದಿಯಲ್ಲಿ ನಟನೆ ಆರಂಭಿಸಿದ ಇವರು, ಈಗ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಮತ್ತು ವಿಜಯ್ ಜೊತೆ ‘ಗೋಟ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ, ತನ್ನ ಗಂಡನ ಬಗ್ಗೆ ಮೀನಾಕ್ಷಿ ತಮಾಷೆಯಾಗಿ ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಆ ಸಂದರ್ಶನದಲ್ಲಿ ಮೀನಾಕ್ಷಿ, ‘ನನ್ನನ್ನು ಮದುವೆಯಾಗುವ ಹುಡುಗನಿಗೆ ಕನಿಷ್ಠ 100 ಎಕರೆ ಜಮೀನು ಇರಬೇಕು. ಅಷ್ಟೇ ಅಲ್ಲ, ಚೆನ್ನಾಗಿ ಅಡುಗೆ ಮಾಡಲು, ಬಟ್ಟೆ ತೊಳೆಯಲು ಮತ್ತು ಇಸ್ತ್ರಿ ಮಾಡಲು ತಿಳಿದಿರಬೇಕು. ಮನೆಯ ಎಲ್ಲಾ ಕೆಲಸಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ವ್ಯಕ್ತಿಯಾಗಿರಬೇಕು. ಸಣ್ಣಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸದೆ, ತಾನೇ ಎಲ್ಲವನ್ನೂ ಮಾಡುವಂತಿರಬೇಕು’ ಎಂದು ಹೇಳಿದ್ದಾರೆ.

ಮೀನಾಕ್ಷಿ ಅವರ ಈ ಮಾತನ್ನು ಕೇಳಿ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ. ‘ಇದಕ್ಕೆ ಮನೆ ಕೆಲಸಕ್ಕೆ ಒಬ್ಬರನ್ನು ಇಟ್ಟುಕೊಳ್ಳಬಹುದಲ್ಲವೇ?’, ‘ಎಲ್ಲಾ ಸರಿ, ಆದರೆ ಈ 100 ಎಕರೆ ಜಮೀನು ಯಾಕೆ?’, ‘ಅವನಿಗೆ 100 ಎಕರೆ ಇದ್ದರೆ, ಅವನು ಯಾಕೆ ನಿಮ್ಮ ಹಿಂದೆ ಬರಬೇಕು?’, ‘ಹಾಗಾದರೆ ನಿಮಗೆ ಗಂಡ ಬೇಡ, ಮನೆಗೆಲಸದವನು ಬೇಕು’ ಎಂಬಂತಹ ತರಹೇವಾರಿ ಕಾಮೆಂಟ್‌ಗಳು ಹರಿದುಬರುತ್ತಿವೆ. ಮನೆಗೆಲಸಕ್ಕೆ ಆಳು ಬೇಕಾಗಿಲ್ಲ, ಅದಕ್ಕಾಗಿಯೇ ಈ ಪ್ಲ್ಯಾನ್ ಇರಬೇಕು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಸಾಮಾನ್ಯವಾಗಿ ನಟಿಯರು ತಮ್ಮ ಸಹನಟರನ್ನು ಅಥವಾ ದೊಡ್ಡ ಉದ್ಯಮಿಗಳನ್ನು ಮದುವೆಯಾಗಲು ಇಷ್ಟಪಡುತ್ತಾರೆ. ಆದರೆ ಮೀನಾಕ್ಷಿ ಚೌಧರಿ, ತನ್ನ ಗಂಡನಿಗೆ ಮನೆಗೆಲಸ ಚೆನ್ನಾಗಿ ತಿಳಿದಿರಬೇಕು ಎಂದು ಹೇಳಿರುವುದು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮೆಟೀರಿಯಲ್ ಆಗಿದೆ. ಅವರ ಈ ಹೇಳಿಕೆಯನ್ನು ಇಟ್ಟುಕೊಂಡು ನೆಟ್ಟಿಗರು ಮೀಮ್ಸ್ ಮಾಡಿ ಕಾಲೆಳೆಯುತ್ತಿದ್ದಾರೆ. ಇವರ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಂ’ ಎಂಬ ತೆಲುಗು ಚಿತ್ರ ಇತ್ತೀಚೆಗೆ ತೆರೆಕಂಡಿತ್ತು. ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು ಎಂಬುದು ಗಮನಾರ್ಹ.

Source link
Meenakshi Chaudhary: 100 ಎಕರೆ ಜಮೀನಿರಬೇಕು, ಅಡುಗೆನೂ ಬರಬೇಕು! ಗಂಡನ ಬಗ್ಗೆ ಕಂಡೀಷನ್ ಹಾಕಿದ 'ಗೋಟ್' ನಟಿ