ಪಶ್ಚಿಮ ಬಂಗಾಳದ (ಪಶ್ಚಿಮ ಬಂಗಾಳ) ಖ್ಯಾತ ನಟಿ, ಟಿಎಂಸಿಯ ಮಾಜಿ ಸಂಸದೆ ಮಿಮಿ ಚಕ್ರವರ್ತಿ (ಮಿಮಿ ಚಕ್ರವರ್ತಿ) ಅವರು ದೌರ್ಜನ್ಯದ ಆರೋಪ ಮಾಡಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಶ್ಚಿಮ ಬಂಗಾಳದ ತಮ್ಮ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮೇಲೆ ದೌರ್ಜನ್ಯ ಎಸಗಲಾಯ್ತು, ಬಲವಂತದಿಂದ ನನ್ನ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು ಎಲ್ಲರೆದುರು ಅವಮಾನ ಮಾಡಲಾಯ್ತು ಎಂದು ನಟಿ ಮಿಮಿ ಚಕ್ರವರ್ತಿ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ನಯಾಗ್ರಾನ್ನ ಬೋಂಗೋನ್ ಸುಮಾರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಿಮಿವರ್ತಿಯನ್ನು ಅತಿಥಿಯಾಗಿ ಆಹ್ವಾನಿಸಲಾಯಿತು. ನಟಿ ನೀಡಿರುವ ದೂರಿನ ಅನ್ವಯ, ನಟಿ ಮಿಮಿ ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುವಾಗಲೇ ವೇದಿಕೆ ಏರಿದ ಆಯೋಜಕರಲ್ಲಿ ಒಬ್ಬರಾದ ತನ್ಮಯ್ ಶಾಸ್ತ್ರಿ ಎಂಬವರು ನಟಿಯನ್ನು ಪ್ರದರ್ಶನ ನಿಲ್ಲಿಸುವಂತೆ ಹೇಳದೆ, ಬಲವಂತದಿಂದ ಕೆಳಕ್ಕೆ ಇಳಿಸಿದ್ದಾರೆ. ‘ಸಾಕು ನಿಲ್ಲಿಸು, ಇಲ್ಲಿಂದ ತೆರಳು’ ಎಂದು ಕಠಿಣವಾಗಿ ಮಾತನಾಡಿದ್ದಾರೆ.
ಆದರೆ ಅಯೋಜಕರು ಹೇಳುತ್ತಿರುವುದೇ ಬೇರೆ, ವೇದಿಕೆ ಕಾರ್ಯಕ್ರಮಕ್ಕೆ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಪೊಲೀಸರಿಗೆ ಅವಕಾಶ ಕೊಟ್ಟಿದ್ದರಂತೆ. ಆದರೆ ನಟಿ ಸುಮಾರು ಒಂದು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಲ್ಲದೆ, ವೇದಿಕೆ ಮೇಲೆ ಹೆಚ್ಚು ಸಮಯ ತೆಗೆದುಕೊಂಡರಂತೆ. ಪೊಲೀಸರ ನಿಯಮದ ಕಾರಣ ತಾವು ನಟಿಯನ್ನು ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದೆ. ಜೊತೆಗೆ ತಾವು ಯಾವುದೇ ದೌರ್ಜನ್ಯವನ್ನಾಗಲಿ, ನಟಿಯರಿಗೆ ಅವಮಾನಕರ ರೀತಿಯಲ್ಲಾಗಲಿ ನಡೆದುಕೊಂಡಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಬದಲಾಗಿ, ನಟಿಯ ಬೌನ್ಸರ್ ನಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡರು.
ಇದನ್ನೂ ಓದಿ:ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ನಟಿ ಮಿಮಿ ಚಕ್ರವರ್ತಿ, ಇಮೇಲ್ ಮೂಲಕ ಬೊಂಗೋನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಹ ತನಿಖೆ ಆರಂಭಿಸಿದ್ದಾರೆ. ನಟಿ ಮಿಮಿ ಅವರು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಬರೆದುಕೊಂಡಿದ್ದು, ನಟಿಯ ಪೋಸ್ಟ್‌ಗೆ ಪರ ವಿರೋಧ ಅಭಿಪ್ರಾಯಗಳು ಸಹ ಸೂಚಿಸಿವೆ. ಮಿಮಿ ಚಕ್ರವರ್ತಿ, ಬಂಗಾಳಿ ಸಿನಿಮಾ ರಂಗದ ಬಲು ಜನಪ್ರಿಯ ನಟಿ, ಮತ್ತು ಟಿಎಂಸಿ ಪಕ್ಷದ ಮಾಜಿ ಸಂಸದೆ ಸಹ ಆಗಿದ್ದವರು. ಬಂಗಾಳಿ ಸಿನಿಮಾಗಳ ಜೊತೆಗೆ ಒಂದು ಬಾಲಿವುಡ್ ಸಿನಿಮಾ ಮತ್ತು ಒಂದು ಬಾಂಗ್ಲಾದೇಶಿ ಸಿನಿಮಾದಲ್ಲಿಯೂ ನಟಿಸಿದ್ದಾರೆ ಮಿಮಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ