ತಂದೆ-ಮಗ ಇಬ್ಬರ ಜೊತೆನೂ ರೊಮ್ಯಾನ್ಸ್ ಮಾಡಿದ ಸ್ಟಾರ್ ನಟಿಯರು

ತಂದೆ-ಮಗ ಇಬ್ಬರ ಜೊತೆನೂ ರೊಮ್ಯಾನ್ಸ್ ಮಾಡಿದ ಸ್ಟಾರ್ ನಟಿಯರು

ತಂದೆ-ಮಗ ಇಬ್ಬರ ಜೊತೆನೂ ರೊಮ್ಯಾನ್ಸ್ ಮಾಡಿದ ಸ್ಟಾರ್ ನಟಿಯರು

ಬಾಲಿವುಡ್ ಚಿತ್ರರಂಗದ ಈ ಸ್ಟಾರ್ ನಟಿಯರು ಒಂದು ಕಾಲದಲ್ಲಿ ಈ ಜನಪ್ರಿಯ ನಾಯಕರೊಂದಿಗೆ ಡುಯೆಟ್ ಮಾಡಿದ್ದಾರೆ, ಅಷ್ಟೇ ಅಲ್ಲದೇ ಬಳಿಕ ಅವರ ಮಕ್ಕಳ ಜೊತೆಗೂ ಸಹ ರೊಮ್ಯಾನ್ಸ್ ಮಾಡಿ, ತಾವು ಎವರ್ ಗ್ರೀನ್ ನಾಯಕಿಯರು ಅನ್ನೋದನ್ನು ನಿರೂಪಿಸಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ರೊಮ್ಯಾನ್ಸ್ ಬಗ್ಗೆ ಹೇಳೋ ಹಾಗೆ ಇಲ್ಲ. ಯಾಕಂದ್ರೆ ರೊಮ್ಯಾನ್ಸ್ ತುಂಬಾನೆ ಕಾಮನ್, ಆದರೆ ಈ ಸ್ಟಾರ್ ನಟಿಯರು ಬಾಲಿವುಡ್ ನ ಸ್ಟಾರ್ ನಟರೊಂದಿಗೂ, ಬಳಿಕ ಅವರ ಮಕ್ಕಳೊಂದಿಗೂ ರೊಮ್ಯಾನ್ಸ್ ಮಾಡಿದ್ದಾರೆ ಅನ್ನೋದು ನಿಮಗೆ ಗೊತ್ತಾ? ಇದೆಲ್ಲಾ ಸಿನಿಮಾಗಳಲ್ಲಿ ನಡೆದದ್ದು, ನಿಜ ಜೀವನದಲ್ಲಿ ಅಲ್ಲ.

ಮಾಧುರಿ ದೀಕ್ಷಿತ್ ಅಂದು ಇಂದು ಎಂದೆಂದಿಗೂ ಸ್ಟಾರ್ ನಟಿ, ಅವರು 1988ರಲ್ಲಿ ‘ದಯಾವಾನ್’ ಸಿನಿಮಾದಲ್ಲಿ ವಿನೋದ್ ಖನ್ನಾ ಜೊತೆ ರೊಮ್ಯಾನ್ಸ್ ಮಾಡಿದ್ದರು. ಅದಾಗಿ ಹತ್ತು ವರ್ಷದ ಬಳಿಕ ಪುತ್ರ ಅಕ್ಷಯ್ ಖನ್ನಾ ಜೊತೆ ‘ಮೊಹಬ್ಬತ್’ ಸಿನಿಮಾದಲ್ಲಿ ಡ್ಯುಯೆಟ್ ಹಾಡಿದ್ದರು.

ನಟಿ ಕಿಮಿ ಕಟ್ಕರ್ 1992ರಲ್ಲಿ ‘ಹಮ್ಲಾ’ ಸಿನಿಮಾದಲ್ಲಿ ಧರ್ಮೇಂದ್ರ ಜೊತೆ ನಟಿಸಿದ್ದರು, 1989ರಲ್ಲಿ ‘ವರ್ದಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆ ಕೂಡ ನಟಿಸಿದ್ದರು.

ಎವರ್ ಗ್ರೀನ್ ಬ್ಯೂಟಿ ಶಿಲ್ಪಾ ಶೆಟ್ಟಿ 1999ರಲ್ಲಿ ಅಮಿತಾಬ್ ಬಚ್ಚನ್ ಜೊತೆ ‘ಲಾಲ್ ಬಾದ್’ಶಾ’ ಸಿನಿಮಾದಲ್ಲಿ ಹಾಗೂ 2008ರಲ್ಲಿ ಅಭಿಷೇಕ್ ಜೊತೆ ‘ದೋಸ್ತಾನ’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಡುಯೆಟ್ ಹಾಡಿದ್ದರು.

ನಟಿ ಶ್ರೀದೇವಿ ಧರ್ಮೇಂದ್ರ ಜೊತೆ ರಲ್ಲಿ 1990ರಲ್ಲಿ ‘ನಾಕಾಬಂಧಿ’ ಸಿನಿಮಾದಲ್ಲಿ ನಟಿಸಿದ್ದರು. 1989ರಲ್ಲಿ ಸನ್ನಿ ಡಿಯೋಲ್ ಜೊತೆ ‘ಚಾಲ್ ಬಾಜ್’ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡಿದ್ದರು.

ಡ್ರೀಮ್ ಗರ್ಲ್ ಹೇಮಾ ಮಾಲಿನಿ 1968ರಲ್ಲಿ ’ಸಪ್ನೋ ಕಾ ಸೌದಾಗರ್’ ಸಿನಿಮಾದಲ್ಲಿ ರಾಜ್ ಕಪೂರ್ ಅವ್ರೊಂದಿಗೆ ನಟಿಸಿದ್ದರು. ಬಳಿಕ 1981ರಲ್ಲಿ ‘ಏಕ್ ಚಾದರ್ ಮೈಲೀಸಿ’ ಸಿನಿಮಾದಲ್ಲಿ ರಿಷಿ ಕಪೂರ್ ಅವರ ಜೊತೆ ಕಾಣಿಸಿಕೊಂಡಿದ್ದರು.

ಕನ್ನಡ ಸಿನಿಮಾದಲ್ಲೂ ಮಿಂಚಿದ ನಟಿ ಜಯಪ್ರದಾ 1991ರಲ್ಲಿ ಧರ್ಮೇಂದ್ರ ಜೊತೆ ‘ಫರಿಸ್ತೇ’ ಸಿನಿಮಾದಲ್ಲಿ ನಟಿಸಿದ್ದರು. 1993 ರಲ್ಲಿ ‘ವೀರ್ತಾ’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆ ನಟಿಸಿದ್ದರು.

ನಟಿ ಡಿಂಪಲ್ ಕಪಾಡಿಯಾ 1991 ರಲ್ಲಿ ವಿನೋದ್ ಖನ್ನಾ ಜೊತೆ ‘ಖೂನ್ ಕ ಖರ್ಜಾ’ ಚಿತ್ರದಲ್ಲಿ ಡುಯೆಟ್ ಹಾಡಿದ್ದರು. ‘ದಿಲ್ ಚಾಹ್ತಾ ಹೆ’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಜೊತೆ ಕೂಡ ನಟಿಸಿದ್ದರು ಡಿಂಪಲ್.

Source link

Leave a Reply

Your email address will not be published. Required fields are marked *