Kannada Actress: ಕನ್ನಡದ ಕೆಲ ನಟಿಯರು ಸೂಪರ್ ಹಿಟ್ ಸೀರಿಯಲ್ ಕೊಟ್ಟು, ಸದ್ಯ ವಿದೇಶದಲ್ಲಿದ್ದಾರೆ. ಮದುವೆಯಾದ ಬಳಿಕ ಅವರು ಪತಿ, ಮಗುವಿನ ಜೊತೆಗೆ ವಿದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ಈ ನಟಿಯರು ವಿದೇಶದಲ್ಲಿ ಇರೋದಿಕ್ಕೆ ಧಾರಾವಾಹಿಯಲ್ಲಿ ನಟಿಸಲಾಗುತ್ತಿಲ್ಲ. ಇವರೆಲ್ಲರೂ ಸೀರಿಯಲ್‌ನಲ್ಲಿ ನಟಿಸಲಿ, ತೆರೆ ಮೇಲೆ ಬರಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ.

‘ಚಿಟ್ಟೆಹೆಜ್ಜೆ’ ಧಾರಾವಾಹಿ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ನಯನಾ ಪುಟ್ಟಸ್ವಾಮಿ ಅವರು ಚರಣ್ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಚರಣ್ ಅವರು ಅಮೆರಿಕದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಚಂದ್ರಿಕಾ ಆಗಿ ಮೆರೆದಿದ್ದ ನಟಿ ರಾಜೇಶ್ವರಿ ಪಾರ್ಥಸಾರಥಿ ಅವರು ಆಸ್ಟ್ರೇಲಿಯಾದಲ್ಲಿದ್ದಾರೆ. ಕಲ್ಯಾಣ್ ಕ್ರಿಶ್ ಅವರನ್ನು ಮದುವೆಯಾಗಿರೋ ರಾಜೇಶ್ವರಿ ಅವರಿಗೆ ಮಗಳು ಕೂಡ ಇದ್ದಾಳೆ. ‘ಅಗ್ನಿಸಾಕ್ಷಿ’ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟಿದ್ದ ರಾಜೇಶ್ವರಿ, ಮದುವೆಯಾಗಿ ಆಸ್ಟ್ರೇಲಿಯಾಕ್ಕೆ ಹಾರಿದ್ದರು.

ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ವಿಘ್ನೇಶ್ ಶರ್ಮಾ ಜೊತೆ ಮದುವೆಯಾದ ಬಳಿಕ ಅವರು ಅಮೆರಿಕಲ್ಲಿದ್ದಾರೆ. ಈಗ ಅವರು ವಿಯಾರಾ ಶರ್ಮಾ ತಾಯಿ ಕೂಡ ಹೌದು. ‘ಮಧುಬಾಲ’ ಧಾರಾವಾಹಿ ಸೇರಿದಂತೆ ತಮಿಳು ಸೀರಿಯಲ್‌ನಲ್ಲಿ ಕೂಡ ನಟಿಸಿದ್ದರು.

‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ನಟಿಸಿದ್ದ ಸ್ನೇಹಾ ಅವರು ರಷ್ಯಾ ಮೂಲದ ರಾಯನ್ ಜೊತೆ ಮದುವೆಯಾಗಿದ್ದಾರೆ. ಇವರಿಗೆ ಓರ್ವ ಮಗ ಕೂಡ ಇದ್ದಾನೆ. ಬಿಗ್ ಬಾಸ್ ಕನ್ನಡ ಸೀಸನ್ 5 ಶೋನಲ್ಲಿ ಭಾಗವಹಿಸಿದ್ದ ಸ್ನೇಹಾ ಕೊರಿಯೋಗ್ರಾಫರ್ ಕೂಡ ಹೌದು.

ಬಿಗ್ ಬಾಸ್ ಕನ್ನಡ ಸೀಸನ್ 3 ಶೋನಲ್ಲಿ ಭಾಗವಹಿಸಿದ್ದ ನೇಹಾ ಗೌಡ ಅವರು ಭಾರ್ಗವ್ ಎನ್ನುವವರನ್ನು ಮದುವೆಯಾಗಿದ್ದಾರೆ. ‘ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಕೂಡ ಅವರು ಭಾಗವಹಿಸಿದ್ದರು.

Source link
PHOTOS: ಸೂಪರ್ ಹಿಟ್ ಸೀರಿಯಲ್ ಕೊಟ್ಟು ವಿದೇಶದಲ್ಲಿ ಸೆಟಲ್ ಆದ ಕನ್ನಡ ಕಿರುತೆರೆ ನಟಿಯರು!