ಬೆಂಗಳೂರು, ಡಿಸೆಂಬರ್ 03: ಸಿಲಿಕಾನ್ ಸಿಟಿ (ಬೆಂಗಳೂರು) ಜನರೇ ಚಳಿಗಾಲ ಮುಗಿಯುವವರೆಗೂ ಕೊಂಚ ಎಚ್ಚರ. ಬೆಂಗಳೂರು ಸೇರಿದಂತೆ ಕರ್ನಾಟಕದ (ಕರ್ನಾಟಕ) ಜನರನ್ನು ಅಕ್ಯುಟ್ ಡಯಾರಿಯಲ್ ಡಿಸೀಸ್ ಬಿಡದೆ ಕಾಡುತ್ತಿದೆ. ಬೇಸಿಗೆಯಲ್ಲಿ ಹೆಚ್ಚು ಕಾಡುವ ಈ ಅಕ್ಯುಟ್ ಡಯಾರಿಯಲ್ ಡಿಸೀಸ್ ಸದ್ಯ ಚಳಗಾಲದಲ್ಲಿಯೂ ಶುರುವಾಗಿದೆ. ಹೀಗಾಗಿ ಎಚ್ಚರವಹಿಸುವುದು ಅಗತ್ಯವಾಗಿದೆ.
ಸಿಲಿಕಾನ್ ಸಿಟಿ ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರ!
ಹೌದು.. ಹೊಟ್ಟೆ ನೋವು, ಜ್ವರ, ನೋವು, ಟೈಫಾಯ್ಡ್, ವೈರಲ್ ಹೆಪಟಕರು ಮುಂತಾದ ನೋವಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೋಂಕು ತಗುಲುವುದು ಸೂಕ್ತ. ಏಕೆಂದರೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆಯಾಗುತ್ತಿದೆ. ಇದು ಆರೋಗ್ಯ ಇಲಾಖೆ ಟೆನ್ಷನ್ ಹೆಚ್ಚಿಸಿದೆ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕೆಲವು ದಿನಗಳಿಂದ ಕರುಳು ಬೇನೆ, ಟೈಫಾಯ್ಡ್, ವೈರಲ್ ಹೆಪಟ ಇತ್ಯಾದಿಗಳಂತಹ ಕರುಳು ಸಂಬಂಧಿ ರೋಗಗಳು ಏರಿಕೆ ಕಂಡಿವೆ. ರಾಜಧಾನಿಯಲ್ಲಿ ಬದಲಾಗುತ್ತಿರುವ ವೆದರ್‌ನಿಂದ ಕಲುಷಿತ ನೀರು ಹಾಗೂ ಆಹಾರ ಸೇವೆಯ ಬಗ್ಗೆ ಎಚ್ಚರವಹಿಸಬೇಕಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಕರಳು ಬೇನೆಗೆ ಸಂಬಂಧಿಸಿದಂತೆ 3221 ಪ್ರಕರಣ ದಾಖಲಾಗಿದೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ 1 ಲಕ್ಷ 66 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ.
ಚಳಿಗಾಲ ಶುರುವಾದರೂ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮಳೆ ಸುರಿಯುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ, ಖಾಯಿಲೆ ಬಗ್ಗೆ ಹೈ ಅಟ್ಲರ್ ಜ್ವರ, ಜ್ವರ, ಟೈಫಾಯ್ಡ್, ವೈರಲ್ ಹೆಪಟಕರು ಮುಂತಾದ ನೋವಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಸೋಂಕು ತಗುಲುವುದು ಸೂಕ್ತ ಎಂದು ಎಚ್ಚರಿಕೆ ನೀಡಲಾಗಿದೆ. ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಕರಳು ಬೇನೆ, ಗ್ಯಾಸ್ಟ್ರೋ ಎಂಟರ ಸೇರಿದಂತೆ ಸೇರಿದಂತೆ ಅನೇಕ ಕರುಳು ಸಂಬಂಧಿ ಖಾಯಿಲೆಗಳು ಇವೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಕೆ ಸಿ.ಜನರಲ್ ಆಸ್ಪತ್ರೆಯ ಡಾ ಮುರಳಿದರ್ ಅವರು ಸಲಹೆ ನೀಡಿದ್ದಾರೆ.
ಇನ್ನು ರಾಜಧಾನಿಯ ಜನರು ಚಳಿಗಾಲ ಮುಗಿಯುವವರೆಗೂ ಎಚ್ಚರಿಕೆ ವಹಿಸುವುದು ಅಗತ್ಯ. ಬೀದಿಬದಿ ಕಲುಷಿತ ಆಹಾರ ಮತ್ತು ನೀರು ಸೇವನೆಯ ಬಗ್ಗೆಯೂ ಎಚ್ಚರಿಕೆ ಅಗತ್ಯ.
ಅಕ್ಯುಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳು ಏನು?
- ಕರುಳು ಸಂಬಂಧಿ ರೋಗಗಳಲ್ಲಿ ಆಗಾಗ ಭೇದಿ
- ವಾಕರಿಕೆ ಜೊತೆಗೆ ವಾಂತಿ
- ಕಿಬ್ಬೊಟ್ಟೆಯ ಸೆಳೆತ
- ಹೊಟ್ಟೆನೋವು
- ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
- ಕಲುಷಿತ ನೀರು ಅಥವಾ ಆಹಾರ ಸೇವನೆ ಬಗ್ಗೆ ಎಚ್ಚರಿಕಗೆ
- ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳ ನೇರ ಸಂಪರ್ಕದಿಂದ ಇದು ಹರಡುತ್ತದೆ.
- ಅಶುಚಿತ್ವ ಕೂಡ ರೋಗ ಹರಡುವಿಕೆಗೆ ಕಾರಣ
ಇದನ್ನೂ ಓದಿ: ನಾಳೆಯ ಹವಾಮಾನ: 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಬೆಂಗಳೂರಿನಲ್ಲಿ ಬೆಳಿಗ್ಗೆ ಚಳಿ ವಾತಾವರಣ
ಒಟ್ಟಿನಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕಿದ್ದು, ಮೂತ್ರಪಿಂಡ ವೈಫಲ್ಯದ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು, ರಾಜಧಾನಿಯ ಜನರು ಚಳಿಗಾಲ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.