ಬೆಂಗಳೂರು, (ಡಿಸೆಂಬರ್ 22): ಬೆಂಗಳೂರು ಟನಲ್ ಮಾರ್ಗದ (ಬೆಂಗಳೂರು ಸುರಂಗ ರಸ್ತೆ) ಟೆಂಡರ್ ಅದಾನಿ ಗ್ರೂಪ್ (ಅದಾನಿ ಗ್ರೂಪ್) ಪಾಲಾಗುವ ಸಾಧ್ಯತೆಗಳಿವೆ. ಕಾರಣ ಟೆಂಡರ್ ಸಲ್ಲಿಸಿರುವ ಕಂಪನಿಗಳ ಮೇಲಕ್ಕೆ ಅದಾನಿ ಗ್ರೂಪ್ ಅತೀ ಕಡಿಮೆ ಬಿಡ್ ಮಾಡಿದೆ. ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಅಂದರೆ 22,267 ಕೋಟಿ ರೂಪಾಯಿಗೆ ಬಿಡ್ ಆಗಿದೆ. (ಗ್ರೇಟರ್ ಬೆಂಗಳೂರು ಅಥಾರಿಟಿ(GBA) 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಆದರೆ, ಜಿಬಿಎ ಕೋಟ್ ಮಾಡಿದ್ದಕ್ಕಿಂತ ಶೇ. 24ರಷ್ಟು ಹೆಚ್ಚಿನ ಮೊತ್ತ ಬಿಡ್ ಮಾಡಿದರೂ, ಬಿಡ್ ಮಾಡಿದವರು ಅತ್ಯಂತ ಕಡಿಮೆ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದ್ದಾರೆ. ಹೀಗಾಗಿ ಅಂದಾಜಿಗಿಂತ ಹೆಚ್ಚು ಹಣಕ್ಕೆ ಅದಾನಿ ಗ್ರೂಪ್ಸ್ ಗೆ ಕಾಂಗ್ರೆಸ್ ಸರ್ಕಾರ ಟೆಂಡರ್ ಫೈನಲ್ ಮಾಡುತ್ತಾ ಎನ್ನುವುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಯಾಕಂದ್ರೆ. ರಾಷ್ಟ್ರಮಟ್ಟದಲ್ಲಿ ಅದಾನಿಯನ್ನು ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರು ಟೀಕಿಸುತ್ತಲೇ ಬಂದಿದ್ದಾರೆ. ಹೀಗಾಗಿ ಇತ್ತ ಸಿದ್ದರಾಮಯ್ಯ ಸರ್ಕಾರ ಧರ್ಮ ಸಂಕಟಕ್ಕೆ ಸಿಲುಕಿದೆ.
ಬೆಂಗಳೂರು ಟನಲ್ ಮಾರ್ಗ ಟೆಂಡರ್ ಅದಾನಿ ಪಾಲಾಗುತ್ತಾ?
ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಮೊತ್ತ ಬಿಡ್ ಮಾಡಿರುವ ಅದಾನಿ ಗ್ರೂಪ್ಸ್, 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. ಆದರೆ ಜಿಬಿಎ 17,698 ಕೋಟಿಗೆ ಬಿಡ್ ಸೀಮಿತವಾಗಿತ್ತು. ಜಿಬಿಎ ಕೋಟ್ ಮಾಡಿದ್ದಕ್ಕಿಂತ 24% ಹೆಚ್ಚಿನ ಮೊತ್ತದ ಬಿಡ್ ಮಾಡಿದರೂ, ಬಿಡ್ ಮಾಡಿದವರು ಅತ್ಯಂತ ಕಡಿಮೆ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದೆ. ಅಂತಿಮ ಹಂತಕ್ಕೆ ಒಟ್ಟು ನಾಲ್ಕು ಕಂಪನಿಗಳು ಪೈಪೋಟಿ ನಡೆಸಿತ್ತು. ಈ ಮೇಲಿನ ದಿಲೀಪ್ ಬಿಲ್ಡ್ ಕಾನ್ ಮತ್ತು ವಿಕಾಸ್ ನಿಗಮ ಸಂಸ್ಥೆ. ಆದರೆ,ಕೆಲ ಕಂಪನಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಟ್ಟವು. ಕೊನೆಯದಾಗಿ ಅದಾನಿ ಗ್ರೂಪ್ ಹಾಗೂ ಹೈದರಾಬಾದ್ ಮೂಲದ ವಿಶ್ವಸಮುದ್ರ ಕಂಪನಿ ಅಖಾಡದಲ್ಲಿದೆ.
ಇದನ್ನೂ ನೋಡಿ: ಬೆಂಗಳೂರಿನಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೈದರಾಬಾದಿನ ವಿಶ್ವ ಸಮುದ್ರ ಗುಂಪುಗಳು 25,474 ಕೋಟಿ ರೂ.ಗೆ ಬಿಡ್ ಮಾಡಿದೆ. ಅಂದಾಜಿಗಿಂತ 7776 ಕೋಟಿ ರೂ ಮೊತ್ತಕ್ಕೆ ವಿಶ್ವಸಮುದ್ರ ಕಂಪನಿ ಬಿಡ್ ಮಾಡಿದೆ. ಆದರೆ ಅದಾನಿ ಗ್ರೂಪ್ ಗೆ ರಾಜ್ಯ ಸರ್ಕಾರ ಬಿಡ್ ಅಂತಿಮ ಮಾಡುತ್ತಾ ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ. ಈ ಬಗ್ಗೆ ಮಾತನಾಡಿದ ಡಿಸಿಎಂ, ಬಿಡ್ ಮಾಡಲಿ ಸರ್ಕಾರ ಏನು ಘೋಷಣೆ ಮಾಡಿದೆಯೋ ಅಷ್ಟೇ ಕೊಡೋದು.ಅದಾನಿ ಆಗಲಿ, ನಾನು ಆಗಲಿ, ನೀನು ಆಗಲಿ ಯಾರೇ ಹಾಕಿದ್ರು ಸರ್ಕಾರ ಹೇಳಿರೋ ಅಷ್ಟೇ ಮಾಡೋದು.20 ಸಾವಿರ ಬಿಡ್ ಮಾಡಲಿ, ಎಷ್ಟಾದ್ರೂ ಬಿಡ್ ಮಾಡಲಿ.ಸರ್ಕಾರ ಘೋಷಣೆ ಮಾಡಿರೋದು ಅಷ್ಟೇ ಕೊಡೋದು ಉಳಿದದ್ದು ಅವರ ವೆಚ್ಚ ಭರಿಸಬೇಕಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೂಪಿಸಿರುವ ಕನಸಿನ ಯೋಜನೆ ‘ಟನಲ್ ರಸ್ತೆ’ ಈಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದಾ ರಾಷ್ಟ್ರ ಮಟ್ಟದಲ್ಲಿ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್, ಇದೀಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡುವ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಸಿದ್ದರಾಮಯ್ಯ ಸರ್ಕಾರ, ಈಗ ಅದಾನಿ ಗ್ರೂಪ್ಸ್ ಗೆ ಟೆಂಡರ್ ಕೊಡುತ್ತಾ? ಅಥವಾ ಟನಲ್ ರಸ್ತೆ ವಿರೋಧಿಸುತ್ತಿರುವ ಬಿಜೆಪಿ ಈಗ ಅದಾನಿ ಗ್ರೂಪ್ಸ್ ವಿರುದ್ಧ ದನಿ ಎತ್ತುತ್ತಾ? ಹೀಗೆ ಬೆಂಗಳೂರು ಟನಲ್ ರಸ್ತೆ ಟೆಂಡರ್ ಕುತೂಹಲಕ್ಕೆ ಒಳ್ಳೆಯದು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ