ಬಾಗಲಕೋಟೆ, ನವೆಂಬರ್ 14: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ನಡೆದ ರೈತರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಹಿತೇಂದ್ರ ಆರ್. ಪ್ರತಿಕ್ರಿಯೆ. ಕಬ್ಬಿನ ಬೆಲೆ ನಿಗದಿ ಮತ್ತು ಹಳೆ ಬಾಕಿ ಪಾವತಿಗಾಗಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿಗೆ ಬೈಕ್ಗಳು ಸುತ್ತು ಕರಕಾಗಿವೆ, ಅವು ರೈತರು ಮತ್ತು ಕಾರ್ಮಿಕರಿಗೆ ಸೇರಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದು, ಪೆಟ್ರೋಲ್ ಕ್ಯಾನ್ಗಳನ್ನು ತರಲಾಗಿದೆ. ನಿಜವಾದ ರೈತರು ಈ ಕೃತ್ಯ ಎಸಗಿಲ್ಲ. ಬದಲಾಗಿ, ರೈತರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ಈ ಘಟನೆಗೆ ಕಾರಣ ಎಂದು ಸೂಚಿಸಲಾಗಿದೆ. ಪ್ರಕರಣಕ್ಕೆ ದೂರು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.