
‘ಧುರಂಧರ 2’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಎರಡು ವಾರದಲ್ಲೇ ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅದೂ ‘ಧುರಂಧರ 2’ ಸಿನಿಮಾದ ನಿರ್ಮಾಣಕ್ಕೆ, ಪ್ರಚಾರಕ್ಕೆ ಬಹಳ ಕಡಿಮೆ ಹಣ ಖರ್ಚಾಗಿದೆ. ಸಿನಿಮಾ ನಿರ್ದೇಶನ ಮಾಡಿರುವ ಆದಿತ್ಯ ಧರ್ ಅವರು ಸಿನಿಮಾದ ಮೂವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ‘ಧುರಂಧರ’ ಸಿನಿಮಾ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ‘ಧುರಂಧರ 2’ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಮೊತ್ತದ ನಿರೀಕ್ಷೆ ಇದೆ. ಇದೀಗ ಸಿನಿಮಾದ ನಾಯಕ ರಣ್ವೀರ್ ಸಿಂಗ್ ಅವರಿಗೆ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಭರ್ಜರಿ ಉಡುಗೊರೆ ನೀಡಿದ್ದಾರೆ.
ಸಿನಿಮಾಗಳು ಯಶಸ್ವಿಯಾದರೆ ಮುಖ್ಯ ನಟರಿಗೆ, ತಂತ್ರಜ್ಞರಿಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಶುರುವಾಗಿದೆ. ಇದೀಗ ಆದಿತ್ಯ ಧರ್ ಅವರೂ ಸಹ ರಣ್ವೀರ್ ಸಿಂಗ್ ಅವರಿಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದೂ ಸಾಮಾನ್ಯ ಕಾರಲ್ಲ ಬದಲಾಗಿ ಐದು ಕೋಟಿಗೂ ಹೆಚ್ಚು ಮೌಲ್ಯದ ಐಶಾರಾಮಿ ಜಿಎಂಸಿ ಹಮ್ಮರ್ ಇವಿ ಕಾರನನ್ನು ನೀಡಿದ್ದಾರೆ. ವಿಶ್ವದ ರಗಡ್ ಮತ್ತು ಐಶಾರಾಮಿ ಕಾರುಗಳಲ್ಲಿ ಒಂದಾಗಿರುವ ಹಮ್ಮರ್ ಕಾರು ಅತ್ಯಾಧುನಿಕ ವರ್ಷನ್ ಕಾರು ಇದಾಗಿದೆ. ವಿಶೇಷವೆಂದರೆ ಈ ಕಾರು ಬಂದಿದೆ.
ಇದನ್ನೂ ಓದಿ:ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ’ ಸಿನಿಮಾದ ಪಾತ್ರಗಳು: ಫೋಟೋ ವೈರಲ್
ರಣವೀರ್ ಅವರು ಇತ್ತೀಚೆಗಷ್ಟೆ ಈ ಜಿಎಂಸಿ ಹಮ್ಮರ್ ಇವರ ಕಾರಿನಲ್ಲಿ ವಿದ್ಯಾರ್ಥಿನಿಯಾಗುತ್ತಿರುವ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಈ ಕಾರನ್ನು ಆದಿತ್ಯ ಮತ್ತು ಯಾಮಿ ಅವರು ಉಡುಗೊರೆಯಾಗಿ ನೀಡುತ್ತಿದ್ದಾರೆ. ಆದಿತ್ಯ ಮತ್ತು ರಣ್ವೀರ್ ಸಿಂಗ್ ನಡುವೆ ಇರುವ ಗೆಳೆತನದ ಸಂಕೇತವಾಗಿ ಈ ಕಾರನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಜೊತೆಗೆ, ಆದಿತ್ಯ ಹಾಗೂ ರಣವೀರ್ ಅವರುಗಳು ಮುಂದೆ ಸಹ ಒಟ್ಟಿಗೆ ಕೆಲಸ ಮಾಡಲಿದ್ದಾರೆ, ಅದರ ದ್ಯೋತಕವಾಗಿ ಈ ಕಾರನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಇತ್ತೀಚೆಗಷ್ಟೇ ‘ಧುರಂಧರ 2’ ಸಿನಿಮಾದ ಸಕ್ಸಸ್ ಪಾರ್ಟಿ ನಡೆದಿತ್ತು, ಆ ಪಾರ್ಟಿ ವೇಳೆ ರಣವೀರ್ ಗೆ ಈ ಕಾರನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
ಜಿಎಂಸಿ ಹಮ್ಮರ್ ಇವಿ ಕಾರು 5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ, ಇದು ವಿಶ್ವದ ಅತ್ಯಂತ ವೇಗದ ಮತ್ತು ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ. ರಣವೀರ್ ಸಿಂಗ್ ಮೊದಲೇ ವಾಹನ ಪ್ರೇಮಿ, ಅವರ ಗ್ಯಾರೇಜ್‌ನಲ್ಲಿ ನೋಡಲು ಲಂಬೋರ್ಗಿನಿ, ಆಸ್ಟನ್ ಮಾರ್ಟಿನ್, ಆಡಿ, ಮರ್ಸಿಡೀಸ್, ಬಿಎಂಡಬ್ಲುನಂತಹ ದುಬಾರಿ ಕಾರುಗಳಿವೆ. ಈಗ ಈ ಅತಿಥಿಯ ಸೇರ್ಪಡೆಯಿಂದ ಅವರ ಸಂಗ್ರಹ ಮತ್ತಷ್ಟು ಶ್ರೀಮಂತವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ