Headlines

‘ನನ್ನ ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದ್ರು, ಅದು 100 ಕೋಟಿ ಕಲೆಕ್ಷ್ ಮಾಡಿತು’; ಆದಿತ್ಯ ಧಾರ್ ಆರೋಪ

‘ನನ್ನ ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದ್ರು, ಅದು 100 ಕೋಟಿ ಕಲೆಕ್ಷ್ ಮಾಡಿತು’; ಆದಿತ್ಯ ಧಾರ್ ಆರೋಪ


'ನನ್ನ ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದ್ರು, ಅದು 100 ಕೋಟಿ ಕಲೆಕ್ಷನ್ ಮಾಡಿತು'; ಆದಿತ್ಯ ಧಾರ್ ಆರೋಪ

ಆದಿತ್ಯ ಧಾರ್ ಅವರು ಇಂದು ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಆದರೆ, ಅವರು ಪಟ್ಟ ಕಷ್ಟದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕ್ರಿಕೆಟರ್ ಆಗಬೇಕು ಎಂದು ಆದಿತ್ಯ ಧಾರ್ ಕನಸು ಕಂಡಿದ್ದರು. ಟೀಂ ಇಂಡಿಯಾದ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಕನಸನ್ನು ಅವರು ಕಂಡಿದ್ದರು. ಆದರೆ, ಕನಸು ಕಾಣಲಿಲ್ಲ. ಈ ಸೇರಿದ ಆದಿತ್ಯ ಧಾರ್ ಅವರು ನಿರ್ದೇಶನಕ್ಕೆ ಬಂದರು. ಇಲ್ಲಿಯೂ ಅವರ ಜರ್ನಿ ಸುಲಭದಲ್ಲಿ ಇರಲಿಲ್ಲ. ಅವರ ಸ್ಕ್ರಿಪ್ಟ್‌ಗಳನ್ನು ಕಡಿಯಲಾಗಿತ್ತಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಆದಿತ್ಯ ಧಾರ್ ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ಎಂದರೆ ಅದು 2019ರ ‘ಉರಿ’. ಆ ಬಳಿಕ ಅವರು 2024ರ ‘ಆರ್ಟಿಕಲ್ 370’ ಚಿತ್ರಕ್ಕೆ ಬರಹಗಾರನಾಗಿ ಕೆಲಸ ಮಾಡಿದರು. ಈ ನಿರ್ಮಾಣ ಕೂಡ ಅವರದ್ದೇ. 2025ರಲ್ಲಿ ಬಂದ ‘ಬಾರಾಮುಲ್ಲ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದರು. 2025ರಲ್ಲಿ ಬಂದ ‘ಧುರಂಧರ’ ಹಾಗೂ 2026ರ ‘ಧುರಂಧರ 2’ ಚಿತ್ರಗಳ ನಿರ್ದೇಶನ ಆದಿತ್ಯ ಧಾರ್ ಅವರು ಮಾಡಿದರು.

ಈ ಮೊದಲು ಆದಿತ್ಯ ಧಾರ್ ಅವರು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದರು. ‘ನನ್ನ ಪ್ರಯಾಣದಲ್ಲಿ ಸಾಕಷ್ಟು ಮೋಸಗಳನ್ನು ಎದುರಿಸುತ್ತಿದ್ದೇನೆ. ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದರು. ಅದು ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನನಗೆ ಸಾಕು ಎನಿಸಿತು. ಆಗ, ನೀವು ಮಾಡ್ತೀರಾ ಎಂದು ಕೆಲವರು ಬೆಂಬಲ ನೀಡುತ್ತಿದ್ದರು’ ಎಂದಿದ್ದರು ಅವರು.

ಇದನ್ನೂ ಓದಿ: ‘ಧುರಂಧರ 2’ ಚಿತ್ರದಲ್ಲಿ ಆದಿತ್ಯ ಧಾರ್ ಮಾಡಿದ್ರು ದೊಡ್ಡ ತಪ್ಪು; ವೈರಲ್ ಆಯ್ತು ಪೋಸ್ಟ್

‘ಸಿನಿಮಾ ಜರ್ನಿಯಲ್ಲಿ ನನ್ನ ಹಲವು ಸಿನಿಮಾಗಳು ಅರ್ಧಕ್ಕೆ ನಿಂತಿವೆ. 15 ದಿನಕ್ಕೆ ಸಿನಿಮಾ ಶೂಟ್ ಆರಂಭವಾಗಬೇಕು. ಆದರೆ, ಅರ್ಧಕ್ಕೆ ನಿಂತಿತ್ತು. ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತೆ ಕೊಡ್ತಾನೆ ಅನ್ನೋದು ನನ್ನ ಅಮ್ಮನ ಮಾತಾಗಿತ್ತು. ದೇವರು ಚಾನ್ಸ್ ಕೊಡ್ತಾನೆ. ಆ ಚಾನ್ಸ್ 3 ವರ್ಷ ಬೇಕಾದರೂ ಬರಬಹುದು, 30 ವರ್ಷವಾದರೂ ಬರಬಹುದು. 30 ವರ್ಷ ಬಿಟ್ಟು ಬಂದರೆ ಅದರ ಮೌಲ್ಯ ಕೂಡ ಹೆಚ್ಚಾಗಿರುತ್ತದೆ. ನಿನ್ನ ಚಾನ್ಸ್ ಗಾಗಿ ಕಾಯಿರಿ’ ಎಂದು ಆದಿತ್ಯ ಧಾರ್ ಹೇಳಿದ್ದರು. ಅವರ ಮಾತು ನಿಜವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *