ಅರೆರೆ.. ಗೌತಮ್ ಸಿಕ್ಕ ಮೇಲೆ ಭೂಮಿಯಲ್ಲಿ ಈ ಬದಲಾವಣೆ ನೀವೂ ಗಮನಿಸಿದ್ದೀರಾ?

ಅರೆರೆ.. ಗೌತಮ್ ಸಿಕ್ಕ ಮೇಲೆ ಭೂಮಿಯಲ್ಲಿ ಈ ಬದಲಾವಣೆ ನೀವೂ ಗಮನಿಸಿದ್ದೀರಾ?

ಅರೆರೆ.. ಗೌತಮ್ ಸಿಕ್ಕ ಮೇಲೆ ಭೂಮಿಯಲ್ಲಿ ಈ ಬದಲಾವಣೆ ನೀವೂ ಗಮನಿಸಿದ್ದೀರಾ?

Gautam Bhoomika story in Amruthadhaare: ಗೌತಮ್-ಭೂಮಿಕಾ ರೋಮ್ಯಾನ್ಸ್ ನೋಡದೆ ಬೇಸರವಾಗಿದ್ದ ವೀಕ್ಷಕರು ಈಗ "ನಮ್ಮ ಗೌತಮ್ ದಿವಾನ್-ಭೂಮಿ ಹೀಗೆ ಇರಲಪ್ಪಾ" ಅಂದುಕೊಳ್ಳುತ್ತಿದ್ದಾರೆ. ಆದರೆ ನೀವು ದಿನನಿತ್ಯ ಧಾರವಾಹಿ ವೀಕ್ಷಿಸುತ್ತಿದ್ದರೆ ನಿಮಗಿಲ್ಲೊಂದು ಬದಲಾವಣೆ ಕಾಣಿಸುತ್ತದೆ.

ವೀಕ್ಷಕರ ಬಹುದಿನದ ಆಸೆಯಂತೆ ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ-ಗೌತಮ್ ಒಂದಾಗಿದ್ದಾರೆ. ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ, ಆಸೆಯಿದ್ದರೂ ಹೇಳಿಕೊಳ್ಳದೆ ಮೌನವಾಗಿದ್ದ ಭೂಮಿ ಈಗ ಗೌತಮ್ ಮೇಲೆ ಪ್ರೀತಿಯ ಧಾರೆಯನ್ನೇ ಎರೆಯುತ್ತಿದ್ದಾಳೆ.

ತುಂಬಾ ದಿನಗಳಿಂದ ಗೌತಮ್-ಭೂಮಿಕಾ ರೋಮ್ಯಾನ್ಸ್ ನೋಡದೆ ಬೇಸರವಾಗಿದ್ದ ವೀಕ್ಷಕರು ಈಗ "ನಮ್ಮ ಗೌತಮ್ ದಿವಾನ್-ಭೂಮಿ ಹೀಗೆ ಇರಲಪ್ಪಾ" ಅಂದುಕೊಳ್ಳುತ್ತಿದ್ದಾರೆ. ಆದರೆ ನೀವು ದಿನನಿತ್ಯ ಧಾರವಾಹಿ ವೀಕ್ಷಿಸುತ್ತಿದ್ದರೆ ನಿಮಗಿಲ್ಲೊಂದು ಬದಲಾವಣೆ ಕಾಣಿಸುತ್ತದೆ.

ಅದೇನಪ್ಪಾ ಅಂದ್ರೆ ಗೌತಮ್‌ನಿಂದ ಇಷ್ಟು ದಿನ ದೂರವಾಗಿದ್ದ ಭೂಮಿ ಕಣ್ಣಿಗೆ ಕನ್ನಡಕ ಧರಿಸಿ, ಜುಟ್ಟು ಹಾಕಿ, ಕಾಟನ್ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಇಂತಿಪ್ಪ, ಈಗ ಗೌತಮ್ ಸಿಕ್ಕ ಮೇಲೆ ಭೂಮಿಕಾ ಫುಲ್ ಬದಲಾಗಿದ್ದಾಳೆ. ಭೂಮಿಕಾ ಬದಲಾಗಿರುವುದು ವೀಕ್ಷಕರಿಗೂ ಖುಷಿ ಕೊಟ್ಟಿದೆ.

ಯೆಸ್ ಭೂಮಿಕಾ ಈಗ ಮೊದಲಿನ ಹಾಗೆ ಲವಲವಿಕೆಯಿಂದ ಇದ್ದಾಳೆ. ಅಷ್ಟೇ ಅಲ್ಲ, ತುಂಬು ಜಡೆ ಹಾಕಿ, ಕೈ ತುಂಬಾ ಬಳೆ ಧರಿಸಿ, ಸಾದಾಸೀದ ಕಲರ್‌ಫುಲ್ ಸೀರೆ ಹಾಕಿ ಲಕ್ಷಣವಾಗಿ ಕಾಣಿಸುತ್ತಿದ್ದಾಳೆ.

ಸದ್ಯದಲ್ಲೇ ಧಾರಾವಾಹಿಯಲ್ಲಿ ಗೌತಮ್-ಜೈದೇವ್‌ ಮಧ್ಯೆ ಜಟಾಪಟಿ ನಡೆಯುವ ಹಾಗೆ ಕಾಣುತ್ತಿದೆ. ಹಾಗೆಯೇ ಎಲ್ಲಾ ಆಸ್ತಿ ಗೌತಮ್ ಸೇರುವ ಹಾಗೆ ಕಾಣುತ್ತಿದೆ. ಆದರೆ ಜೈದೇವ್‌ ಅಮ್ಮ ಅಂದ್ರೆ ಶಕುಂತಲಾ ಅಷ್ಟು ಸುಲಭಕ್ಕೆ ಬಿಟ್ಟುಕೊಡಬೇಕಲ್ಲಾ?.

ಮತ್ತೆ ಕೆಲವರು ಈ ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದೆ. ಎಳೆಯುವುದಕ್ಕೆ ಏನು ಇಲ್ಲ. ಹೇಗಿದ್ದರೂ ಹೊಸ ಧಾರಾವಾಹಿ ಬೇರೆ ಬರುತ್ತಿದೆ ಎನ್ನುತ್ತಿದ್ದಾರೆ. ಆದರೆ ನಿರ್ದೇಶಕರು ಮುಂದಿನ ದಿನಗಳಲ್ಲಿ ಧಾರಾವಾಹಿಯನ್ನ ಯಾವ ರೀತಿ ಟ್ವಿಸ್ಟ್ ಕೊಟ್ಟು ಮುಂದುವರೆಸುತ್ತಾರೆ ಎಂಬುದುನ್ನು ನಾವು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *