ನವದೆಹಲಿ, ಫೆಬ್ರುವರಿ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI ತಂತ್ರಜ್ಞಾನ) ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಟೆಕ್ನಾಲಜಿಯ ಮುಂದುವರಿದ ಭಾಗವಾಗಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅಥವಾ ಎಜಿಐ ಅನ್ನು ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಎಜಿಐ ಸಿದ್ಧವಾಯಿತೆಂದರೆ ಯಂತ್ರದ ಬುದ್ಧಿಮತ್ತೆಯು ಮನುಷ್ಯರನ್ನು ಮೀರಿ ಬೆಳೆಯುತ್ತದೆ. ಮನುಷ್ಯರ ಎಲ್ಲಾ ಕೆಲಸಗಳನ್ನೂ ಯಂತ್ರಗಳು ಮಾಡಬಲ್ಲವು. ಆದರೆ, ಇಂಥದ್ದೊಂದು ಸ್ಥಿತಿ ಯಾವಾಗ ಬರುತ್ತೆ? ಅಮೆರಿಕದ ಲೂಯಿಸ್ ವಿಲೆ ಯೂನಿವರ್ಸಿಟಿಯ ಪ್ರೊಫೆಸರ್ ಹಾಗೂ ಕಂಪ್ಯೂಟರ್ ನವೀನ ಡಾ. ರೋಮನ್ ಯಾಂಪೋಲ್ಸ್ಕಿ (ಡಾ. ರೋಮನ್ ಯಾಂಪೋಲ್ಸ್ಕಿ) ಅವರ ಪ್ರಕಾರ ಮುಂದಿನ ವರ್ಷವೇ ಎಜಿಐ ಬಂದುಬಿಡಬಹುದು.
ದಿ ಡೈರಿ ಆಫ್ ಎ ಸಿಐಒ ಪೋಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಿದ್ದ ಡಾ. ಯಾಂಪೋಲ್ಸ್ಕಿ ಅವರು, 2027ರಲ್ಲೇ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಆಗಮನ ಆಗಬಹುದು. ಎಲ್ಲಾ ಉದ್ಯಮದಲ್ಲಿ ಸಾಲಾಗಿ ಉದ್ಯೋಗಗಳು ಇನ್ನಿಲ್ಲದಂತಾಗಬಹುದು ಭಯಾನಕ ಸಂಗತಿಯನ್ನು ಈ ಕಂಪ್ಯೂಟರ್ ವೀಕ್ಷಿಸಬಹುದು.
ಇದನ್ನೂ ಓದಿ: ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂತ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?
ಈಗಿರುವ ಸಾಮಾನ್ಯ ಐ ಮಾಡಲ್ಗಳೇ ಈಗಿರುವ ಮನುಷ್ಯರ ಶೇ. 60ರಷ್ಟು ಕೆಲಸಗಳನ್ನು ಮಾಡಬಲ್ಲವು. ಮನುಷ್ಯರಿಗೆ ಮಾಡಲು ಸಾಧ್ಯವಿರುವ ಎಲ್ಲಾ ಕೆಲಸವನ್ನೂ ಎಜಿಐ ಮಾಡಬಲ್ಲದು. ಎಜಿಐಡಿ ಇಟ್ಟ ಬಳಿಕ ಐದು ವರ್ಷದ ಶೇ. 99ರಷ್ಟು ಕೆಲಸಗಳೇ ಇಲ್ಲವಾಗುತ್ತವಂತೆ.
ಡಾ. ರೋಮನ್ ಯಾಂಪೋಲ್ಸ್ ಕಿ ಅವರು ಐ ಸುರಕ್ಷತೆ ಮತ್ತು ಅಪಾಯದ ಕುರಿತು 100ಕ್ಕೂ ಹೆಚ್ಚು ಸಂಶೋಧನೆ ಪ್ರಬಂಧಗಳನ್ನು ಬರೆದು ಮುದ್ರಿಸಿದ್ದಾರೆ. ಅವರ ಪ್ರಕಾರ, ಆಟೋಮೇಶನ್ ಸಾಧ್ಯವೇ ಇಲ್ಲದ ವೃತ್ತಿ ಯಾವುದೂ ಇಲ್ಲ. ಈ ಹಿಂದೆ ತಂತ್ರಜ್ಞಾನ ಆವಿಷ್ಕಾರಗಳ ಅಳವಡಿಕೆಗೆ ಮನುಷ್ಯರ ನೆರವು ಬೇಕಾಗಿತ್ತು. ಆದರೆ, ಈಗ ಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಬಹಳ ದಟ್ಟವಾಗಿದೆ ಇವರ ಅನಿಸಿಕೆ.
ಕಂಪ್ಯೂಟರ್ ಆಧಾರಿತ ಉದ್ಯೋಗಗಳು ಮೊದಲು ನಾಶವಾಗುತ್ತವೆ. ಕಾರ್ಮಿಕರ ಕೆಲಸಗಳು ಹೋಗುತ್ತವೆ. 2030ರೊಳಗೆ ಮನುಷ್ಯರ ಬಗ್ಗೆ ಎಲ್ಲಾ ದೈಹಿಕ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆ.
ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್ ನಿಂದ ಎಐ ಸಂಚಲನ; ಈ ಕಂಪನಿಯ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?
ಈ ಕೆಲವು ಕೆಲಸಗಳು ಉಳಿದುಕೊಳ್ಳಬಹುದು
ಡಾ. ರೋಮನ್ ಯಾಂಪೋಲ್ಸ್ಕಿ ಪ್ರಕಾರ ಎಜಿಐ ಆರ್ಭಟದ ಮಧ್ಯೆ ಮನುಷ್ಯರಿಗೆ ಕೆಲವು ಕೆಲಸಗಳು ಉಳಿದುಕೊಳ್ಳಬಹುದು. ಶ್ರೀಮಂತರಿಗೆ ಸಹಾಯಕರು ಬೇಕಾಗಬಹುದು; ವೈಯಕ್ತಿಕ ಕಾಳಜಿ, ಬಯಸುವ ಕೆಲಸಗಳು; ಎಐ ಸಿಸ್ಟಂಗಳನ್ನು ಗಮನಿಸಬಲ್ಲ ತಜ್ಞರು; ಕಂಪನಿಗಳಿಗೆ ಎ ಅಳವಡಿಕೆ ಮಾಡಲು ಸಹಾಯ ಮಾಡುವ ಅಧಿಕಾರಿಗಳು, ಈ ಕೆಲಸಗಳು ಮಾತ್ರ ಚಾಲನೆಯಲ್ಲಿ ಇರಬಹುದು ಎಂದು ಯಾಂಪೋಲ್ಸ್ಕಿ ಭವಿಷ್ಯ ನುಡಿದಿದ್ದಾರೆ.
ಉದ್ಯೋಗ ಇಲ್ಲವೆಂದರೆ ಮನುಷ್ಯರಿಗೆ ಹಣ ಎಲ್ಲಿಂದ?
ಪ್ರತಿಯೊಂದು ಕೆಲಸವನ್ನೂ ಯಂತ್ರಗಳೇ ಮಾಡುವುದರಿಂದ ಮನುಷ್ಯರಿಗೆ ಕೆಲಸ ಇರಲ್ಲ. ಜೊತೆಗೆ ಉತ್ಪಾದನೆಯೂ ಕೂಡ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ. ಕಡಿಮೆ ಗರಿಷ್ಠ ಉತ್ಪಾದನಾ ವೆಚ್ಚ ಇರುತ್ತದೆ. ಇದರ ಫಲ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದರೆ ಯಾರಿಗೂ ಕೂಡ ಯಾವುದರ ಕೊರತೆಯಾಗದು. ವಿಶ್ವದಲ್ಲಿ ಯೂನಿವರ್ಸಲ್ ಬೇಸಿಕ್ ಇನ್ಕಮ್ನಂತಹ ವ್ಯವಸ್ಥೆ ಬರಬಹುದು. ಇಲಾನ್ ಮಾಸ್ಕ್ ಅವರು ಬಾರಿ ಬಾರಿ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ