ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?


ನವದೆಹಲಿ, ಫೆಬ್ರುವರಿ 16: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ದಿನೇ ದಿನೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಮನುಷ್ಯರ ಉದ್ಯೋಗಗಳು ಇಲ್ಲ ಎಂದು ಅನೇಕ ಟೆಕ್ ಪಂಡಿತರು ಹೇಳುತ್ತಿದ್ದಾರೆ. ಅಮೆರಿಕದಲ್ಲಿ ಹೆಸರಾಂತ ಉದ್ಯಮಿ ಮತ್ತು ಹೂಡಿಕೆದಾರರು ಭಾರತ ಮೂಲದ ವಿನೋದ್ ಖೋಸ್ಲಾ (ವಿನೋದ್ ಖೋಸ್ಲಾ) ಕೂಡ ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಇವರ ಪ್ರಕಾರ ಮುಂದಿನ ಐದು ವರ್ಷದ ಐಟಿ ಸರ್ವಿಸ್ ಮತ್ತು ಬಿಪಿಯೊ ಕೆಲಸಗಳು ಪೂರ್ಣವಾಗಿ ಕಾಣೆಯಾಗುತ್ತವೆ.

‘ಐಟಿ ಮತ್ತು ಬಿಪಿಯೋ ಸೇವೆಗಳು ಮುಂದಿನ ಐದು ವರ್ಷದಲ್ಲಿ ಮರೆಯಾಗುವುದು ಖಚಿತ. ಆ ನಂತರದ ಐದು ವರ್ಷದ ಎಲ್ಲಾ ಕೆಲಸ ಮತ್ತು ಎಲ್ಲಾ ವಿಷಯಗಳಲ್ಲಿ ಮನುಷ್ಯರಿಗಿಂತ ಎಐ ಉತ್ತಮ ಎನಿಸುತ್ತದೆ. ಯಂತ್ರಕ್ಕಿಂತ ಮನುಷ್ಯ ಚೆನ್ನಾಗಿ ಕೆಲಸ ಮಾಡುತ್ತಾನೆ ಎಂದು ಹೇಳಲು ಹೆಚ್ಚೇನೂ ಇರದು’ ಎಂದು ಸನ್ ಮೈಕ್ರೋಸಿಸ್ಟಮ್ಸ್ ನ ಸಹ-ಸಂಸ್ಥಾಪಕರಾದ ಖೋಸ್ಲಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: AI ಇಂಪ್ಯಾಕ್ಟ್ ಶೃಂಗಸಭೆ: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

‘ಎಐ ಏಜೆಂಟ್‌ಗಳು ಅಕೌಂಟಿಂಗ್ ಮಾಡಬಲ್ಲವು. ಮಾನವ ಅಕೌಂಟೆಂಟ್ ಈ ಯಂತ್ರಗಳಿಗೆ ಕ್ಷಮತೆ ಹೆಚ್ಚು. ಎಐ ಏಜೆಂಟ್ ಒಬ್ಬ ವೈದ್ಯನಾಗಬಹುದು, ಕ್ಯಾನ್ಸರ್ ರೋಗ ತಗುಲಬಹುದು, ಮಾನಸಿಕ ಚಿಕಿತ್ಸಕನಾಗಬಹುದು. ಇವತ್ತು 25 ವರ್ಷದ ವಯಸ್ಸಿನವರು 40 ರ ಪ್ರಾಯಕ್ಕೆ ಬರುವಷ್ಟರಲ್ಲಿ ಭೂಮಿಯ ಮೇಲೆ ಬಹಳ ಕಡಿಮೆ ಉದ್ಯೋಗಗಳನ್ನು ಹೊಂದಿದ್ದಾರೆ’ ಎಂದು ಹೇಳುವ ವಿನೋದ್ ಖೋಸ್ಲಾ, ಆಟೋಮೆಷನ್ ಬಳಿಕ ಭೌತಿಕ ರೋಬೋಟಿಕ್ ಕಾರ್ಮಿಕರ ಆಗಮನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಎಐ ಸೆಕ್ಟರ್‌ನಲ್ಲಿ ಭಾರತಕ್ಕೇನಿದೆ ಅವಕಾಶ?

ಭಾರತ ಐಟಿ ಸರ್ವಿಸ್ ಮೇಲೆ ಅವಲಂಬಿತವಾದಂತಹ ದೇಶ. ಈಗ ಎಐ ಬಂದು ಐಟಿ ಸೆಕ್ಟರ್ ದೊಡ್ಡ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವಂತಿದೆ. ಈ ಪರಿಸ್ಥಿತಿಯಲ್ಲಿ ಭಾರತವೇನು ಮಾಡಬೇಕು? ವಿನೋದ್ ಖೋಸ್ಲಾ ಅವರು ಐಐ ಅಧಾರಿತ ಉತ್ಪನ್ನ ಮತ್ತು ಸೇವೆಗಳನ್ನು ಜಗತ್ತಿಗೆ ರಫ್ತು ಮಾಡಬೇಕು ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬ ಭಾರತೀಯನಿಗೂ ಖರ್ಚಿಲ್ಲದೇ ವೈದ್ಯರ ಸೇವೆ ನೀಡಬಹುದು. ಪ್ರತೀ ಮಗುವಿಗೂ ಎಐನಿಂದ ಪಾಠ ಮಾಡಬಹುದಾಗಿದೆ. ಪ್ರತಿಯೊಬ್ಬರಿಗೂ ವಕೀಲರ ಸೇವೆ ಸಿಗುವಂತೆ ಮಾಡಬಹುದು’ ಎಂದು ವಿನೋದ್ ಖೋಸ್ಲಾ ಅವರು ಈ ಐ ಉಪಯುಕ್ತತೆಯ ಅವಕಾಶವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿತಿಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಅಮೆರಿಕ ಮತ್ತು ಚೀನಾದ ಪ್ರಾಬಲ್ಯದಿಂದ ತಪ್ಪಿಸಿಕೊಳ್ಳುವ ಭಾರತವು ತನ್ನದೇ ಆದ ಎಐ ಮಾಡಲ್‌ಗಳನ್ನು ಅಭಿವೃದ್ದಿಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ವಿನೋದ್ ಖೋಸ್ಲಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಭಾಗವಹಿಸುತ್ತಿದ್ದಾರೆ. ಖೋಸ್ಲಾ ಸಲಹೆ ಕೊಟ್ಟಿರುವ ರೀತಿಯಲ್ಲಿ ಭಾರತ ಸರ್ಕಾರ ಕೂಡ ಸಾರ್ವಭೌಮವಾದ ಎಐ ಮಾದರಿಗಳನ್ನು ಸ್ಥಾಪಿಸುತ್ತಿದೆ. ಐ ಪ್ರಾಡಕ್ಟ್ ಮತ್ತು ಸೇವೆಗಳನ್ನು ನಿರ್ಮಿಸಿ ಜಗತ್ತಿಗೆ ಕೊಡಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *