Headlines

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?


ನವದೆಹಲಿ, ಫೆಬ್ರುವರಿ 16: ಈ ಬಾರಿಯ ಎಐ ಇಂಪ್ಯಾಕ್ಟ್ ಸಭೆಗೆ (ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ) ಭಾರತ ಆತಿಥ್ಯ ವಹಿಸಿದೆ. ಇದು ನಾಲ್ಕನೇ ಎಐ ಸಭೆಯಾಗಿದೆ. 2023ರಲ್ಲಿ ಬ್ರಿಟನ್‌ನಲ್ಲಿ ಮೊದಲ ಎಐ ಇಂಪ್ಯಾಕ್ಟ್ ಸಭೆ ನಡೆಯಿತು. ನಂತರದ ವರ್ಷಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಶೃಂಗಸಭೆಗಳು ನಡೆದಿವೆ. ಈ ಬಾರಿಯ ಐ ಸಮಿತ್ ಅನ್ನು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಥೀಮ್‌ನಲ್ಲಿ ರೂಪಿಸಲಾಗಿದೆ. ಅಂದರೆ, ಎಲ್ಲರಿಗೂ ಐ ಅಭಿವೃದ್ಧಿಫಲ ಸಿಗಲಿ ಎಂಬುದು ಭಾರತದ ಆಶಯ. ಆ ನಂತರ ಸಮಿಟ್ನ ಕಾರ್ಯಕ್ರಮಗಳು ನಡೆಯಲಿವೆ.

ಕೈಗಾರಿಕಾ ಕ್ರಾಂತಿಯ ನಂತರ ಮಾನವನ ಇತಿಹಾಸದಲ್ಲಿ ಕಂಡ ಅತ್ಯಂತ ಪರಿವರ್ತನಾತ್ಮಕ ಕ್ರಾಂತಿ ಎಂದರೆ ಆರ್ಟಿಫಿಶಿಯಲ್ ಇಂಟೆಲೆಜೆನ್ಸ್ನದ್ದು ಎಂದು ಹೇಳಿದರು. ಔದ್ಯಮಿಕ ಕ್ರಾಂತಿಯಿಂದ ಹೇಗೆ ಜಗತ್ತಿನ ಆರ್ಥಿಕ ಪರಿಭಾಷೆ ಬದಲಾಯಿತೋ, ಅದೇ ಪರಿಣಾಮದಿಂದ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ

ಜಾಗತಿಕ ಎಐ ರೇಸ್‌ನಲ್ಲಿ ಭಾರತದ ಸ್ಥಾನ ಏನು?

ಸ್ಟಾನ್‌ಫೋರ್ಡ್‌ನ ಎಐ ವೈಬ್ರೆನ್ಸಿ ಟೂಲ್ ಪ್ರಕಾರ ಎಐನಲ್ಲಿ ಭಾರತ ಮೂರನೇ ಶ್ರೇಯಾಂಕ ಪಡೆದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನೈಪುಣ್ಯತೆ ಹೊಂದಿರುವ ಅತಿಹೆಚ್ಚು ಮಾನವಸಂಪನ್ಮೂಲ ಹೊಂದಿರುವ ದೇಶಗಳಲ್ಲಿ ಸಿಂಗಾಪುರ ಬಿಟ್ಟರೆ ಭಾರತವೇ ಇರುವುದು. ಎಐ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಎಐನಲ್ಲಿ ಭಾರತ ಒಂದೊಂದೇ ಹೆಜ್ಜೆಗಳನ್ನು ಇರಿಸುತ್ತಿದೆ. ಅಮೆರಿಕ ಮತ್ತು ಚೀನಾ ತೋರುತ್ತಿರುವ ಪ್ರಗತಿಯನ್ನು ಸರಿಗಟ್ಟಲು ಭಾರತಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು ಎಂದು ಪರಿಣಿತರು ಹೇಳುತ್ತಾರೆ. ಅಮೆರಿಕವು ಚಾಟ್‌ಜಿಪಿಟಿ, ಕ್ಲಾಡ್, ಜೆಮಿನೈ ಇತ್ಯಾದಿ ಫೌಂಡೇಶನಲ್ ಮಾಡಲ್‌ಗಳ ಅಭಿವೃದ್ಧಿಯಲ್ಲಿ ಮುಂದಿದೆ. ಚೀನಾ ದೇಶವು ಅಗ್ಗದ ಬೆಲೆಗೆ ಎಐ ಸಿಗುವಂತೆ ಮಾಡುತ್ತಿದೆ. ಭಾರತವು ತನ್ನದೇ ಆದ ಸಾವರಿನ್ ಐ ಮಾಡಲ್ಗಳನ್ನು ಬೆಳೆಸಲು ಗುರುತರವಾದ ಯೋಜನೆಗಳನ್ನು ಹಾಕಿದೆ.

ಇದನ್ನೂ ಓದಿ: ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು

ಎಐ ಇಂಪ್ಯಾಕ್ಟ್ ಸಮಿತಿಯಲ್ಲಿ ಭಾರತಕ್ಕೇನು ಲಾಭ?

ಐ ವಿಚಾರದಲ್ಲಿ ಭಾರತ ಗಂಭೀರವಾಗಿರುವುದನ್ನು ಜಗತ್ತಿನ ಟೆಕ್ ನಾಯಕರು ಗಮನಿಸಲಿದ್ದಾರೆ. ಭಾರತ ಹಾಗೂ ಭಾರತೀಯ ಕಂಪನಿಗಳ ಜೊತೆ ಟೆಕ್ ದೈತ್ಯರು ಹೊಂದಾಣಿಕೆ ಮಾಡಿಕೊಂಡು ಐ ಅಭಿವೃದ್ಧಿಗೆ ಮುಂದಾಗಬಹುದು. ಈ ಸಮಿಟ್ ವೇಳೆ ಡಾಟಾ ಸೆಂಟರ್ ಹಾಗೂ ಸಂಬಂಧಿತ ಯೋಜನೆಗಳ ಘೋಷಣೆ ಆಗಬಹುದು.

ಸರ್ಕಾರಿ ಬೆಂಬಲಿತ EI ಕಂಪ್ಯೂಟ್ ಮಾಡಲ್ ಅಥವಾ ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ಸರ್ವಿಸ್ ಆಗಿ ಇತರ ದೇಶಗಳಿಗೆ ಆಫರ್ ಮಾಡಬಹುದಾಗಿದೆ. ಐ ಸ್ಟ್ಯಾಕ್ ನಿರ್ಮಿಸುವ ಭಾರತದ ಪ್ರಯತ್ನಗಳಿಗೆ ಜಾಗತಿಕ ಕಂಪನಿಗಳು ಬೆಂಬಲ ನೀಡಬಹುದು. ಭಾರತದ ಐ ಸ್ಟಾರ್ಟ್ಯಾಪ್‌ಗಳಿಗೆ ಜಾಗತಿಕ ಬಂಡವಾಳ ಸಿಗಲು ಸಾಧ್ಯವಾಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *