ನವದೆಹಲಿ, ಫೆಬ್ರುವರಿ 16: ರಾಷ್ಟ್ರ ರಾಜಧಾನಿ ಭಾರತ್ ಮಂಟಪದಲ್ಲಿ ಇವತ್ತಿನಿಂದ ಐದು ದಿನಗಳ ಕಾಲ ನಡೆಯುವ ಎಐ ಇಂಪ್ಯಾಕ್ಟ್ ಶೃಂಗಸಭೆ (ಎಐ ಇಂಪ್ಯಾಕ್ಟ್ ಸಮ್ಮಿಟ್ 2026) ಜಾಗತಿಕ ನೇತಾರರು, ನಿಯೋಗಗಳು, ಉದ್ಯಮ ಪ್ರಮುಖ ಅತಿಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಶೃಂಗಸಭೆಯ ಧ್ಯೇಯವಾಕ್ಯವಾದ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಆಶಯದಂತೆ ಈ ಐ ಸಭೆಯು ಸರ್ವರಿಗೂ ಒಳಿತಾಗುವ ಪ್ರಗತಿದಾಯಕ ಭವಿಷ್ಯಕ್ಕೆ ನಾಂದಿ ಹಾಡಬಲ್ಲದು ಎಂದು ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕೃತಕ ಬುದ್ಧಿಮತ್ತೆಯನ್ನು ಚರ್ಚಿಸಲು ಜಗತ್ತನ್ನು ಒಟ್ಟಿಗೆ ಸೇರಿಸಬಹುದು. ಇವತ್ತಿನಿಂದ ದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಆಯೋಜನೆಯಾಗುತ್ತಿದೆ. ಜಗತ್ತಿನಾದ್ಯಂತ ವಿಶ್ವ ನಾಯಕರು, ಉದ್ಯಮದ ನೇತಾರರು, ಇನ್ನೋವೇಟರ್ಗಳು, ನೀತಿ ರೂಪಕರು, ಸಂಶೋಧಕರು, ತಂತ್ರಜ್ಞಾನ ಆಸಕ್ತರನ್ನು ಈ ಸಮಿತಿಗೆ ಸ್ವಾಗತಿಸುತ್ತೇನೆ. ಸರ್ವಜನ ಹಿತಾಯ, ಸರ್ವಜನ ಸುಖಾಯ ಎಬುದು ಈ ಸಮಾವೇಶದ ಥೀಮ್ ಆಗಿದೆ. ಮಾನವ ಕೇಂದ್ರಿತವಾದ ಪ್ರಗತಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಬೇಕೆನ್ನುವ ನಮ್ಮ ಬದ್ಧತೆಯನ್ನು ಈ ಶೃಂಗಸಭೆ ಪ್ರತಿಬಿಂಬಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು
ಶಿಕ್ಷಣ, ಹೆಲ್ತ್ಕೇರ್, ಕೃಷಿ ಮತ್ತು ಉದ್ದಿಮೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಐನಿಂದ ಪರಿವರ್ತನೆ ಆಗುತ್ತಿದೆ. ನಾವೀನ್ಯತೆ, ಸಹಭಾಗಿತ್ವ, ಜವಾಬ್ದಾರಿಯುತ ಬಳಕೆಯಿಂದ ವಿವಿಧ ಅಂಶಗಳಲ್ಲಿ ಜಾಗತಿಕ ವಿಚಾರ ವಿನಿಮಯವಾಗಲು ಈ ಶೃಂಗಸಭೆ ವೇದಿಕೆ ಆಗುತ್ತಿದೆ. ಪ್ರಗತಿದಾಯಕವಾದ, ನಾವೀನ್ಯತೆಯು ಮತ್ತು ಅವಕಾಶದ ಭವಿಷ್ಯವನ್ನು ರೂಪಿಸಲು ಈ ಶೃಂಗಸಭೆಯು ಸಹಾಯವಾಗಬಹುದೆಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
140 ಕೋಟಿ ಜನರಿಂದಾಗಿ ಭಾರತವು ಈ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಡಿಜಿಟಲ್ ಪಬ್ಲಿಕ್ ಪಬ್ಲಿಕ್ ಫ್ರಾಸ್ಟ್ರಕ್ಚರ್ ನಿಂದ ಹಿಡಿದು ಉತ್ತಮ ಸ್ಟಾರ್ಟಪ್ ಇಕೋಸಿಸ್ಟಂ ಮತ್ತು ಅತ್ಯಾಧುನಿಕ ಸಂಶೋಧನೆಯವರೆಗೂ ಎಐನಲ್ಲಿ ತೋರುತ್ತಿರುವ ಪ್ರಗತಿಯು ನಮ್ಮ ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿಯು ನಮ್ಮಲ್ಲಿ ಪ್ರತಿಫಲಿಸುತ್ತದೆ ಮತ್ತು ಮೋದಿ ಅವರ ಸರಣಿ ಟ್ವೀಟ್‌ಗಳಲ್ಲಿ ಭಾಗವಹಿಸುತ್ತದೆ.
ನರೇಂದ್ರ ಮೋದಿ ಅವರ ಸರಣಿ ಟ್ವೀಟ್‌ಗಳು
AI ಕುರಿತು ಚರ್ಚಿಸಲು ಜಗತ್ತನ್ನು ಒಟ್ಟಿಗೆ ತರುವುದು!
ಇಂದಿನಿಂದ, ಭಾರತವು ದೆಹಲಿಯ ಭಾರತ ಮಂಟಪದಲ್ಲಿ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸುತ್ತದೆ. ಈ ಶೃಂಗಸಭೆಗೆ ಪ್ರಪಂಚದಾದ್ಯಂತದ ವಿಶ್ವ ನಾಯಕರು, ಉದ್ಯಮದ ನಾಯಕರು, ನಾವೀನ್ಯಕಾರರು, ನೀತಿ ನಿರೂಪಕರು, ಸಂಶೋಧಕರು ಮತ್ತು ತಂತ್ರಜ್ಞಾನ ಉತ್ಸಾಹಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ದಿ…
– ನರೇಂದ್ರ ಮೋದಿ (@narendramodi) ಫೆಬ್ರವರಿ 16, 2026
ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್
ಫೆಬ್ರುವರಿ 20ರವರೆಗೂ ನಡೆಯಲಿರುವ ಈ ಶೃಂಗಸಭೆಯಲ್ಲಿ ಜಗತ್ತಿನ ಟೆಕ್ ದೈತ್ಯರು ಭಾಗವಹಿಸುತ್ತಿದ್ದಾರೆ. ಸುಂದರ್ ಪಿಚೈ, ಸ್ಯಾಮ್ ಆಲ್ಟ್‌ಮ್ಯಾನ್, ಡೇರಿಯೊ ಅಮೊಡೆ, ಡೆಮಿಸ್ ಹಸಾಬಿಸ್, ಬಿಲ್ ಗೇಟ್ಸ್, ಯಾನ್ ಲೇಕುನ್, ಯೊಶುವಾ ಬೆಂಗಿಯೋ, ಬ್ರಾಡ್ ಸ್ಮಿತ್ ಮೊದಲಾದವರ ಉಪಸ್ಥಿತಿ ಇರುತ್ತದೆ.
ಎರಡು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮಕ್ಕೆ ನೊಂದಾಯಿಸಿದ್ದಾರೆ. ವಿವಿಧ ಐ ಆವಿಷ್ಕಾರಗಳ ಪ್ರದರ್ಶನಗಳು, ಸುಮಾರು 300 ಪೆವಿಲಿಯನ್‌ಗಳು, ಲೈವ್ ಡೆಮಾನ್ಸ್ ಟ್ರೇಶನ್‌ಗಳು, ಚರ್ಚೆಗಳು, ವಿಚಾರ ಮಂಡನೆ ಇತ್ಯಾದಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಈ ಐದು ದಿನದಲ್ಲಿ ಕಾಣಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ