Headlines

ಒಂದೇ ಫ್ರೇಮ್​ನಲ್ಲಿ ಸ್ಟಾರ್​ ನಟರ ಯುಗಾದಿ ವಿಷ್​: ರಾಜ್​, ಅಪ್ಪು, ವಿಷ್ಣು, ಅಂಬಿ ​ಕಂಡು ಫ್ಯಾನ್ಸ್​ ಪುಳಕ- AI Video Viral

ಒಂದೇ ಫ್ರೇಮ್​ನಲ್ಲಿ ಸ್ಟಾರ್​ ನಟರ ಯುಗಾದಿ ವಿಷ್​: ರಾಜ್​, ಅಪ್ಪು, ವಿಷ್ಣು, ಅಂಬಿ ​ಕಂಡು ಫ್ಯಾನ್ಸ್​ ಪುಳಕ- AI Video Viral

ಒಂದೇ ಫ್ರೇಮ್​ನಲ್ಲಿ ಸ್ಟಾರ್​ ನಟರ ಯುಗಾದಿ ವಿಷ್​: ರಾಜ್​, ಅಪ್ಪು, ವಿಷ್ಣು, ಅಂಬಿ ​ಕಂಡು ಫ್ಯಾನ್ಸ್​ ಪುಳಕ- AI Video Viral
ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಯುಗಾದಿ ಹಬ್ಬದಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರಿಂದ ಹಿಡಿದು ಯಶ್, ದರ್ಶನ್, ಸುದೀಪ್‌ರಂತಹ ಇಂದಿನ ನಟರವರೆಗೆ ಎಲ್ಲರನ್ನೂ ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ತರಲಾಗಿದೆ.
ಹೇಳಿ ಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಸತ್ತವರನ್ನೂ ಬದುಕಿಸಬಲ್ಲ, ಎಲ್ಲೋ ಇರುವವರನ್ನು ತಂದು ನಿಲ್ಲಿಸುವ, ದೂರ ದೂರ ಇದ್ದವರನ್ನು ಒಟ್ಟಿಗೇ ಮಾಡಿ ಖುಷಿಪಡಿಸುವ ತಾಕತ್ತು ಇರುವುದು ಈ ಎಐಗೆ ಮಾತ್ರ.

ಸೋಷಿಯಲ್ ಮೀಡಿಯಾದಲ್ಲಿ ಇಂಥ ಹಲವಾರು ವಿಡಿಯೋಗಳನ್ನು ನೋಡಬಹುದು. ಎಐನಿಂದ ಅದೆಷ್ಟೋ ಉದ್ಯೋಗಿಗಳು ಕೆಲಸ ಇಲ್ಲದೇ ಮನೆಗೆ ಹೋಗಬೇಕಾದ ಸ್ಥಿತಿ ಒಂದೆಡೆ ಇದ್ದರೆ, ಇದೇ ಎಐ ಬಳಸಿಕೊಂಡು ತಮ್ಮ ಇಷ್ಟದವರನ್ನು ಕರೆಸಿಕೊಳ್ಳುತ್ತಿದ್ದಾರೆ ಅಭಿಮಾನಿಗಳು.

ಇಂದು ಯುಗಾದಿ. ಯುಗಾದಿ ಹಬ್ಬಕ್ಕೆ ಇದಾಗಲೇ ಸಾಕಷ್ಟು ಸಿನಿಮಾ ತಾರೆಯರು ತಮ್ಮದೇ ಆದ ರೀತಿಯಲ್ಲಿ ವಿಷ್​ ಮಾಡಿದ್ದಾರೆ. ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶುಭಾಶಯ ಸಲ್ಲಿಸಿದ್ದಾರೆ.

ಆದರೆ, ಇದೀಗ ವಿಭಿನ್ನ ಎನ್ನುವ ವಿಡಿಯೋ ವೈರಲ್​ ಆಗುತ್ತಿದೆ. ಇದು ಎಐ ಮೂಲಕ ಮಾಡಿರುವ ವಿಡಿಯೋ ಆಗಿದ್ದು, ಬಹಳಷ್ಟು ಸ್ಟಾರ್​ ನಟರನ್ನು ಇದರಲ್ಲಿ ಒಟ್ಟಿಗೇ ನೋಡಬಹುದಾಗಿದೆ.

ಡಾ.ರಾಜ್​ ಮತ್ತು ಬಾಲಕ ಪುನೀತ್​ ರಾಜ್​ಕುಮಾರ್​ (ಲೋಹಿತ್​)ನನ್ನು ಹಿಡಿದುಕೊಂಡಿರುವುದರಿಂದ ಹಿಡಿದು ಇಂದಿನ ನಟರವರೆಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಪುನೀತ್​ ರಾಜ್​ಕುಮಾರ್, ದರ್ಶನ್​, ಯಶ್​, ಸುದೀಪ್​, ಶಿವರಾಜ್​ ಕುಮಾರ್​, ರಿಷಬ್ ಶೆಟ್ಟಿ, ಉಪೇಂದ್ರ, ವಿಷ್ಣುವರ್ಧನ್​, ಅಂಬರೀಷ್​, ರಾಜ್​ ಬಿ.ಶೆಟ್ಟಿ ಸೇರಿದಂತೆ ಹಲವರನ್ನು ಒಂದೇ ಫ್ರೇಮ್​ನಲ್ಲಿ ನೋಡಬಹುದಾಗಿದೆ. siddarth_edits38 ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

Source link

Leave a Reply

Your email address will not be published. Required fields are marked *