
ಇನ್ನು ನಟಿಯ ಕುರಿತು ಹೇಳುವುದಾದರೆ, ಬಿಗ್ಬಾಸ್ ಕನ್ನಡ 11ರ ಪಯಣದ ಕುರಿತು ಹೇಳುವುದಾದರೆ, ಉತ್ತಮ ರೀತಿಯಲ್ಲಿ ಭಾವಪೂರ್ಣವಾಗಿ ಅಷ್ಟೇ ಭಾವುಕ ಎನ್ನಿಸುವಂತೆ ಮನೆಯಿಂದ ಹೊರಕ್ಕೆ ಬಂದವರು ಐಶ್ವರ್ಯಾ ಸಿಂಧೋಗಿ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಗುಡ್ಬೈ ಹೇಳಿದ್ದ ದೃಶ್ಯ ಕೆಲ ಕಾಲ ಮನೆಯಲ್ಲಿ ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ‘ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು.