ಪುಣೆ, ಜನವರಿ 28: ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದ ಬಳಿ ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಉಪಮುಖ್ಯಮಂತ್ರಿ ಹಾಗೂ ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ (ಅಜಿತ್ ಪವಾರ್) ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಮೇಲೊಬ್ಬರು ಗುರುತಾದವರು. ಮೂರು ಕಾಲ ನಿರಂತರವಾಗಿ ಶಾಸಕರಾಗಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಉಪಮುಖ್ಯಮಂತ್ರಿಯಾದ ದಾಖಲೆ ಹೊಂದಿರುವ ಅಜಿತ್ ಪವಾರ್ ಬಹಳ ಅನುಭವಿ ರಾಜಕಾರಣಿ ಎನಿಸಿದ್ದರು. ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಯಾರೂ ಹೇಳಿಲ್ಲ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ 2024) ವೇಳೆ ಅವರು ಎಲೆಕ್ಷನ್ ಕಮಿಷನ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 124 ಕೋಟಿ ರೂ ಮೌಲ್ಯದ ಆಸ್ತಿಪಾಸ್ತಿ ವರದಿಯಾಗಿದೆ. ಇದು ಅವರ ಹಾಗೂ ಅವರ ಪತ್ನಿ ಸುನೇತ್ರಾ ಪವಾರ್ ಅವರಿಬ್ಬರದ್ದೂ ಸೇರಿ ಇರುವ ಆಸ್ತಿ.
ಅಜಿತ್ ಪವಾರ್ ಅವರ ಘೋಷಿತ ಆಸ್ತಿ ಮತ್ತು ಮೌಲ್ಯ
- ಚರಾಸ್ತಿ: 8.22 ಕೋಟಿ ರೂ
- ಸ್ಥಿರಾಸ್ತಿ: 37.15 ಕೋಟಿ ರೂ
ಸುನೇತ್ರಾ ಪವಾರ್ ಅವರ ಘೋಷಿತ ಆಸ್ತಿಗಳು
- ಚರಾಸ್ತಿ: 14.57 ಕೋಟಿ ರೂ
- ಸ್ಥಿರಾಸ್ತಿ: 58.39 ಕೋಟಿ ರೂ
ಇದನ್ನೂ ಓದಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ, ಡಿಸಿಎಂ ಅಜಿತ್ ಪವಾರ್ ಸಾವು
ಅಜಿತ್ ಪವಾರ್ ಅವರ ಚರಾಸ್ತಿಗಳು: 1 ಟೊಯೊಟಾ ಕ್ಯಾಮ್ರಿ ಕಾರು, 1 ಹೊಂಡಾ ಸಿಆರ್‌ವಿ ಕಾರು, 1 ಟ್ರಾಕ್ಟರ್, ಬೆಳ್ಳಿ ವಸ್ತುಗಳು, ಎಫ್‌ಡಿ, ಷೇರು, ಬಾಂಡು ಇತ್ಯಾದಿ.
14.12 ಲಕ್ಷ ರೂ., ವಿವಿಧ ಬ್ಯಾಂಕ್ ಅಕೌಂಟ್‌ಗಳಲ್ಲಿ 6.81 ಕೋಟಿ ರೂ. ಬಾಂಡ್, ಡಿಬಂಚರ್, ಷೇರು ಇತ್ಯಾದಿಗಳಲ್ಲಿ 55 ಲಕ್ಷ ರೂ. ಒಂದು ಕೋಟಿ ರೂಗೂ ಅಧಿಕ ಮೌಲ್ಯದ ಎಲ್ ಐಸಿ ಪಾಲಿಸಿ ಮಾಡಿದರು.
ಅಜಿತ್ ಪವಾರ್ ಪತ್ನಿ ಹಾಗೂ ರಾಜ್ಯ ಸಭಾ ಸದಸ್ಯರಾದ ಸುನೇತ್ರಾ ಪವಾರ್ ಅವರು 44 ಲಕ್ಷ ರೂ ಅಧಿಕ ಮೌಲ್ಯದ ಎಲ್ ಐಸಿ ಪಾಲಿಸಿಗಳನ್ನು ಸೂಚಿಸಿದ್ದಾರೆ. ಸುನೇತ್ರಾ ಹೆಸರಿನಲ್ಲಿ ಸ್ಥಿರಾಸ್ತಿಗಳಿವೆ. ಈ ಇಬ್ಬರ ಹೆಸರಲ್ಲಿ ಇರುವ ಘೋಷಿತ ಆಸ್ತಿಪಾಸ್ತಿಗಳ ಒಟ್ಟು ಮೌಲ್ಯ 124 ಕೋಟಿ ರೂ.
ಅಜಿತ್ ಪವಾರ್ ಅಪಘಾತದಿಂದ ದುರ್ಮರಣ
ಅಜಿತ್ ಪವಾರ್ ಅವರು ಮಹಾರಾಷ್ಟ್ರದ ರಾಜಕೀಯ ಭೀಷ್ಮ ಎಂದು ಕರೆಯಲಾಗುವ ಶರದ್ ಪವಾರ್ ಅವರ ಅಣ್ಣ ಮಗ. 1982ರಲ್ಲಿ ಸಕ್ಕರೆ ಸಹಕಾರ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. 1991ರಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಆ ಬಳಿಕ ಸತತವಾಗಿ ಅದೇ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದರು. ವಿಧಿಯಾಟವೆಂದರೆ, ತಮ್ಮ ಸ್ವಕ್ಷೇತ್ರದಲ್ಲೇ ಅವರು ಸ್ವರ್ಗಸ್ಥರಾಗಿದ್ದಾರೆ.
ಇದನ್ನೂ ಓದಿ: ಲಿಯರ್ ಜೆಟ್ 45 ತುಂಬಾ ಸುರಕ್ಷಿತ ವಿಮಾನ, ಪತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಜ್ಞರು
ಮುಂಬೈನಿಂದ ಬಾರಾಮತಿಗೆ ಚಾರ್ಟರ್ಡ್ ಫ್ಲೈಟ್‌ನಲ್ಲಿ ಆಗಮಿಸಿದ್ದರು. ತಾಂತ್ರಿಕ ದೋಷದಿಂದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಅಜಿತ್ ಪವಾರ್, ಪೈಲಟ್ ಸೇರಿ ಅದರಲ್ಲಿದ್ದ ಎಲ್ಲರೂ ನಿಧನರಾಗಿದ್ದಾರೆ. ಅಜಿತ್ ಪವಾರ್ ತಮ್ಮ ಪತ್ನಿ ಸುನೇತ್ರಾ ಹಾಗೂ ಇಬ್ಬರು ಮಕ್ಕಳಾದ ಪಾರ್ಥ್ ಮತ್ತು ಜಯ್ ಪವಾರ್ ಅವರನ್ನು ಅಗಲಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ