ತಮಿಳು ನಟ ಅಜಿತ್ ಕುಮಾರ್ (ಅಜಿತ್ ಕುಮಾರ್) ಅವರು ಇತ್ತೀಚೆಗೆ ನಟನೆಗಿಂತ ರೇಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ಹೋಗಿ ಕಾರ್ ರೇಸ್ ಅಲ್ಲಿ ಭಾಗಿ ಆಗುತ್ತಿದ್ದಾರೆ. ಈಗ ಅವರ ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಾರೆ. ಅಜಿತ್ ಅವರನ್ನು ನೋಡಲು ಬಂದ ಫ್ಯಾನ್ಸ್ ಮೇಲೆ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.
ಅಜಿತ್ ಕುಮಾರ್ ಅವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಕೂಡ ನೀಡಲಾಗಿದೆ. 2025ರಲ್ಲಿ ಅವರು ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಗೆ ಬಂದವು. ಎರಡೂ ಸಿನಿಮಾಗಳು ಸಾಧಾರಣ ಎನಿಸಿಕೊಂಡವು. ‘ವಿದುಮುಯಾರ್ಚಿ’ ರಿಲೀಸ್ ಆಗಿ ವರ್ಷ ಕಳೆದಿದೆ. ಆದಾಗ್ಯೂ ಅವರು ಹೊಸ ಸಿನಿಮಾ ಘೋಷಣೆ ಆಗಿಲ್ಲ. ಬದಲಿಗೆ ಅವರು ವಿದೇಶದಲ್ಲಿ ಕಾರ್ ರೇಸ್ ಅಲ್ಲಿ ಭಾಗಿ ಆಗುತ್ತಿದ್ದಾರೆ.
ಅಬುಧಾಬಿಯಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಭಾಗಿ ಆಗಿದ್ದರು. ಈ ವೇಳೆ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆಗ ಸಿಟ್ಟಾದ ಅಜಿತ್, ‘ಸರಿಯಾಗಿ ವರ್ತಿಸಿ. ಇದು ಥಿಯೇಟರ್ ಅಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಇದಕ್ಕೆ ಕೋಪ ಬಂದಿದೆ. ‘ಅಭಿಮಾನಿಗಳನ್ನು ಹೀಗೆ ಟ್ರೀಟ್ ಮಾಡಬಾರದು’ ಎಂದು ಖಡಕ್ ಆಗಿಯೇ ಉತ್ತರಿಸಲಾಗಿದೆ.
“ಇದು ಥಿಯೇಟರ್ ಅಲ್ಲ” – ನಟ #ಅಜಿತ್ ಕುಮಾರ್ ಅಬುಧಾಬಿಯಲ್ಲಿ ಅವರ ಅಭಿಮಾನಿಗಳ ವರ್ತನೆಯಿಂದ ಕೋಪಗೊಂಡಿದ್ದಾರೆ. pic.twitter.com/o8SxQbepxM
— ದೀಪು (@deepu_drops) ಫೆಬ್ರವರಿ 10, 2026
ಅಜಿತ್ ಅವರು ಅಭಿಮಾನಿಗಳ ಕೈಗೆ ಸಿಗದೇ ಅದೆಷ್ಟೋ ವರ್ಷಗಳೇ ಕಳೆದಿವೆ. ಅವರು ಸಿನಿಮಾ ಮಾಡಿದ ಬಳಿಕ ಅದರ ಪ್ರಚಾರಕ್ಕೆ ತೆರಳೋದಿಲ್ಲ. ಅಭಿಮಾನಿಗಳ ಜೊತೆ ಸಿನಿಮಾ ನೋಡೋಕೆ ತೆರಳೋದಿಲ್ಲ. ಈ ಎಲ್ಲಾ ಕಾರಣದಿಂದ ಅಜಿತ್ ಅವರು ಕಂಡಾಗ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಆದರೆ, ಇದನ್ನು ಅವರು ಸಹಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ
ಈ ಮೊದಲು ಅಜಿತ್ ಅವರು ಅನೇಕ ಬಾರಿ ಕೋಪವನ್ನು ಹೊರಹಾಕಿದರು. ಅಜಿತ್ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿಲ್ಲ. ಹೀಗಾಗಿ, ಅವರ ಅಭಿಮಾನಿಗಳ ಕೈಗೂ ಸಿಗೋದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:20 am, ಮಂಗಳವಾರ, 10 ಫೆಬ್ರವರಿ 26