ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’

ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’


ಮಕ್ಕಳು ಅಮ್ಮನಿಗಾಗಿ ಏನ್ ಬೇಕಾದರೂ ಮಾಡುತ್ತಾರೆ. ಅದರಲ್ಲೂ ಗಂಡು ಮಕ್ಕಳಿಗೆ ಅಪ್ಪಗಿಂತ ಅಮ್ಮನ ಮೇಲೆ ಪ್ರೀತಿ ಹೆಚ್ಚು. ಇಲ್ಲೊಂದು ವೈರಲ್ ಆಗಿರುವ ವಿಡಿಯೋ ಅಮ್ಮ-ಮಗನ ಪ್ರೀತಿಗೆ ಸಾಕ್ಷಿಯಾಗಿದೆ. ಈ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಕೂಡ ಭಾವನ್ಮಾಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತ ಮೂಲದ ಉದ್ಯಮಿ ಆಕಾಶ್ ಮೆಹ್ತಾ (ಆಕಾಶ್ ಮೆಹ್ತಾ) ಅವರು ತಮ್ಮ ತಾಯಿಯ ಹುಟ್ಟುಹಬ್ಬವನ್ನು ದುಬೈನಲ್ಲಿ ಭಾರೀ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವಿಡಿಯೋದಲ್ಲಿ ಅಮ್ಮನ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಜೊತೆಗೆ ಇದು ಸೋಶಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುವ ಪಾತ್ರವಾಗಿದೆ. ವೀಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 60ನೇ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿರುವ ಅಮ್ಮನಿಗೆ ಶುಭಾಶಯಗಳು, ನಿಮ್ಮ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

“ಅಮ್ಮ ನಿಮ್ಮ ಹುಟ್ಟುಹಬ್ಬದ ಈ ಆಚರಣೆ ಮದುವೆಯಂತೆ ಭಾಸವಾಗಿದೆ. ನೀವು ಪ್ರತಿದಿನ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಗುತ್ತಾ ನೃತ್ಯ ಮಾಡುವುದನ್ನು ನೋಡುತ್ತಿದ್ದರೆ ಕಣ್ತುಂಬಿ ಬಂತು. ತುಂಬಾ ಖುಷಿಯಾಗುತ್ತಿದೆ ಅಮ್ಮ” ಎಂದು ಆಕಾಶ್ ಮೆಹ್ತಾ ಹೇಳಿದರು. ಅವರ ಅಮ್ಮ ಚೇತನಾ ಮೆಹ್ತಾ ಅವರು ಈ ಸಂಭ್ರಮಕ್ಕೆ ಅದ್ದೂರಿಯಾಗಿ ರೆಡಿಯಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ;

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

ಭಾರತೀಯ-ಅಮೇರಿಕನ್ನಟ ಜರ್ನಾ ಗಾರ್ಗ್ ಅವರು ಈ ವಿಡಿಯೋ ನೋಡಿದಿದ್ದಾರೆ. ನಿಮ್ಮ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು, ಹೀಗೆ ಖುಷಿಯಾಗಿ ಇರಿ ಎಂದು ಕಮೆಂಟ್ ಮಾಡಿದ್ದಾರೆ. ನಾನು ಕೂಡ ಈ ವಯಸ್ಸಿಗೆ ಬರುವಾಗ ಹೀಗೆ ಇರಬೇಕು ಎಂಬುದು ನನ್ನ ಆಸೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಚಿಕ್ಕ ಹುಡುಗಿ ಯಾರು, ತುಂಬಾ ಕ್ಯೂಟ್ ಆಗಿ ಕಾಣುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಮೆಹ್ತಾ ಅದು ನನ್ನ ಅಮ್ಮ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಎಂತಹ ಅದ್ಭುತ ಆಚರಣೆ! ಅವರಿಗೆ ನಿಜವಾಗಿಯೂ 60 ವರ್ಷವೇ ಎಂದು ಅಚ್ಚರಿಯಿಂದ ಕೇಳಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ

ಆಕಾಶ್ ಮೆಹ್ತಾ ಯಾರು?

ಆಕಾಶ್ ಮೆಹ್ತಾ ಫೇಬಲ್ & ಮಾನೆ ಕಂಪನಿಯ SIIO ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಇದೆ. 2019 ರಲ್ಲಿ ಫೋರ್ಬ್ಸ್, ಯುರೋಪ್ ಮಾಧ್ಯಮ ಮತ್ತು ಮಾರ್ಕೆಟಿಂಗ್‌ನಲ್ಲಿ ಸೇವೆ ಸಲ್ಲಿಸಲಾಗಿದೆ. ತಮ್ಮ ಸಹೋದರಿ ನಿಕಿತಾ (ನಿಕಿ) ಮೆಹ್ತಾ ಅವರೊಂದಿಗೆ ಒಂದು ಕಂಪನಿಯನ್ನು ಸ್ಥಾಪಿಸಿದರು. ಫೇಬಲ್ ಮತ್ತು ಮಾನೆ ಮಿಲಿಯನ್ ಡಾಲರ್ ಮೌಲ್ಯದ ಆಯುರ್ವೇದ ವೆಲ್ನೆಸ್ ಬ್ರ್ಯಾಂಡ್ ಆಗಿದೆ. ಇನ್ನು ಅವರ ತಾಯಿ ಚೇತನಾ ಮೆಹ್ತಾ ಅವರು, ಶಾಸ್ತ್ರೀಯವಾಗಿ ತರಬೇತಿ ಪಡೆದ ಭಾರತೀಯ ನರ್ತಕಿ ಹಾಗೂ ಪ್ರವಾಸೋದ್ಯಮ ಉದ್ಯಮದಲ್ಲೂ ಕೆಲಸ ಮಾಡಿದ್ದಾರೆ. ಚಿಕಿತ್ಸೆ ಮತ್ತು ಆಧ್ಯಾತ್ಮಿಕ ತರಬೇತಿಯನ್ನು ಕೂಡ ನೀಡಲಾಗುತ್ತಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *