‘ಅಖಂಡ 2’ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…

‘ಅಖಂಡ 2’ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…


ನಂದಮೂರಿ ಬಾಲಕೃಷ್ಣ (ನಂದಮೂರಿ ಬಾಲಕೃಷ್ಣ) ನಟನೆಯ ‘ಅಖಂಡ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆ ಆಗುತ್ತಿದೆ. ಕರ್ನಾಟಕ, ಆಂಧ್ರಗಳಲ್ಲಿ ಇಂದು ಸಿನಿಮಾದ ಪ್ರೀಮಿಯರ್ ಶೋಗಳು ಪ್ರಾರಂಭವಾದ, ಆಂಧ್ರ ಪ್ರದೇಶದ ಪ್ರೀಮಿಯರ್ ಶೋ ಟಿಕೆಟ್ ದರಗಳನ್ನು 600ಕ್ಕೆ ನಿಗದಿಪಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ 1950 ಗರಿಷ್ಠ ದರದಿಂದ ಆರಂಭಿಸಿ, 1000, 900, 700, 600 ಹೀಗೆ ಮನಸೋ ಇಚ್ಛೆ ದರಗಳನ್ನು ನಿಗದಿ ಪಡಿಸಲಾಗಿದೆ. ಆದರೆ ತೆಲಂಗಾಣ ಸರ್ಕಾರ ಡಿಸೆಂಬರ್ 4 ರ ಮಧ್ಯಾಹ್ನದವರೆಗೂ ‘ಅಖಂಡ 2’ ಸಿನಿಮಾದ ಟಿಕೆಟ್ ದರಗಳ ಕುರಿತು ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಕೊನೆಗೂ ಸಂಜೆ ವೇಳೆಗೆ ಅಧಿಕೃತ ಆದೇಶ ಹೊರಬಿದ್ದಿದ್ದು, ಟಿಕೆಟ್ ದರಕ್ಕೆ ಹಾಗೂ ವಿಶೇಷ ಶೋಗೆ ಅನುಮತಿ ನೀಡಲಾಗಿದೆ. ಆದರೆ ಒಂದು ಷರತ್ತು ಸಹ ವಿಧಿಸಲಾಗಿದೆ.

‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಅವಘಡದ ಬಳಿಕ ಸಿನಿಮಾಗಳ ಪ್ರೀಮಿಯರ್ ಶೋಗಳ ಬಗ್ಗೆ ಕೆಲ ಕಠಿಣ ನಿಯಮಗಳು ತೆಲಂಗಾಣ ಸರ್ಕಾರ ವಿಧಿಸಿದೆ. ಅದರಂತೆ ಇದೀಗ ‘ಅಖಂಡ 2’ ಸಿನಿಮಾಕ್ಕೆ ವಿಶೇಷ ಶೋಗೆ ಅನುಮತಿ ನೀಡಿದರೆ ರಾತ್ರಿ ಶೋಗಳಿಗೆ ಬದಲಾಗಿ ಬೆಳಿಗಿನ ಶೋಗೆ ಅನುಮತಿ ನೀಡಲಾಯಿತು, ಟಿಕೆಟ್ ದರ ಜಿಎಸ್ ಟಿ ಸೇರಿದಂತೆ 600 ರೂಪಾಯಿ ದಾಟಬಾರದೆಂದು ನಿಬಂಧನೆ ವಿಧಿಸಲಾಗಿದೆ. ಆದರೆ, ಬುಕ್ ಮೈ ಶೋ ಡಿಸೆಂಬರ್ 04 ರಂದು ಸಂಜೆ 7 ಗಂಟೆಯಲ್ಲಿಯೂ ‘ಅಖಂಡ 2’ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿಲ್ಲ. ಇದು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಪರಿಣಾಮ ಬೀರಲಿದೆ.

ಇದನ್ನೂ ಓದಿ:’ಅಖಂಡ 2′ ಟಿಕೆಟ್ ದರ: ಕರ್ನಾಟಕದಲ್ಲೆಷ್ಟು? ಆಂಧ್ರದಲ್ಲೆಷ್ಟು?

ಸ್ಪೆಷಲ್ ಶೋಗೆ 600 ರೂಪಾಯಿ ಟಿಕೆಟ್ ದರ ನಿಗದಿಯಾಗಿದ್ದರೂ ಸಹ, ಡಿಸೆಂಬರ್ 5 ಮುಂದಿನ ಮೂರು ದಿನಗಳ ಕಾಲ ಮಲ್ಟಿಪ್ಲೆಕ್ಸ್‌ನಲ್ಲಿ 100 ರೂಪಾಯಿ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 50 ರೂಪಾಯಿ ಟಿಕೆಟ್ ದರವನ್ನು ಸಹ ಅನುಮತಿಸಲಾಗಿದೆ. ಈ ಟಿಕೆಟ್ ದರ ಒಂದು ಸಿನಿಮಾ ಬಿಡುಗಡೆ ಆದ ಮೂರು ದಿನಗಳ ವರೆಗೆ ಮಾತ್ರವೇ ಇರಲಿದೆ.

ಇದರ ಜೊತೆಗೆ ಮತ್ತೊಂದು ಪ್ರಮುಖ ನಿಬಂಧನೆಯನ್ನು ತೆಲಂಗಾಣ ಸರ್ಕಾರ ಇರಿಸಿದೆ. ಸಿನಿಮಾದ ಪ್ರೀಮಿಯರ್ ಶೋ ಅಥವಾ ವಿಶೇಷ ಶೋನಲ್ಲಿ ಗಳಿಕೆಯಾದ ಒಟ್ಟು ಕಲೆಕ್ಷನ್‌ನಲ್ಲಿ 20% ಹಣವನ್ನು ಚಿತ್ರಕಾರ್ಮಿಕರ ಕಲ್ಯಾಣ ನಿಧಿಗೆ ನೀಡಲಾಗಿದೆ ಎಂದು ಸಹ ಸೂಚಿಸಲಾಗಿದೆ. ಕೆಲ ವಾರಗಳ ಸಿನಿಮಾ ಕಾರ್ಮಿಕರ ಸಂಘದಿಂದ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ಸಿಎಂ ರೇವಂತ್ ರೆಡ್ಡಿ ಪ್ರಸ್ತಾಪಿಸಿದ್ದರು. ಅದರಂತೆ ಈಗ ‘ಅಖಂಡ 2’ ಸಿನಿಮಾದ ಕಲೆಕ್ಷನ್‌ನ (ವಿಶೇಷ ಶೋ ಕಲೆಕ್ಷನ್) 20% ಕಾರ್ಮಿಕರ ಕಲ್ಯಾಣಕ್ಕೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *