‘ಆ ವಿಷಯಕ್ಕೆ ಡಿವೋರ್ಸ್ ಆಯ್ತು’; ಕೊನೆಗೂ ಮೌನ ಮುರಿದ ಅಖಿಲಾ ಪಜಿಮಣ್ಣು

‘ಆ ವಿಷಯಕ್ಕೆ ಡಿವೋರ್ಸ್ ಆಯ್ತು’; ಕೊನೆಗೂ ಮೌನ ಮುರಿದ ಅಖಿಲಾ ಪಜಿಮಣ್ಣು


ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ವಿವಾಹ ಆಗಿ ಕೆಲವು ವರ್ಷ ಒಟ್ಟಿಗೆ ಒಬ್ಬರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದರು. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಈವರೆಗೆ ಅವರು ಈ ಬಗ್ಗೆ ಮಾತನಾಡುತ್ತಾರೆಯೇ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಅಖಿಲಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಬಗ್ಗೆ ಕೇಳಿ ಬಂದ ವದಂತಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಆ ಬಗ್ಗೆ ಇಲ್ಲಿ ನೋಡೋಣ.

‘ಕೊರೊನಾ ಸಮಯದಲ್ಲಿ ನಾನು ಮದುವೆ ಆದೆ. ಆ ಬಳಿಕ ಅಮೆರಿಕ ಹೋದೆ. ನಾನು ಅಲ್ಲಿ ಮ್ಯೂಸಿಕ್ ಕ್ಲಾಸ್ ಮಾಡುತ್ತಿದ್ದೆ. ಅಲ್ಲಿ ಗೆಳೆಯರನ್ನು ಮಾಡಿಕೊಳ್ಳಲು ಆರಂಭಿಸಿದೆ. ನಾನು ಖುಷಿಪಟ್ಟೆ’ ಎಂದು ದಿ ಪವರ್ ಹೌಸ್ ವೈನ್ಸ್ ಗೆ ನೀಡಿದ ಸಂದರ್ಶನದಲ್ಲಿ ಅಖಿಲಾ ಅವರು ಮಾತನಾಡಿದ್ದಾರೆ.

‘ನನಗೆ ವಿಚ್ಛೇದನ ವಿಷಯವು ಲೀಕ್ ಆಗುವುದು ಇಷ್ಟವೇ ಇಲ್ಲ. ನನ್ನ ತಂದೆ ನನ್ನನ್ನು ಪ್ರಿಪ್ಯಾರ್ ಮಾಡಿದ್ರು. ಸೆಲೆಬ್ರಿಟಿಗಳ ವಿಚ್ಛೇದನದ ವಿಷಯ ಲೀಕ್ ಆಗುತ್ತದೆ ಎಂದು ನನ್ನ ತಂದೆಗೆ ಗೊತ್ತಿತ್ತು. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರ ಅಲ್ಲವೇ ಅಲ್ಲ. ರಾತ್ರಿ ನಾವು ಡಿವೋರ್ಸ್ ಆಗೋಣ ಎಂದು ನಿರ್ಧರಿಸಿ, ಮರುದಿನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರು ನಾವಲ್ಲ. ನಾವಿಬ್ಬರೂ ಒಂದೂವರೆ ವರ್ಷ ಸಂಬಂಧವನ್ನು ಸರಿದೂಗಿಸಲು ಪ್ರಯತ್ನ ಮಾಡಿದೆವು. ವರ್ಕ್ ಆಗುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಭಾರತಕ್ಕೆ ಮರಳಿದೆ’ ಎಂದು ಅವರು ಹೇಳಿದರು.

‘ಸುದ್ದಿ ಬರುತ್ತೆ ಹೋಗುತ್ತೆ. ಆದರೆ, ನಾವು ಪಡುವ ಕಷ್ಟ ನನಗೆ ಮಾತ್ರ ಗೊತ್ತು ಎಂದು ನನಗೆ ಅನಿಸಿತು. ಸುದ್ದಿ ಬರುತ್ತೆ-ಹೋಗುತ್ತೆ. ನನಗೆ ರಿಯಾಲಿಶಿಟಿ ಶೋ ಆಫರ್ ಬಂತು ಎಂದು ನಾನು ವಿಚ್ಛೇದನದ ನಿರ್ಧಾರ ತೆಗೆದುಕೊಂಡೆ ಎಂದೆಲ್ಲ ಹೇಳಿದೆ. ಆದರೆ, ಆ ರೀತಿ ಇಲ್ಲ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಕಾರಣವೇನು ಗೊತ್ತಾ?

ಧನಂಜಯ್ ಅವರು ಅಮೆರಿಕದಲ್ಲಿ ವಾಸವಿದ್ದಾರೆ. ಅವರು ಅಖಿಲಾಗೆ ಕೆಲಸ ಮಾಡುವ ಸ್ವಾತಂತ್ರ್ಯ ಕೊಟ್ಟಿಲ್ಲ ಎಂದೆಲ್ಲ ಹೇಳಲಾಯಿತು. ಆದರೆ, ಅಖಿಲ ಅದೆಲ್ಲವನ್ನೂ ತಳ್ಳಿ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *