ಕನ್ನಡತಿ ಭೂಮಿ ಶೆಟ್ಟಿ ಸಿನಿಮಾನಲ್ಲಿ ‘ಧುರಂಧರ್’ ಸ್ಟಾರ್ ಅಕ್ಷಯ್ ಖನ್ನಾ

ಕನ್ನಡತಿ ಭೂಮಿ ಶೆಟ್ಟಿ ಸಿನಿಮಾನಲ್ಲಿ ‘ಧುರಂಧರ್’ ಸ್ಟಾರ್ ಅಕ್ಷಯ್ ಖನ್ನಾ


ಅಕ್ಷಯ್ ಖನ್ನಾ (ಅಕ್ಷಯ್ ಖಾನ್), ಚಿತ್ರರಂಗದಲ್ಲಿದ್ದರೂ ಸಹ ಆರಕ್ಕೇರಿರಲಿಲ್ಲ, ಮೂರಕ್ಕಿಳಿದಿರಲಿಲ್ಲ. ಆದರೆ ಈಗ ‘ಧುರಂಧರ’ ಸಿನಿಮಾ ಮೂಲಕ ಏಕಾಏಕಿ ಸ್ಟಾರ್ ಆಗಿದ್ದಾರೆ. ಅದ್ಭುತ ನಟ ಅಕ್ಷಯ್ ಖನ್ನಾ ಅವರ ನಟನಾ ಪ್ರತಿಭೆಗೆ ಫಿದಾ ಆಗಿದ್ದಾರೆ. ಹಠಾತ್ತನೇ ಅಕ್ಷಯ್ ಖನ್ನಾ ಬೇಡಿಕೆ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಸಹ ದುಪ್ಪಟ್ಟಾಗಿದೆ. ಹಠಾತ್ತನೇ ಬಂದ ಬೇಡಿಕೆ, ಜನಪ್ರಿಯತೆಯ ಪರಿಣಾಮ ನ ಸ್ಟಾರ್ ನಟರ ಸಿನಿಮಾಗಳನ್ನೇ ಕೈಬಿಡುತ್ತಿದ್ದಾರೆ ಅಕ್ಷಯ್ ಖನ್ನಾ, ಆದರೆ ಇದೀಗ ಅವರು ಕನ್ನಡತಿ, ನಟಿ ಭೂಮಿ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಕುಂದಾಪುರದ ಭೂಮಿ ಶೆಟ್ಟಿ, ಕನ್ನಡದ ‘ಇಕ್ಕಟ್’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಇದೀಗ ಭೂಮಿ ಶೆಟ್ಟಿ ನಟಿಸುತ್ತಿರುವ ತೆಲುಗು ಸಿನಿಮಾ ‘ಮಹಾಕಾಳಿ’ ಚಿತ್ರ ಚಾಲ್ತಿಯಲ್ಲಿದ್ದು ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಸಹ ನಟಿಸಿದ್ದಾರೆ. ಅಕ್ಷಯ್ ಖನ್ನಾ ಅವರು ಸಿನಿಮಾದ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ನಿರ್ದೇಶನ ಮಾಡುತ್ತಿರುವ ಪೂಜಾರಿ ಅವರು ಅಕ್ಷಯ್ ಖನ್ನಾ ಜೊತೆಗಿನ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ’ ನಟನಿಗೆ ‘ದೃಶ್ಯಂ 3’ ಅವಕಾಶ

ಹೆಸರೇ ಸೂಚಿಸುತ್ತಿರುವಂತೆ ‘ಮಹಾಕಾಳಿ’ ಸಿನಿಮಾ ಫಿಕ್ಷನಲ್ ಸಿನಿಮಾ ಆಗಿದ್ದು, ಅಕ್ಷಯ್ ಖನ್ನಾ ಅವರು ವಿಶ್ವಮಿತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಾಮಿತ್ರನ ಪಾತ್ರ ಸಿನಿಮಾದ ಬಹು ಮುಖ್ಯ ಪಾತ್ರಗಳಲ್ಲಿ ಒಂದಾಗಿದ್ದರೆ, ಈ ಬಗ್ಗೆ ಮಾತನಾಡಿರುವ ನಿರ್ದೇಶಕಿ ಪೂಜಾ ಕೊಲ್ಲೂರು, ‘ಶುಕ್ರಾಚಾರ್ಯ ಪಾತ್ರ ವಿಲನ್ ಅಥವಾ ಹೀರೋ ಎಂದಲ್ಲ. ಎರಡ ಭಿನ್ನವಾದ ವ್ಯಕ್ತಿತ್ವ ಆ ಪಾತ್ರದ್ದು. ಹಾಗಂತ ನಾವು ಅಕ್ಷಯ್ ಖನ್ನಾ ಅಂಥಾ ಅದ್ಭುತ ನಟರನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಅಕ್ಷಯ್ ಖನ್ನಾ ಅವರ ದೃಶ್ಯಗಳನ್ನು ಮುಂಬೈನಲ್ಲಿ ಚಿತ್ರತಂಡ ಮಾಡಿದೆ.

ಈ ಹಿಂದೆ ‘ಹನುಮ್ಯಾನ್’ ಸಿನಿಮಾ ಮೂಲಕ ಭಾರಿ ಹಿಟ್ ನೀಡಿದ್ದಾರೆ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ವರ್ಮಾ, ‘ಮಹಾಕಾಳಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪೂಜಾ ಕೊಲ್ಲೂರು ಸಹ ಕನ್ನಡದವರೇ ಆಗಿದ್ದು, ಈ ಹಿಂದೆ ತೆಲುಗಿನ ‘ಮಾರ್ಟಿನ್ ಲೂಥರ್ ಕಿಂಗ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾದಲ್ಲಿ ಸಂಪೂರ್ಣೇಶ್ ಬಾಬು ನಾಯಕನಾಗಿ ನಟಿಸಿದ್ದರು. ತೆಲುಗಿನ ‘ಮಂಡೇಲ’ ಸಿನಿಮಾದ ರಿಮೇಕ್ ಅದಾಗಿತ್ತು. ಇದೀಗ ‘ಮಹಾಕಾಳಿ’ ಪೂಜಾ ಅವರ ಸ್ವಂತ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *