‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ

‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ


ಬಾಲಿವುಡ್ ನಟ ಅಕ್ಷಯ್ ಕುಮಾರ್ (ಅಕ್ಷಯ್ ಕುಮಾರ್) ಮತ್ತು ನಿರ್ದೇಶಕ ಪ್ರಿಯದರ್ಶನ್ ಜೋಡಿಯ ಬಹುನಿರೀಕ್ಷಿತ ಹಾರರ್ ಕಾಮಿಡಿ ಚಿತ್ರ ‘ಭೂತ್ ಬಾಂಗ್ಲಾ’ (ಭೂತ್ ಬಾಂಗ್ಲಾ) ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 17 ರಂದು ಈ ಸಿನಿಮಾ ತೆರೆಕಾಣಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದೆ. ಟಿಕೆಟ್ ಬುಕ್ ಮಾಡುವಲ್ಲಿ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆ ಮೂಲಕ ‘ಭೂತ್ ಬಾಂಗ್ಲಾ’ ಸಿನಿಮಾ ಉತ್ತಮ ಓಪನಿಂಗ್ ಪಡೆಯುವ ಸೂಚನೆ ಸಿಕ್ಕಿದೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂದು ತಿಳಿಯುವ ಕೌತುಕ ಹೆಚ್ಚಿದೆ.

ಬುಧವಾರ (ಏಪ್ರಿಲ್ 15) ಸಂಜೆ 4.30ರ ಸುಮಾರಿಗೆ ಅಂಕಿಅಂಶಗಳ ಪ್ರಕಾರ, ಪಿವಿಆರ್ ಐನಾಕ್ಸ್ ಮತ್ತು ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಮಾರು 20 ಸಾವಿರ ಟಿಕೆಟ್‌ಗಳ ಮಾರಾಟ. ಗುರುವಾರ ಪ್ರಿವ್ಯೂ ಶೋಗೆ 10,500 ಟಿಕೆಟ್ ಹಾಗೂ ಶುಕ್ರವಾರದ ಶೋಗೆ 9,000 ಟಿಕೆಟ್ ಮಾರಾಟ ಆಗಿವೆ. ಇದರಿಂದ ಚಿತ್ರಕ್ಕೆ ಪಾಸಿಟಿವ್ ಫೀಲ್ ಸಿಕ್ಕಿದೆ.

ಏಪ್ರಿಲ್ 15 ರ ರಾತ್ರಿಯ ವೇಳೆಗೆ ಒಟ್ಟು ಟಿಕೆಟ್ ಮಾರಾಟ 25,000 ರಿಂದ 30,000 ಗಡಿಯನ್ನು ದಾಟುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಖಾಸಗಿ ಶೋಗಳು ಪ್ರಾರಂಭವಾಗುವ ಹೊತ್ತಿಗೆ ಇದು 60,000 ರಿಂದ 70,000ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಂತ ‘ಭೂತ್ ಬಾಂಗ್ಲಾ’ ಸಿನಿಮಾ ಬಿಡುಗಡೆಗೂ ಮೊದಲೇ ಗೆಲುವಿನ ಸೂಚನೆ ಸಿಗುತ್ತಿದೆ.

ಅಕ್ಷಯ್ ಕುಮಾರ್ ಅವರ ಈ ಹಿಂದಿನ ಚಿತ್ರಗಳಿಗೆ ‘ಭೂತ್ ಬಾಂಗ್ಲಾ’ ಟಿಕೆಟ್ ಬುಕಿಂಗ್ ಸಾಧಾರಣವಾಗಿದೆ. ‘ಹೌಸ್‌ಫುಲ್ 5’ ಸಿನಿಮಾಗೆ ಮೊದಲ ದಿನ 96,000 ಟಿಕೆಟ್ ಮಾರಾಟವಾಗಿತ್ತು. ಪ್ರಸ್ತುತ ಟ್ರೆಂಡ್ ಗಮನಿಸಿದರೆ, ‘ಭೂತ್ ಬಾಂಗ್ಲಾ’ ಚಿತ್ರವು ಮೊದಲ ದಿನ, ಖಾಸಗಿ ಶೋಗಳನ್ನು ಸೇರಿ, ಸುಮಾರು 15 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ಭೂತ್ ಬಾಂಗ್ಲಾ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

ಸದ್ಯ ಬಾಲಿವುಡ್ ಬಿಸ್ನೆಸ್ ಚೆನ್ನಾಗಿದೆ. ‘ಧುರಂಧರ: ದಿ ರಿವೇಂಜ್’ ದೊಡ್ಡ ಮಟ್ಟದ ಹಿಟ್ ಆಗಿದೆ. ಇದರ ಜೊತೆ ‘ಮರ್ದಾನಿ 3’ ಮತ್ತು ‘ದಿ ಕೇರಳ ಸ್ಟೋರಿ 2’ ಕೂಡ ಯಶಸ್ಸು ಕಂಡಿವೆ. ‘ಭೂತ್ ಬಾಂಗ್ಲಾ’ ಸಿನಿಮಾದ ನಿರ್ಮಾಣ ವೆಚ್ಚ ಮಿತವಾಗಿದ್ದು, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ಉತ್ತಮ ಲಾಭ ಕಂಡಿದೆ. ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕರೆ ಅಕ್ಷಯ್ ಕುಮಾರ್ ಖಾತೆಗೆ ಒಂದು ಸಕ್ಸಸ್ ಸೇರ್ಪಡೆ ಆಗುವುದು ಗ್ಯಾರಂಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *