‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ


'ಧುರಂಧರ 2' ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? 'ಭೂತ್ ಬಾಂಗ್ಲಾ' ಬಿಡುಗಡೆ ಮುಂದೂಡಿಕೆ ಸಾಧ್ಯತೆ

ಬಾಲಿವುಡ್‌ನಲ್ಲಿ ನಟ ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರು ಹೊಸ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಅವರು ಅಭಿನಯಿಸಿದ ‘ಧುರಂಧರ: ದಿ ರಿವೆಂಜ್’ (ಧುರಂಧರ: ದಿ ರಿವೆಂಜ್) ಚಿತ್ರವು ಥಿಯೇಟರ್‌ಗಳಲ್ಲಿ ಸುನಾಮಿ ಎಬ್ಬಿಸಿದೆ. ಈ ಅಭೂತಪೂರ್ವ ಯಶಸ್ಸು ಈಗ ಅಕ್ಷಯ್ ಕುಮಾರ್ ಅವರ ಮುಂಬರುವ ಹಾರರ್-ಕಾಮಿಡಿ ಚಿತ್ರ ‘ಭೂತ್ ಬಂಗ್ಲಾ’ (ಭೂತ್ ಬಾಂಗ್ಲಾ) ಮೇಲೆ ಪ್ರಭಾವ ಬೀರಿದೆ. ‘ಭೂತ್ ಬಂಗ್ಲ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎಂಬ ಗಾಸಿಪ್ ಕೇಳಿಬರುತ್ತಿದೆ.

ಮಾರ್ಚ್ 19 ರಂದು ಬಿಡುಗಡೆಯಾದ ‘ಧುರಂಧರ 2’ ಸಿನಿಮಾ ವೀಕೆಂಡ್ ಆಗಿದ್ದು ವಾರದ ದಿನದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಕ್ರೇಜ್ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ, ಏಪ್ರಿಲ್ 10 ರಂದು ಬಿಡುಗಡೆ ಆಗಬೇಕಿದ್ದ ‘ಭೂತ್ ಬಾಂಗ್ಲಾ’ ಚಿತ್ರವನ್ನು ಒಂದು ವಾರ ಮುಂದೂಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

‘ಧುರಂಧರ 2 ಸಿನಿಮಾ ಐತಿಹಾಸಿಕ ಕಲೆಕ್ಷನ್ ಮಾಡುತ್ತಿದೆ. ಇದು ತನ್ನ ನಾಲ್ಕನೇ ವಾರದಲ್ಲೂ (ಅಂದರೆ ಏಪ್ರಿಲ್ 10 ರ ಆಸುಪಾಸು) ಪ್ರಬಲವಾಗಿ ಮುನ್ನುಗ್ಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಏಪ್ರಿಲ್ 17 ರಂದು ಯಾವುದೇ ದೊಡ್ಡ ಹಿಂದಿ ಚಿತ್ರಗಳು ಬಿಡುಗಡೆಗೆ ನಿಗದಿಯಾಗಿಲ್ಲ. ಹೀಗಾಗಿ ಪೈಪೋಟಿ ತಪ್ಪಿಸಲು ‘ಭೂತ್ ಬಾಂಗ್ಲಾ’ ಚಿತ್ರವನ್ನು ಏಪ್ರಿಲ್ 17ಕ್ಕೆ ಮುಂದೂಡುವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ’ ಎಂದು ಹಂಗಾಮಿ ವರದಿ ಮಾಡಿದೆ.

ಆದರೆ, ಮತ್ತೊಂದು ಮಾಹಿತಿ ಪ್ರಕಾರ, ಏಪ್ರಿಲ್ 10 ರ ಹೊತ್ತಿಗೆ ಹೆಚ್ಚಿನ ಜನರು ‘ಧುರಂಧರ 2’ ಸಿನಿಮಾವನ್ನು ನೋಡುತ್ತಾರೆ. ಇಂತಹ ಹೊಸ ಚಿತ್ರ ‘ಭೂತ್ ಬಾಂಗ್ಲಾ’ ಬಿಡುಗಡೆ ಆದರೆ ಹೆಚ್ಚಿನ ಲಾಭ ಸಿಗಬಹುದು ಎಂಬುದಾಗಿದೆ. ನಟ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ಈ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಧುರಂಧರ್ 2: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್‌ಗಳು; ಆರ್ಜೀವಿ ಟೀಕೆ

ಒಂದು ವೇಳೆ ‘ಭೂತ್ ಬಾಂಗ್ಲಾ’ ಚಿತ್ರವು ನಿಗದಿತ ದಿನಾಂಕವಾದ ಏಪ್ರಿಲ್ 10 ರಂದು ಬಿಡುಗಡೆ ಆಗುವುದಾದರೆ, ಬಹುನಿರೀಕ್ಷಿತ ಟ್ರೇಲರ್ ಈ ಶುಕ್ರವಾರ (ಮಾರ್ಚ್ 27) ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಒಂದು ವೇಳೆ, ಸಿನಿಮಾ ಮುಂದೂಡಿಕೆಯಾದರೆ ಟ್ರೇಲರ್ ಲಾಂಚ್ ಕೂಡ ವಿಳಂಬವಾಗಿದೆ. ಈ ಬಗ್ಗೆ ಸಿನಿಪ್ರಿಯರಿಗೆ ಕೌತುಕ ಹೆಚ್ಚು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *