‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್

‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್


‘ಧುರಂಧರ 2’ (ಧುರಂಧರ 2) ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ‘ಧುರಂಧರ್’ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆದ್ದರಿಂದ ಅದರ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬ ಕೌತುಕ ಇದೆ. ‘ಧುರಂಧರ 2’ ನೋಡಲು ಚಿತ್ರಮಂದಿರಕ್ಕೆ ಬರುವ ದೃಶ್ಯಕ್ಕೆ ಅಕ್ಷಯ್ ಕುಮಾರ್ (ಅಕ್ಷಯ್ ಕುಮಾರ್) ಕೂಡ ಕಾಣಿಸಿಕೊಳ್ಳಲಿದ್ದಾರೆ! ಆದರೆ ನೀವಂದುಕೊಂಡಂತೆ ಅಲ್ಲ.

ಮಾರ್ಚ್ 19 ರಂದು ‘ಧುರಂಧರ 2’ ಸಿನಿಮಾ ರಿಲೀಸ್ ಆಗಲಿದೆ. ಈ ಜೊತೆ ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲ’ ಸಿನಿಮಾದ ಪ್ರಚಾರಕ್ಕೆ ಪ್ಲ್ಯಾನ್ ಮಾಡಿದ್ದಾರೆ. ‘ಧುರಂಧರ 2’ ಜೊತೆ ‘ಭೂತ್ ಬಂಗ್ಲ’ ಸಿನಿಮಾದ ಪ್ರೋಮೋ ಸಾಂಗ್ ಅಟ್ಯಾಚ್ ಮಾಡಿದೆ. ಅಂದರೆ, ‘ಧುರಂಧರ 2’ ಸಿನಿಮಾ ಪ್ರದರ್ಶನ ಆಗುವ ಚಿತ್ರಮಂದಿರಗಳಲ್ಲಿ ‘ಭೂತ್ ಬಾಂಗ್ಲಾ’ ಪ್ರೋಮೋ ಸಾಂಗ್ ಕೂಡ ಬಿತ್ತರ ಆಗಲಿದೆ.

‘ಭೂತ್ ಬಾಂಗ್ಲಾ’ ಸಿನಿಮಾಗೆ ಪ್ರಿಯದರ್ಶನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ನಟಿಸಿದ್ದ ‘ಭೂಲ್ ಭುಲಯ್ಯ’ ಸಿನಿಮಾಗೂ ಪ್ರಿಯದರ್ಶನ್ ಅವರೇ ಆ್ಯಕ್ಷನ್-ಕಟ್ ಹೇಳಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗುತ್ತಿದೆ. ಆ ಟೈಟಲ್ ಸಾಂಗ್ ಸಖತ್ ಜನಪ್ರಿಯತೆ ಪಡೆದಿತ್ತು. ಅದೇ ರೀತಿ ಈಗ ‘ಭೂತ್ ಬಂಗ್ಲ’ ಸಿನಿಮಾದಲ್ಲಿ ಕೂಡ ಸಾಂಗ್ ಹೈಲೈಟ್ ಆಗಲಿದೆ.

ಭೂತ್ ಬಾಂಗ್ಲಾ’ ಸಿನಿಮಾದ ಹಾಡನ್ನು ಅತಿ ಹೆಚ್ಚು ಜನರಿಗೆ ತಲುಪಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದ್ದರಿಂದ ‘ಧುರಂಧರ 2’ ಸಿನಿಮಾ ಜೊತೆ ಹಾಡಿನ ಪ್ರೋಮೋವನ್ನು ಅತ್ಯಾಚ್ ಮಾಡಲು ತೀರ್ಮಾನಿಸಲಾಗಿದೆ. ‘ಧುರಂಧರ 2’ ಆರಂಭಕ್ಕೂ ಮುನ್ನ ಅಥವಾ ಮಧ್ಯಂತರದಲ್ಲಿ ಈ ಪ್ರೋಮೋ ಪ್ರದರ್ಶನ ಆಗಲಿದೆ.

ಇದನ್ನೂ ಓದಿ: ಪಾರ್ಟಿ ವೇಳೆ ಜಗಳ: ಅಕ್ಷಯ್ ಕುಮಾರ್ ಹೊಡೆತಕ್ಕೆ ತಪ್ಪಿ ಬಿದ್ದ ವ್ಯಕ್ತಿಗೆ ಏನಾಯ್ತು?

ಈ ಪ್ಲ್ಯಾನ್ ಬಗ್ಗೆ ‘ಭೂತ್ ಬಾಂಗ್ಲಾ’ ಸಿನಿಮಾದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಆದರೆ ಗಾಸಿಪ್ ಜೋರಾಗಿದೆ. ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ. ಅಕ್ಷಯ್ ಕುಮಾರ್, ಟಬು, ಪರೇಶ್ ರಾವಲ್, ರಾಜ್ಪಾಲ್ ಯಾದವ್ ಮುಂತಾದವರು ನಟಿಸಿರುವ ಈ ಸಿನಿಮಾ ಏಪ್ರಿಲ್ 10 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *