ಬರ್ಮಿಂಗ್ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2026 ಭಾರತದ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ. ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ ಮತ್ತು ಹಾಲಿ ಚೀನಾದ ಶಿ ಯು ಕಿ ಅವರನ್ನು ಸೋಲಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ.
ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ 23–21 ಅಂತರದಿಂದ ಗೆದ್ದುಕೊಂಡಿದ್ದರು. ಇದಾಗ್ಯೂ ದ್ವಿತೀಯ ಸೆಟ್ ನಲ್ಲಿ ಕಂಬ್ಯಾಕ್ ಮಾಡಿದ ಶಿ ಯು ಕಿ 19–21 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
ಇನ್ನು ನಿರ್ಣಾಯಕ ಸೆಟ್ನಲ್ಲಿ ಮತ್ತೊಮ್ಮೆ ಲಯಕ್ಕೆ ಮರಳಿದ ಲಕ್ಷ್ಯ ಸೇನ್ 21–17 ಅಂತರದಿಂದ ಶಿ ಯು ಕಿಗೆ ಸೋಲುಣಿಸಿದರು. ಈ ಮೂಲಕ 78 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಭಾರತೀಯ ತಾರೆ 23–21, 19–21, 21–17 ಸೆಟ್ಗಳಿಂದ ಗೆದ್ದುಕೊಂಡರು.
ವಿಶೇಷ ಎಂದರೆ ಬಿಡಬ್ಲ್ಯೂಎಫ್ (BWF) ವರ್ಲ್ಡ್ ಟೂರ್ನಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ಲಕ್ಷ್ಯ ಸೇನ್ ಸಾಧಿಸಿದ ಮೊದಲ ವೈಯಕ್ತಿಕ ಜಯ ಇದಾಗಿದೆ. ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಪ್ರೀ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪ್ರವೇಶಿಸಿದ್ದಾರೆ.
ಮಾರ್ಚ್ 5 ರಂದು ನಡೆಯಲಿರುವ ಮುಂದಿನ ಉತ್ಪನ್ನ ಅವರು ಹ್ಯಾಂಗ್ ಕಾಂಗ್ನ ಎನ್ಜಿ ಕಾಂಗ್ ಲಾಂಗ್ ಆಂಗಸ್ ಅವರನ್ನು ಎದುರಿಸಲಿದ್ದಾರೆ.