“ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧರಾಗಿದ್ದಾರೆ”… ಹೀಗಂದಿರುವುದು ಮತ್ಯಾರೂ ಅಲ್ಲ, ವೆಸ್ಟ್ ಇಂಡೀಸ್ ಕೋಚ್ ಡ್ಯಾರೆನ್ ಸ್ಯಾಮಿ. ಹೀಗೆ ವಿಂಡೀಸ್ ಪಡೆ ಸಿದ್ಧರಾಗಿರುವುದು ಭಾರತ ತಂಡವನ್ನು ಎದುರಿಸಲು ಎಂಬುದು ವಿಶೇಷ. ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಆಟ ಗೆಲ್ಲುವ ತಂಡ ಸೆಮಿಫೈನಲ್ ಗೇರಲಿದೆ.
ಈ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ವೆಸ್ಟ್ ಇಂಡೀಸ್ ಕೋಚ್ ಡ್ಯಾರೆನ್ ಸ್ಯಾಮಿ, ಟೀಮ್ ಇಂಡಿಯಾವನ್ನು ಎದುರಿಸಲು ನನ್ನ ಪಡೆ ಸಿದ್ಧವಾಗಿದೆ. ತಂಡವು ಯಾವುದೇ ಸವಾಲನ್ನು ಎದುರಿಸಲು ಸಜ್ಜಾಗಿದೆ. ಮಾರ್ಚ್ 1 ರಂದು ನಡೆಯಲಿರುವ ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧರಿದ್ದಾರೆ. ಜೊತೆಗೆ ಈ ಕೊಡುಗೆ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತ ತಂಡವನ್ನು “ಗೋಲಿಯಾತ್” (ಬಲಿಷ್ಠ ತಂಡ) ಗೆ ಹಾಗೂ ತಮ್ಮ ತಂಡವನ್ನು “ಡೇವಿಡ್” ಗೆ ಹೋಲಿಸಿದ ಸ್ಯಾಮಿ, 2016ರಲ್ಲಿ ಡೇವಿಡ್ (ವೆಸ್ಟ್ ಇಂಡೀಸ್) ಹೇಗೆ ಗೋಲಿಯಾತ್ (ಭಾರತ) ಅನ್ನು ಸೋಲಿಸಿ ಅದೇ ಇತಿಹಾಸವನ್ನು ಮರುಕಳಿಸುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಡೇವಿಡ್ ಮತ್ತು ಗೋಲಿಯಾತ್ ಬೈಬಲ್‌ನ (1 ಸ್ಯಾಮ್ಯುಯೆಲ್ 17) ಪ್ರಸಿದ್ಧ ಕಥೆಯು ಸಣ್ಣ ದುರ್ಬಲ ವ್ಯಕ್ತಿ (ಡೇವಿಡ್) ತನ್ನ ಬುದ್ಧಿವಂತಿಕೆ ಮತ್ತು ನಂಬಿಕೆಯಿಂದ ಬಲಿಷ್ಠದೈತ್ಯ ಯೋಧನನ್ನು (ಗೋಲಿಯಾತ್) ಸೋಲಿಸುವ ಅಸಾಧ್ಯ ವಿಜಯವನ್ನು ಚಿತ್ರಿಸುತ್ತದೆ. ಈ ಕಥೆಯು ಸಾಂಕೇತಿಕವಾಗಿ ಪ್ರಸ್ತಾಪಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವು ಬಲಿಷ್ಠ ಟೀಮ್ ಇಂಡಿಯಾವನ್ನು ಬಗ್ಗು ಬಡಿಯ ಎಂದು ಡ್ಯಾರೆನ್ ಸ್ಯಾಮಿ ಹೇಳಿದ್ದಾರೆ.
ಅಂದಹಾಗೆ ಇದೆಡನ್ ಗಾರ್ಡನ್ಸ್ ಈ ಮೈದಾನದಲ್ಲಿ 2016 ರಲ್ಲಿ ಡ್ಯಾರೆನ್ ಸ್ಯಾಮಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಟಿ20 ಗೆದ್ದಿತ್ತು. ಆ ನೆನಪುಗಳು ತಂಡಕ್ಕೆ ಹೆಚ್ಚಿನ ಶಕ್ತಿ ನೀಡಲಿವೆ. ಹೀಗಾಗಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ವಿಂಡೀಸ್ ಪಡೆಯಿಂದ ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: PAK vs SL: ವಿವಾದಾತ್ಮಕ ತೀರ್ಪಿನಿಂದ ಸೋತ ಶ್ರೀಲಂಕಾ
ಇದೇ ವೇಳೆ ವೆಸ್ಟ್ ಇಂಡೀಸ್ ದಾಂಡಿಗ ಶಿಮ್ರಾನ್ ಹೆಟ್ಮೆಯರ್ ಅವರ ಉತ್ತಮ ಬ್ಯಾಟಿಂಗ್ ಫಾರ್ಮ್ ಮತ್ತು ತಂಡದ ಉನ್ನತ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸ್ಯಾಮಿ, ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ನಮ್ಮ ಬ್ಯಾಟರ್‌ಗಳು ಅಬ್ಬರಿಸುವುದನ್ನು ನಿರೀಕ್ಷಿಸಬಹುದು. ಈ ಮೂಲಕ ಭಾರತ ತಂಡಕ್ಕೆ ಸೋಲುಣಿಸಿ ನಾವು ಸೆಮಿಫೈನಲ್‌ಗೆ ಪ್ರವೇಶಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಂದು ಪ್ರಕಟಿಸಲಾಗಿದೆ – 10:26 am, ಭಾನುವಾರ, 1 ಮಾರ್ಚ್ 26