Headlines

Must Watch Kannada Movies: ಎಲ್ಲ ಕಾಲಕ್ಕೂ ನೋಡಬಹುದಾದ ಸೂಪರ್‌ ಹಿಟ್ ಕನ್ನಡ ಸಿನಿಮಾಗಳಿವು

Must Watch Kannada Movies: ಎಲ್ಲ ಕಾಲಕ್ಕೂ ನೋಡಬಹುದಾದ ಸೂಪರ್‌ ಹಿಟ್ ಕನ್ನಡ ಸಿನಿಮಾಗಳಿವು

Must Watch Kannada Movies: ಎಲ್ಲ ಕಾಲಕ್ಕೂ ನೋಡಬಹುದಾದ ಸೂಪರ್‌ ಹಿಟ್ ಕನ್ನಡ ಸಿನಿಮಾಗಳಿವು

ಸ್ಯಾಂಡಲ್‌ವುಡ್‌ ಅಥವಾ ಕನ್ನಡ ಚಿತ್ರರಂಗವು ಶ್ರೀಮಂತ ಕಥಾಹಂದರ, ಪವರ್‌ಫುಲ್‌ ಅಭಿನಯ, ಸಾಂಸ್ಕೃತಿಕ ವಿಷಯಗಳಿಂದ ಭಾರತೀಯ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಇಂದು ಕನ್ನಡ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸೌಂಡ್‌ ಮಾಡುತ್ತಿವೆ.

ಕನ್ನಡ ಚಿತ್ರರಂಗದಲ್ಲಿ‌ ಆಲ್‌ಟೈಮ್ ಕ್ಲಾಸಿಕ್‌, ಸೂಪರ್‌ ಹಿಟ್ ಸಿನಿಮಾಗಳಿವು. ಅವು ಯಾವುವು?

ನಿರ್ದೇಶಕ: ಸಿದ್ಧಲಿಂಗಯ್ಯ

ಕಲಾವಿದರು: ರಾಜಕುಮಾರ್, ಭಾರತಿ

ಕೃಷಿ ನೆಚ್ಚಿಕೊಂಡು ಉದ್ಧಾರ ಆದ ಮನುಷ್ಯ ಹಾಗೂ ಕಷ್ಟದ ಬೆಲೆ ಗೊತ್ತಿಲ್ಲದೆ ಹಣದ ಹಿಂದೆ ಬೀಳುವ ವ್ಯಕ್ತಿಯ ಕುರಿತ ಕಥೆ ಇಲ್ಲಿದೆ.

ನಿರ್ದೇಶಕ: ಅನುಪ್ ಭಂಡಾರಿ

ಕಲಾವಿದರು: ನಿರೂಪ್ ಭಂಡಾರಿ, ರಾಧಿಕಾ ಚೆತನ್

ಈ ಮಿಸ್ಟರಿ ಥ್ರಿಲ್ಲರ್ ಚಿತ್ರವು ಕಾವ್ಯಾತ್ಮಕ ಕಥೆ ನಿರೂಪಣೆಯಿಂದ ಪ್ರೇಕ್ಷಕರನ್ನು ಸೆಳೆಯಿತು. ಇದು ಕನ್ನಡ ಚಿತ್ರರಂಗದ ಸೂಪರ್‌ ಹಿಟ್‌ ಸಿನಿಮಾ.

ನಿರ್ದೇಶಕ: ರಕ್ಷಿತ್ ಶೆಟ್ಟಿ

ನಟರು: ರಕ್ಷಿತ್ ಶೆಟ್ಟಿ, ಯಜ್ಞಾ ಶೆಟ್ಟಿ

ಈ ಸಿನಿಮಾವು ಕನ್ನಡದ ಒಂದು ಆಧುನಿಕ ಕಾಮಿಡಿ-ಡ್ರಾಮಾ. ಒಂದು ದಿನದ 24 ಗಂಟೆಗಳಲ್ಲಿ ನಡೆಯುವ ಕಥೆಯು ಪ್ರೇಕ್ಷಕರನ್ನು ರಂಜಿಸುತ್ತದೆ. ಥಿಯೇಟರ್‌ನಲ್ಲಿ ಅಷ್ಟು ಸೌಂಡ್‌ ಮಾಡದ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಮೆಚ್ಚಿದವರೇ ಜಾಸ್ತಿ.

ನಿರ್ದೇಶಕ: ರಾಮ್ ರೆಡ್ಡಿ

ಕಲಾವಿದರು: ತಿಮ್ಮಣ್ಣ, ಪೂಜಾ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾವು ಒಂದು ಕಾಮಿಡಿಯಾಗಿದ್ದು, ಮೂರು ತಲೆಮಾರಿನ ಕುಟುಂಬದ ಸದಸ್ಯರ ಸಾವಿನ ಬಗ್ಗೆ ಇದೆ. ಇದರ ನೈಜ ಚಿತ್ರಣ, ಸರಳ ಕಥಾಹಂದರವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ.

ನಿರ್ದೇಶಕ: ಫಣಿರಾಮಚಂದ್ರ

ನಟರು: ಅನಂತ್ ನಾಗ್, ಮಾಸ್ಟರ್‌ ಆನಂದ್‌, ಶ್ರುತಿ, ಮುಖ್ಯಮಂತ್ರಿ ಚಂದ್ರು, ರಮೇಶ್‌ ಭಟ್

ಕನ್ನಡ ಚಿತ್ರರಂಗದ ಜನಪ್ರಿಯ ಕಾಮಿಡಿ ಕ್ಲಾಸಿಕ್ ಸಿನಿಮಾ ಇದಾಗಿದೆ. ತಮಾಷೆಯ ಕಥೆ ಕೊತೆಗೆ ಅನಂತ್ ನಾಗ್‌ರವರ ಅದ್ಭುತ ಅಭಿನಯವು ಈ ಸಿನಿಮಾವನ್ನು ಎಲ್ಲ ಕಾಲಕ್ಕೂ ಇಷ್ಟವಾಗುವಂತೆ ಮಾಡಿದೆ.

ನಿರ್ದೇಶಕ: ಎಚ್ ಆರ್ ಭಾರ್ಗವ

ನಟರು: ರಾಜಕುಮಾರ್, ಬಿ ಸರೋಜಾದೇವಿ

ಕುಟುಂಬ, ಮೌಲ್ಯಗಳು, ಭಾವನೆಗಳ ಸುತ್ತ ಸುತ್ತುವ ಸಿನಿಮಾವು ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾವಾಗಿದೆ. ರಾಜಕುಮಾರ್‌ ನಟನೆಯು ಈ ಸಿನಿಮಾವನ್ನು ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿಸಿದೆ.

ನಿರ್ದೇಶಕ: ಪವನ್ ಕುಮಾರ್

ಕಲಾವಿದರು: ಸತೀಶ್ ನೀನಾಸಂ, ಶೃತಿ ಹರಿಹರನ್

ಕ್ರೌಡ್‌ಫಂಡಿಂಗ್ ಮೂಲಕ ನಿರ್ಮಾಣವಾದ ಈ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಸಿನಿಮಾವಾಗಿ ನಿಲ್ಲುತ್ತದೆ. ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಯೊಬ್ಬನ ಕನಸು, ರಿಯಾಲಿಟಿಯ ನಡುವಿನ ಗೊಂದಲವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದರ ಕಥೆ ಮತ್ತು ತಾಂತ್ರಿಕ ವಿಷಯಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತು.

ನಿರ್ದೇಶಕ: ಉಪೇಂದ್ರ

ಕಲಾವಿದರು: ಶಿವರಾಜಕುಮಾರ್, ಪ್ರೇಮಾ

ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾವು ಒಂದು ಮೈಲಿಗಲ್ಲು. ನೈಜ ಗ್ಯಾಂಗ್‌ಸ್ಟರ್‌ಗಳನ್ನು ಒಳಗೊಂಡ ಈ ಸಿನಿಮಾ 550 ಬಾರಿ ಥಿಯೇಟರ್‌ನಲ್ಲಿ ರೀ ರಿಲೀಸ್‌ ಆಗಿರೋದು ದೊಡ್ಡ ದಾಖಲೆಯಾಗಿದೆ. ಶಿವರಾಜಕುಮಾರ್‌, ಪ್ರೇಮಾ ನಟನೆ, ಉಪೇಂದ್ರರವರ ವಿಶಿಷ್ಟ ನಿರ್ದೇಶನವು ಈ ಸಿನಿಮಾವನ್ನು ಐಕಾನಿಕ್‌ ಆಗಿ ಮಾಡಿದೆ.

ನಿರ್ದೇಶಕ: ಸುನಿಲ್ ಕುಮಾರ್ ದೇಸಾಯಿ

ನಟರು: ವಿಷ್ಣುವರ್ಧನ್, ಅನಂತ್‌ ನಾಗ್‌, ಬಿಸಿ ಪಾಟೀಲ್‌

ಬ್ಯಾಂಕ್‌ ರೂಪಿಸಿದ ಆರ್ಕಿಟೆಕ್ಚರ್‌ ಅಪಹರಣ ಮಾಡಲಾಗುತ್ತದೆ. ಅವನಿಂದ ಬ್ಯಾಂಕ್‌ ಸ್ಟ್ರಕ್ಚರ್‌ ತಿಳಿದುಕೊಳ್ಳಲಾಗುತ್ತದೆ. ಉಗ್ರರು ಹಾಗೂ ವ್ಯವಸ್ಥೆಯ ನಡುವೆ ನಡೆಯುವ ಕತೆ ಇದಾಗಿದೆ.

ನಿರ್ದೇಶಕ: ದಿನೇಶ್ ಬಾಬು

ನಟರು: ಪುನೀತ್‌ ರಾಜ್‌ಕುಮಾರ್‌, ಪಾರ್ವತಿ ಮೆನನ್‌, ಸಿಹಿ ಕಹಿ ಚಂದ್ರು, ದಿಲೀಪ್‌ ರಾಜ್

ಬ್ರೇಕಪ್‌ ಮಾಡಿಕೊಂಡ ಹೀರೋ, ಇನ್ನೊಂದು ಹುಡುಗಿಯನ್ನು ಮದುವೆ ಆಗ್ತಾನೆ. ಆ ಹುಡುಗಿಯನ್ನು ಅವಳ ಹುಡುಗನ ಜೊತೆ ಸೇರಿಸುವ ಭರದಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬೀಳುವ ಕಥೆ ಈ ಸಿನಿಮಾದಲ್ಲಿದೆ.

Source link

Leave a Reply

Your email address will not be published. Required fields are marked *