ಖರ್ಗೆ ತವರಲ್ಲೇ ಇದೆಂಥಾ ಅಕ್ರಮ? ಟೆಂಡರ್ ಇಲ್ಲದೇ 2 ಕೋಟಿ ರೂ. ರಸ್ತೆ‌ ಕಾಮಗಾರಿ! ಗುತ್ತಿಗೆದಾರರಿಗೆ ಶಾಕ್

ಖರ್ಗೆ ತವರಲ್ಲೇ ಇದೆಂಥಾ ಅಕ್ರಮ? ಟೆಂಡರ್ ಇಲ್ಲದೇ 2 ಕೋಟಿ ರೂ. ರಸ್ತೆ‌ ಕಾಮಗಾರಿ! ಗುತ್ತಿಗೆದಾರರಿಗೆ ಶಾಕ್


ಟೆಂಡರ್ ಪ್ರಕ್ರಿಯೆ ಮುಗಿಯುವ ಮುಂಚಯೇ ರಸ್ತೆ ಡಾಂಬರೀಕರಣ

ಕಲಬುರಗಿ, ಡಿಸೆಂಬರ್ 17: ಕಲಬುರಗಿ (ಕಲಬುರಗಿ) ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮಗೆ ಯಾರು ಹೇಳುವವರು ಕೇಳುವವರಿಲ್ಲ ಎಂಬಂತೆ ದರ್ಬಾರ್ ಮೆರೆದಿದ್ದಾರೆ. ಏಕೆಂದರೆ, ರಾಜ್ಯದ ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಿರುವ ಅವರ ವಿರುದ್ಧ ಕೇಳಿಬಂದಿದೆ. ಆಳಂದ ಪಟ್ಟಣದ ಬಸ್ ನಿಲ್ದಾಣ ಎದುರಿಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ಮುಂಚಯೇ ರಸ್ತೆ ಡಾಂಬರೀಕರಣ ಕಾಮಗಾರಿ ಮುಗಿದು ಹೋಗಿದೆ! ಈ ಸುದ್ದಿ ನೋಡಿದರೆ ಖುದ್ದು ಲೋಕೋಪಯೋಗಿ ಸಚಿವರೇ ಬೆಚ್ಚಿಬಿಳಬಹುದೇನೋ ಅಂದಾಜು 2 ಕೋಟಿ ರೂ. ಮೊತ್ತದ ಡಾಂಬರ್ ರಸ್ತೆ ನಿರ್ಮಾಣಕ್ಕಾಗಿ ಕಳೆದ ಅಕ್ಟೋಬರ್‌ನಲ್ಲಿ ಲೋಕೋಪಯೋಗಿ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಅದರಂತೆ ಹಲವು ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿದ್ದರು.

ತಮಗೆ ಟೆಂಡರ್ ಸಿಗಬಹುದು ಎಂದು ಗುತ್ತಿಗೆದಾರರು ಕಾದಿದ್ದಷ್ಟೇ ಬಂತು. ಆದರೆ, ಅಲ್ಲಿ ಹೊಸದಾಗಿ ರಸ್ತೆ ನಿರ್ಮಾಣವಾಗಿ ಬಿಟ್ಟಿತ್ತು. ಇದನ್ನು ಕಂಡು ಖುದ್ದು ಕೆಲ ಗುತ್ತಿಗೆದಾರರೇ ಶಾಕ್ ಆಗಿದ್ದರು. ಏಕೆಂದರೆ, ಟೆಂಡರ್ ಪ್ರಕ್ರಿಯೆ ಮುಗಿಯದೇ ರಸ್ತೆ ಕಾಮಗಾರಿ ಮುಗಿಸಿದ್ದು ಎಂಬ ಪ್ರಶ್ನೆ ಅವರನ್ನು ಕಾಡಿತ್ತು. ಆದರೆ, ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ಮುಗಿಯುವವೇ ಕಮಿಷನ್ ಆಸಗೆ ಬರೋಬ್ಬರಿ 2 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಮಾಡಿ ಮುಗಿಸಿರುವ ಆರೋಪ ಈಗ ತೋರಿಸಿದೆ.

ರಸ್ತೆ ಕಾಮಗಾರಿ ವೇಳೆ ಸರ್ಕಾರದ ನಿಯಮಾವಳಿ ಗಾಳಿಗೆ ತೂರಿದ್ದಲ್ಲದೇ, ನಿಯಮ, ಗುಣಮಟ್ಟ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಸರ್ಕಾರದ ಹಣವನ್ನು ಬೇಕಾಬಿಟ್ಟಿಯಾಗಿ ಖರೀದಿಸಲಾಗಿದೆ. ಅಷ್ಟೆ ಇನ್ನೊಂದು ಕಡೆ ಕೆಲ ತಿಂಗಳ ಹಿಂದಷ್ಟೆ ನಿರ್ಮಾಣಕ್ಕೆ ಮತ್ತೊಂದು ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಇದು ಸ್ಪಷ್ಟವಾಗಿ ಕಳಪೆ ಕಾಮಗಾರಿ ಎಂಬುದು ಗೊತ್ತಾಗುವಂತಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ನಾಲ್ಕೈದು ತಿಂಗಳಲ್ಲೇ ಕಿತ್ತುಹೋದ ರಸ್ತೆ: ಗುತ್ತಿಗೆದಾರನ ಬಿಲ್ ಕ್ಲಿಯರ್!

ಕಲಬುರಗಿ ಆಳಂದ ರಸ್ತೆ

ಆಳಂದ ಪಟ್ಟಣದಿಂದ ತೀರ್ಥ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣವಾಗಿ ನಾಲ್ಕೈದು ತಿಂಗಳು ಕಳೆದಿಲ್ಲ. ಅದಾಗಲೇ ಸಂಪೂರ್ಣವಾಗಿ ಕಿತ್ತು ಹೋಗಿದೆ. ಅಲ್ಲಿ ರಸ್ತೆ ಕಾಮಗಾರಿ ಮಾಡಿದ್ದಾರೋ ಎಂಬ ಕುರುಹು ಕೂಡ ಇಲ್ಲದ ರೀತಿಯಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಹಿಡಿ ಶಾಪಿಂಗ್ ಮಾಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಕಾಂಪೌಂಡ್ ಕಟ್ಟುತ್ತೆವೆಂದು ಬೋಗಸ್ ಬಿಲ್, ವಸತಿ ಶಾಲೆ ಕಾಂಪೌಂಡ್ ಹೆಸರಲ್ಲೂ ಬೋಗಸ್ ಬಿಲ್ ಮಾಡಲಾಗಿದೆ ಎಂಬ ಆರೋಪಗಳೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಇಷ್ಟೆಲ್ಲ ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಉಡುಪಿಯಲ್ಲಿ ಸಿಡಿದೆದ್ದ ಬಿಲ್ಲವ ಸಮುದಾಯ, ಏನಿದು ಕೇಸ್?

ರಾಜ್ಯದ ಅನೇಕ ಕಡೆಗಳಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಶಾಸಕರು ಗೋಳಾಡುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ ಬಂದಿರುವ ಅನದಾನವೇ ಮಣ್ಣು ಪಾಲಾಗುತ್ತಿದ್ದರೂ ಹೇಳುವವರು ಕೇಳುವವರು ಇಲ್ಲ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *