
ಇದಕ್ಕೆ ಉತ್ತರಿಸಿದ ಅಲ್ಲು ಅರವಿಂದ್, ‘ಹೌದು, ಈಗಿನ ಸ್ಟಾರ್ ಹೀರೋಗಳು ಕ್ಲಾಸ್ ಸಿನಿಮಾಗಳನ್ನು ಬದಿಗಿಡುತ್ತಿದ್ದಾರೆಂದೇ ನಾನೂ ಭಾವಿಸುತ್ತೇನೆ. ‘ಪುಷ್ಪ 2’ ನಂತರ ನನ್ನ ಮಗ ಅಲ್ಲು ಅರ್ಜುನ್ನನ್ನು, ಈಗ ಯಾವ ತರಹದ ಸಿನಿಮಾ ಮಾಡಲು ಬಯಸುತ್ತೀಯಾ ಎಂದು ಕೇಳಿದೆ. ಕ್ಯಾಶುವಲ್ ಆಗಿ ಚರ್ಚಿಸುತ್ತಾ, ‘ನೀನು ಈಗ ಸಾಫ್ಟ್ ರೋಲ್ ಮಾಡಿದರೆ ಹೇಗಿರುತ್ತೆ? ಒಂದು ಕುಟುಂಬದಲ್ಲಿ ಚಿಕ್ಕ ಮಗನಾಗಿ, ಕುಟುಂಬಕ್ಕಾಗಿ ತ್ಯಾಗ ಮಾಡುವ ಪಾತ್ರದಲ್ಲಿ ನಟಿಸಿದರೆ ಏನಾಗುತ್ತೆ?’ ಎಂದು ಕೇಳಿದೆ. ಅದಕ್ಕೆ ಬನ್ನಿ, ‘ಡ್ಯಾಡಿ, ಸದ್ಯಕ್ಕೆ ನಾನು ಗೊಂದಲದಲ್ಲಿದ್ದೇನೆ. ನೀವು ಕಥೆ ತನ್ನಿ. ಕಥೆ ಅದ್ಭುತ ಎನಿಸಿದರೆ ನಾನು ಆ ಸಿನಿಮಾ ಮಾಡುವ ಧೈರ್ಯ ಮಾಡಬಹುದು’ ಎಂದನು’ ಎಂದು ಅಲ್ಲು ಅರವಿಂದ್ ತಿಳಿಸಿದರು. ‘ಪುಷ್ಪ 2’ ನಂತರ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದಲ್ಲಿ 800 ಕೋಟಿ ಬಜೆಟ್ನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.