
ನಟಿ ಮೃಣಾಲ್ ಠಾಕೂರ್ (ಮೃನಾಲ್ ಠಾಕೂರ್) ಬಹು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ಮೂಲ ಮರಾಠಿ ಆದರೂ ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗ. ಮರಾಠಿ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುವ ಮೃಣಾಲ್ ಠಾಕೂರ್, ತೆಲುಗು ಪ್ರದರ್ಶನಕ್ಕೆ ವಿಶೇಷ ಬಾಂಧವ್ಯ ನಟ. ತೆಲುಗಿನಲ್ಲಿ ಕೆಲವು ಅದ್ಭುತವಾದ ಪಾತ್ರಗಳು ಅವರಿಗೆ ಸಿಕ್ಕಿದ್ದು, ಅಷ್ಟೇ ಅದ್ಭುತ ಪ್ರೀತಿ ಸಹ ತೆಲುಗು ಪ್ರದರ್ಶನದಿಂದ ಸಿಕ್ಕಿದೆ. ಇದೀಗ ಮೃಣಾಲ್ ಠಾಕೂರ್ ನಟಿಸಿರುವ ‘ಡಕೈತ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಡಿರುವ ಮಾತಿಗೆ ನಾಚಿ ನೀರಾಗಿದ್ದಾರೆ.
ಮೃಣಾಲ್ ಠಾಕೂರ್ ನಾಯಕಿಯಾಗಿ, ಅಡಿವಿ ಶೇಷ್ ನಾಯಕನಾಗಿ ನಟಿಸಿರುವ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇದೇ ಕಾರಣಕ್ಕೆ ಸಿನಿಮಾದ ಸಕ್ಸಸ್ ಮೀಟ್ ಅನ್ನು ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರಿಗೆ ಆಶೀರ್ವಾದ ಮಾಡಿದರು. ಅಲ್ಲು ಅರವಿಂದ್ ಅವರ ಆಶೀರ್ವಾದ ಕೇಳಿ ನಾಚಿ ನೀರಾದರು ಮೃಣಾಲ್.
ವೇದಿಕೆಯ ಮೇಲೆ ಮಾತನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರನ್ನುದ್ದೇಶಿಸಿ, ‘ನೀವು ಇಲ್ಲೇ (ಆಂಧ್ರ-ತೆಲಂಗಾಣ) ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗಿದ್ದು ಇಲ್ಲಿಯೇ ಸೆಟಲ್ ಆಗಬೇಕು, ಇದು ನನ್ನ ಹಾರಿಕೆ’ ಎಂದು ಹೇಳಿದರು. ಮುಂದುವರೆದು ಮಾತನಾಡಿ, ‘ಹಿಂದೆ ಒಬ್ಬ ನಟಿಗೆ ಹೀಗೆಯೇ ಆಶೀರ್ವಾದ ಮಾಡಿದ್ದೆ. ಆ ನಟಿ ಈಗ ತೆಲುಗು ಸೊಸೆ ಆಗಿದ್ದಾರೆ’ ಎಂದರು.
ಇದನ್ನೂ ಓದಿ:ಸಹೋದರನಿಗಾಗಿ ತ್ಯಾಗ ಮಾಡಿದ್ದಾರೆ ನಟಿ ಮೃಣಾಲ್ ಠಾಕೂರ್
ಉತ್ತರ ಭಾರತದ ನಟಿ ಲಾವಣ್ಯಾ ತ್ರಿಪಾಠಿ ಅವರಿಗೂ ಸಹ ಅಲ್ಲು ಅರವಿಂದ್ ಅವರು ಹೀಗೆಯೇ ಆಶೀರ್ವಾದ ಮಾಡಿದ್ದರು. ಬಳಿಕ ಲಾವಣ್ಯಾ ತ್ರಿಪಾಠಿ ಮೆಗಾ ಫ್ಯಾಮಿಲಿ ನಟ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದು, ಈಗ ಮೆಗಾಸ್ಟಾರ್ ಫ್ಯಾಮಿಲಿಯ ಸೊಸೆ ಆಗಿದ್ದಾರೆ. ಈಗ ಮೃಣಾಲ್ ಠಾಕೂರ್ ಅವರಿಗೂ ಅದೇ ಆಶೀರ್ವಾದ ಮಾಡಿದ್ದಾರೆ ಅಲ್ಲು ಅರವಿಂದ್. ‘ನಟನೆ, ನಿಮ್ಮ ಅಂದ ಎಲ್ಲವೂ ತೆಲುಗು ಪ್ರದರ್ಶನಕ್ಕೆ ಬಹಳ ಇಷ್ಟವಾಗಿದೆ. ನಮ್ಮ ಚಿತ್ರರಂಗಕ್ಕೆ ನೀವಿರಬೇಕು. ನೀವು ಇಲ್ಲಿಯೇ ಯಾರಾದರೂ ಒಳ್ಳೆಯವರನ್ನು ನೋಡಿ ಮದುವೆ ಆದರೆ ನಿಮ್ಮನ್ನು ಇಲ್ಲಿಯೇ ಕಟ್ಟಬಹುದು, ಅಲ್ಲು ಅರವಿಂದ್.
ನಿರ್ಮಾಪಕ ಅಲ್ಲು ಅರವಿಂದ್ ಅವರ ಮಾತು ಕೇಳಿ ನಟಿ ಮೃಣಾಲ್ ಠಾಕೂರ್ ನಾಚಿ ನೀ ಇದ್ದಾರೆ. ಅಂದಹಾಗೆ ತಿಂಗಳುಗಳ ಹಿಂದಷ್ಟೇ ಧನುಶ್ ಹಾಗೂ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಸುತ್ತಿದ್ದರು, ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳೆಂದು ಬಳಿಕ ಸ್ಪಷ್ಟನೆ ನೀಡಲಾಯ್ತು. ಸದ್ಯಕ್ಕೆ ಮೃಣಾಲ್ ಠಾಕೂರ್ ಹೆಸರು ಯಾರೊಟ್ಟಿಗೂ ಥಳುಕು ಹಾಕಿಕೊಂಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ