Headlines

‘ರಾಕಾ’ ಆಗಿ ಅಲ್ಲು ಅರ್ಜುನ್: ಹೀರೋನಾ-ವಿಲನ್ನಾ?

‘ರಾಕಾ’ ಆಗಿ ಅಲ್ಲು ಅರ್ಜುನ್: ಹೀರೋನಾ-ವಿಲನ್ನಾ?


'ರಾಕಾ' ಆಗಿ ಅಲ್ಲು ಅರ್ಜುನ್: ಹೀರೋನಾ-ವಿಲನ್ನಾ?

ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಹುಟ್ಟುಹಬ್ಬ ಇಂದು (ಏಪ್ರಿಲ್ 08). ಹುಟ್ಟುಹಬ್ಬದ ಪ್ರಯುಕ್ತ ಅಲ್ಲು ಅರ್ಜುನ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಫ್ಯಾಂಟಸಿ ಸಿನಿಮಾದ ಕಥೆ ಒಳಗೊಂಡಿದೆ. ಇದೀಗ ಸಿನಿಮಾದ ಪೋಸ್ಟರ್ ಜೊತೆಗೆ ಹೆಸರು ಬಿಡುಗಡೆ ಮಾಡಿದೆ, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ.

ಅಲ್ಲು ಅರ್ಜುನ್ ನಟಿಸಿ, ಅಟ್ಲಿ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ‘ರಾಕಾ’ ಎಂದು ಹೆಸರಿಡಲಾಗಿದೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ರಾಕ್ಷಸನ ರೀತಿ ಕಾಣಿಸಿಕೊಂಡಿದ್ದಾರೆ. ದೈತ್ಯ ಕೈ, ಚೂಪಾದ ಉಗುರು, ಕೂಡದ ತಲೆ, ತೀಕ್ಷ್ಣ ಕಣ್ಣುಗಳು, ಎಲ್ಲವನ್ನೂ ನೋಡಿದರೆ ಅಲ್ಲು ಅರ್ಜುನ್, ರಾಕ್ಷಸನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ರಾಕಾ’, ಅಲ್ಲು ಅರ್ಜುನ್ ಅವರ ರಾಕ್ಷಸನ ಪಾತ್ರದ ಹೆಸರೇ ಇರಬಹುದು ಎಂಬ ಅನುಮಾನವೂ ಇದೆ.

ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾ ಫ್ಯಾಂಟಸಿ ಕತೆಯುಳ್ಳ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ದೈತ್ಯ ಪ್ರಾಣಿಗಳು, ವಿಚಿತ್ರ ಜೀವಿಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಾಹನಗಳು, ಚಿತ್ರ, ವಿಚಿತ್ರ ಸ್ಥಳಗಳು ಇರಲಿ. ಸಿನಿಮಾದ ಕತೆ ಸಹ ಭೂಮಿಯ ಮೇಲಲ್ಲದೆ ಬೇರೆ ಯಾವುದೋ ಗ್ರಹದಲ್ಲಿ ಎಲ್ಲವೂ ಎನ್ನಲಾಗುತ್ತಿದೆ. ಅಲ್ಲಿ ಮಾನವರು ಮತ್ತು ದಾನವರ ನಡುವೆ ಯುದ್ಧದ ಕಥೆ ‘ರಾಕಾ’ ಸಿನಿಮಾ ಒಳಗೊಂಡಿದೆಯಂತೆ.

ಇದನ್ನೂ ಓದಿ:ತುಂಬಾನೇ ಶ್ರೀಮಂತ ಅಲ್ಲು ಅರ್ಜುನ್; ಅವರ ಬಳಿ ಇರೋ ದುಬಾರಿ ವಸ್ತುಗಳಿವು

ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ ನೋಡಿದರೆ ಅಲ್ಲು ಅರ್ಜುನ್ ದ್ವಿಪಾತ್ರದಲ್ಲಿ ನಟಿಸುತ್ತಿರಬಹುದಾದ ಅನುಮಾನ ಮೂಡುತ್ತಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸುತ್ತಿದ್ದಾರೆ, ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸನ ನೆಟ್ ವರ್ಕ್ಸ್ ನ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳು ಸಹ ಕೆಲಸ ಮಾಡುತ್ತಿವೆ. ಸಿನಿಮಾ ಇದೆ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *