
ಟಾಲಿವುಡ್ನ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಅವರ ಅಭಿಮಾನಿಗಳು ಸದ್ಯ ಏಪ್ರಿಲ್ 8ಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ನಿರ್ದೇಶಕ ಅಟ್ಲೀ (ಅಟ್ಲಿ) ಸಜ್ಜಾಗುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿ ಕೇಳಿಬರುತ್ತಿವೆ. ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಏಪ್ರಿಲ್ 8 ರಂದು ಅಧಿಕೃತವಾಗಿ ಶೀರ್ಷಿಕೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಕೇವಲ ಒಂದು ಪೋಸ್ಟರ್ ಮೂಲಕ ಹೆಸರು ಪ್ರಕಟಿಸುತ್ತಾರೋ ಅಥವಾ ಒಂದು ಭರ್ಜರಿ ವಿಡಿಯೋ ಝಲಕ್ ತೋರಿಸುತ್ತಾರೋ ಎಂಬುದು ಸದ್ಯದ ಸಸ್ಪೆನ್ಸ್. ಅಭಿಮಾನಿಗಳ ನಿರೀಕ್ಷೆಯಂತೆ ಏನಾದರೂ ಕಾಂಟೆಂಟ್ ನೀಡಲೇಬೇಕು ಅಟ್ಲೀ ಶ್ರಮಿಸುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ವಿಶೇಷ ವೀಡಿಯೊ ಅಥವಾ ಟೈಟಲ್ ಟೀಸರ್ ಸಿದ್ಧಪಡಿಸಲು ಬೇಕಾದ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ.
ಹುಟ್ಟುಹಬ್ಬದ ವೇಳೆಗೆ ಕಂಟೆಂಟ್ ಸಂಪೂರ್ಣವಾಗಿ ರೆಡಿಯಾಗುತ್ತದೆಯೇ ಎಂಬ ಬಗ್ಗೆ ಅಟ್ಲೀ ಅವರಿಗೆ ಇನ್ನೂ ಪೂರ್ಣ ಪ್ರಮಾಣದ ಖಾತ್ರಿ ಇಲ್ಲ. ಒಂದು ವೇಳೆ ತಾಂತ್ರಿಕ ಕೆಲಸಗಳು ವಿಳಂಬವಾದರೆ ಕೇವಲ ಅಧಿಕೃತ ಘೋಷಣೆಯಷ್ಟೇ ಹೊರಬೀಳಬಹುದು. ಭಾರಿ ಬಜೆಟ್ ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ‘ಪುಷ್ಪ 2’ ಬಳಿಕ ಬರುತ್ತಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.
23 ವರ್ಷಗಳ ಐಕಾನ್ ಸ್ಟಾರ್ @ಅಲ್ಲುಅರ್ಜುನ್ ಭಾರತೀಯ ಚಿತ್ರರಂಗದಲ್ಲಿ.
ಉತ್ಸಾಹ, ಸಮರ್ಪಣೆ ಮತ್ತು ನಿರಂತರ ವಿಕಾಸದಿಂದ ರೂಪುಗೊಂಡ ಪ್ರಯಾಣ. ಸ್ಮರಣೀಯ ಪ್ರದರ್ಶನಗಳಿಂದ ಹಿಡಿದು ಶೈಲಿ, ನೃತ್ಯ ಮತ್ತು ನಟನೆಯಲ್ಲಿ ಮಾನದಂಡಗಳನ್ನು ಹೊಂದಿಸುವವರೆಗೆ, ಅವರು ತಲೆಮಾರುಗಳಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ.
ಇಲ್ಲಿ 23 ಅನ್ನು ಆಚರಿಸಲಾಗುತ್ತಿದೆ… pic.twitter.com/9vZfnxGyD4
— ತಂಡ ಅಲ್ಲು ಅರ್ಜುನ್ (@TeamAAOfficial) ಮಾರ್ಚ್ 28, 2026
ಈ ಚಿತ್ರವನ್ನು ಸುಮಾರು 800 ಕೋಟಿ ರೂ.ಗಳ ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಜಾನ್ವಿ ಕಪೂರ್ ಅವರಂತಹ ಸ್ಟಾರ್ ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅಟ್ಲೀ ಅವರು ಈ ಚಿತ್ರಕ್ಕಾಗಿ ಪ್ಯಾರಲಲ್ ಯೂನಿವರ್ಸ್ ಎಂಬ ವಿಭಿನ್ನ ಕಾನ್ಸೆಪ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ
ಅಲ್ಲು ಅರ್ಜುನ್ ಅವರು ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಭಾರತದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿ ಬಳಗವನ್ನು ಅವರು ತೋರಿಸಿದ್ದಾರೆ. 23 ವರ್ಷ ಪೂರೈಸಿದ ಈ ವಿಶೇಷ ಸಂದರ್ಭದಲ್ಲಿ, ಅವರ ತಂಡವು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯ ಪೋಸ್ಟ್ ಅನ್ನು ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

