Headlines

ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ

ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ


ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ಬಾಕ್ಸ್ ಆಫೀಸ್‌ನಲ್ಲಿ ಅವರ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಪುತ್ರಿ ಆರ್ಹಾ ಸಹ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲ ಅರ್ಜುನ್ ಎಷ್ಟು ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿರಬಹುದು ಆದರೆ ಅಪರೂಪದ ಆರಾ ಬರೆದಿರುವ ಈ ದಾಖಲೆ ಬಹಳದ್ದು ಮತ್ತು ವಿಶೇಷವಾದುದು. ಚುರುಕಿನ ಬಾಲಕಿಯಾದ ಆರ್ಹಾ, ಚೆಸ್ ಕ್ಷೇತ್ರದಲ್ಲಿ ಹೊಸ ದಾಖಲೆಗಾಗಿ ಬರೆದಿದ್ದಾರೆ.

ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಪುತ್ರಿ ಆರ್ಹಾ ಎಳವೆಯಿಂದಲೇ ಚೆಸ್ ಬಗ್ಗೆ ಅತೀವ ಆಸಕ್ತಿ ಹೊಂದಿರುವವರು, ಕೆಲವು ವರ್ಷಗಳ ಹಿಂದೆಯೇ ಒಟ್ಟಿಗೆ ಹಲವರೊಡನೆ ಚೆಸ್ ಆಡಿ ಎಲ್ಲರನ್ನೂ ಸೋಲಿಸಿದರು. ಇದೀಗ ಚೆಸ್ ಕ್ಷೇತ್ರದಲ್ಲಿಯೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಆರ್ಹಾ ಇದೀಗ ಅತ್ಯಂತ ಕಿರಿಯ ಚೆಸ್ ಟ್ರೈನರ್ ಎನಿಸಿಕೊಂಡಿದ್ದಾರೆ. ಅವರ ಹೆಸರು ಇದೀಗ ‘ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದಿದ್ದಾರೆ.

ಅಲ್ಲು ಆರ್ಹಾ ತನ್ನ ಐದನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಚೆಸ್ ತರಬೇತುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್‌ನ ಹೈಟೆಕ್ ಸಿಟಿಯಲ್ಲಿರುವ ರಾಯ್ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರ್ಹಾ, ಕೇವಲ ಎರಡು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಚೆಸ್ ತರಬೇತಿ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಆರ್ಹಾ 30 ಕಠಿಣ ಚೆಸ್ ಪಜಲ್ಗಳನ್ನು ಸಹ ಪೂರ್ಣಗೊಳಿಸಿದಾರಂತೆ.

ಇದನ್ನೂ ಓದಿ:ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್‌ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿ ಆರ್ಬಿಟರ್ ಲಿಂಗಂ ಬಾಲಾಜಿ ಅವರ ನೇತೃತ್ವದಲ್ಲಿ ನಡೆಸಿದ ಕೌಶಲ್ಯ ಪರೀಕ್ಷೆಯಲ್ಲಿ ಅರ್ಹಾ ಅತ್ಯುತ್ತಮ ಪ್ರದರ್ಶನ. ಸುಮಾರು 30 ಕ್ಕೂ ಹೆಚ್ಚು ಚೆಸ್ ಪಜಲ್ಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಮೂಲಕ ತಮ್ಮ ಜಾಣ್ಮೆಯನ್ನು ಪರೀಕ್ಷಿಸಿದ್ದಾರೆ. ಐದನೇ ವಯಸ್ಸಿಗೆ ಇದು ಸಾಮಾನ್ಯ ಸಾಧನೆಯೇನಲ್ಲ. ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ ಮತ್ತು ಅಜ್ಜ ಅಲ್ಲು ಅರವಿಂದ್ ಅವರ ಸಮ್ಮುಖದಲ್ಲಿ ಅರ್ಹ ಈ ಗೌರವಕ್ಕೆ ಪಾತ್ರರಾದರು. ಸೋಶಿಯಲ್ ಮೀಡಿಯಾದಲ್ಲಿ ಅರ್ಹಾ ಅವರ ಅವಾರ್ಡ್ ಸ್ವೀಕರಿಸುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಸಹಜವಾಗಿಯೇ ಕುಟುಂಬವು ಆರ್ಹಾರ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ.

ಅರ್ಹಾ ಕೇವಲ ಚೆಸ್ನಲ್ಲಿ ಕಾಣಿಸಿಕೊಂಡಿದೆ, ನಟನೆಯಲ್ಲೂ ಸೈ ಎನಿಸಿಕೊಂಡಿದೆ. ಸಮಂತಾ ಅಭಿನಯದ ‘ಶಾಕುಂತಲಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದರಾಗಿದ್ದಾರೆ. ಅದಕ್ಕೂ ಮುಂಚೆ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಸಹ ಆರ್ಹಾ ನಟಿಸಿದ್ದರು. ‘ಅಂಜಲಿ, ಅಂಜಲಿ’ ಹಾಡಿನಲ್ಲಿ ಆರ್ಹಾ ಸಖತ್ ಆಗಿ ನಟಿಸಿದ್ದರು. ಆ ವಿಡಿಯೋನಲ್ಲಿ ಅಲ್ಲು ಅರ್ಜುನ್ ಸಹ ಇಬ್ಬರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *