ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಪುಷ್ಪ 2’ ರಿಲೀಸ್ ಆದ ಬಳಿಕ ಅವರ ಖ್ಯಾತಿ ಸಾಕಷ್ಟು ಹೆಚ್ಚಾಗಿದೆ. ಅವರ ಖ್ಯಾತಿ ಪ್ಯಾನ್ ಭಾರತದಲ್ಲಿ ಹಬ್ಬಿದೆ. ಈಗ ಅವರ ಭೇಟಿ ಬರೋಬ್ಬರಿ 42 ಕಠಿಣ ನಿಯಮಗಳಿವೆ ಎಂದು ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಪಾಡ್ ಕಾಸ್ಟ್ನಲ್ಲಿ ಆರೋಪ ಮಾಡಿದ್ದಾರೆ. ಈ ವಿಡಿಯೋಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಈ ಬಗ್ಗೆ ಮಾತನಾಡಿದ್ದರು. ಅವರು ಅಲ್ಲು ಅರ್ಜುನ್ ಜೊತೆ ಶೂಟ್ ಒಂದರಲ್ಲಿ ಭಾಗಿ ಆಗಿದ್ದರಂತೆ. ಆಗ ತಮಗೆ ಸಮಸ್ಯೆ ಇದೆ ಎಂದು ಹೇಳಿದರು. ನಟನ ಭೇಟಿಯೆಂದರೆ ಸಾಕಷ್ಟು ಮ್ಯಾನೇಜರ್‌ಗಳನ್ನು ಸಂಪರ್ಕಿಸಬೇಕು, ನಟನ ಭೇಟಿಯ ಸಮಯದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ 42 ನಿಯಮಗಳಿವೆ ಎಂದು ಆರೋಪಿಸಿದ್ದರು.
ಹ್ಯಾಂಡ್ ಶೇಕ್ ಮಾಡಬಾರದು, ನಟನ ದಿಟ್ಟಿಸಿ ನೋಡಬಾರದು ಎಂಬಿತ್ಯಾದಿ ವಿಷಯಗಳು ನಿಯಮದಲ್ಲಿ ಇವೆ. ಈ ಸಂಬಂಧ ಅಲ್ಲು ಅರ್ಜುನ್ ತಂಡ ಅಧಿಕೃತ ನೋಟ್ ಒಂದನ್ನು ರಿಲೀಸ್ ಮಾಡಿದ್ದು, ಇದು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಈ ರೀತಿ ಆರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಅಲ್ಲು ಅರ್ಜುನ್ ವಿಶ್ವಮಟ್ಟದಲ್ಲಿ ಇದೆ. ಹೀಗಾಗಿ, ಅವರ ಬಗ್ಗೆ ಈ ರೀತಿ ಸುಳ್ಳು ಆರೋಪ ಮಾಡುವುದರಿಂದ ಅವರ ಕರಿಯರಿಗೆ ಹಾನಿಯಾಗುತ್ತದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದೆ. ಪಾಡ್ಕಾಸ್ಟ್ ಒಂದರಲ್ಲಿ ಹೇಳಿದ ವಿಡಿಯೋ ಇದಾಗಿದ್ದು, ಈ ವಿವಾದದ ಬಳಿಕ ಆ ವಿಡಿಯೋವನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ: ಬಾಲಿವುಡ್ ಅಲ್ಲ ಸ್ಟಾರ್ ನಿರ್ದೇಶಕನ ಜೊತೆ ಅರ್ಜುನ್ ಸಿನಿಮಾ?
ಅಲ್ಲು ಅರ್ಜುನ್ ಅವರು ಸದ್ಯ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶೀಘ್ರವೇ ಅವರು ಮತ್ತೊಂದು ಹೊಸ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.