ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇತ್ತೀಚೆಗೆ ‘ದಿ ಫ್ಯಾಮಿಲಿ ಮ್ಯಾನ್’ (ಕುಟುಂಬ ಪುರುಷ 3) ಸರಣಿಯ ಮೂರನೇ ಸೀಸನ್ ಪ್ರಸಾರ ಆರಂಭವಾಗಿದೆ. ಈ ಸರಣಿ ನೋಡುವ ಪ್ರೇಕ್ಷಕ ಸುಸ್ತಾಗಿ ಹೋಗಿದ್ದಾನೆ. ಜಾಹೀರಾತೊಳಗೆ ವೆಬ್ ಸೀರಿಸ್ ಅಥವಾ ವೆಬ್ ಸೀರಿಸ್ ಒಳಗೆ ಜಾಹೀರಾತೋ ಎಂಬಂತಾಗಿದೆ. ಒಂದು ಗಂಟೆಯ ಎಪಿಸೋಡ್‌ಗೆ ಬರೋಬ್ಬರಿ ನಾಲ್ಕರಿಂದ ಐದು ಜಾಹೀರಾತು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅಮೇಜಾನ್ ಪ್ರೈಮ್ ಚಂದಾದಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಸದಸ್ಯತ್ವ ಪಡೆದ ನಂತರ ಅಲ್ಲಿ ಯಾವುದೇ ಜಾಹೀರಾತು ಹಾಕುವುದಿಲ್ಲ. ಅಮೇಜಾನ್ ಪ್ರೈಮ್ ವಿಡಿಯೋದವರು ಮೊದಲು ಇದೇ ರೀತಿಯಲ್ಲಿ ಇದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. 1499 ರೂಪಾಯಿ ಕೊಟ್ಟು ವರ್ಷದ ಚಂದಾದಾರರು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಸದಸ್ಯತ್ವ ಹೊಂದಿದ್ದರೂ ಕೆಲವು ಸಿನಿಮಾಗಳನ್ನು ರೆಂಟ್‌ಗೆ ನೋಡಬೇಕಾದ ಪರಿಸ್ಥಿತಿ ಇದೆ.
ಅಮೆಜಾನ್ ಪ್ರೈಮ್ ಇದೀಗ ಅತ್ಯಂತ ನಿರಾಶಾದಾಯಕ OTT ಪ್ಲಾಟ್ಫಾರ್ಮ್ ಆಗಿರಬೇಕು.
ಮೊದಲಿಗೆ, ನಾವು ಚಂದಾದಾರಿಕೆಗೆ ಪಾವತಿಸುತ್ತೇವೆ. ನಂತರ, ಜಾಹೀರಾತುಗಳನ್ನು ನಿಲ್ಲಿಸಲು ಹೆಚ್ಚುವರಿ ಹಣವನ್ನು ಪಾವತಿಸಲು ನಮಗೆ ಕೇಳಲಾಗುತ್ತದೆ.
ಸಂಪೂರ್ಣವಾಗಿ ಹಾಸ್ಯಾಸ್ಪದ – ಪಾವತಿಸಿದ ಪ್ಲಾಟ್ಫಾರ್ಮ್ನಲ್ಲಿ ಪ್ರತಿ 15-20 ನಿಮಿಷಗಳಿಗೊಮ್ಮೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.
ವೀಕ್ಷಿಸಲು Amazon Prime ಗೆ ಪಾವತಿಸಲಾಗುತ್ತಿದೆ…
– ವಿಭೋರ್ ವರ್ಷ್ನೇ (@nakulvibhor) ನವೆಂಬರ್ 23, 2025
ಹೇ @PrimeVideoIN ನೀವು ದಿ ಫ್ಯಾಮಿಲಿ ಮ್ಯಾನ್ s3 ಕ್ಲಿಪ್ಪಿಂಗ್ಗಳ ಅವಧಿಯನ್ನು ಕಡಿಮೆ ಮಾಡಬಹುದೇ? ನನ್ನ ಜಾಹೀರಾತುಗಳನ್ನು ಶಾಂತಿಯುತವಾಗಿ ವೀಕ್ಷಿಸಲು ಸಾಧ್ಯವಿಲ್ಲ.
– ವೆಂಕಟ್ ರಮಣನ್ (@yesvenks) ನವೆಂಬರ್ 23, 2025
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ‘ಅಮೇಜಾನ್ ಪ್ರೈಮ್ ವಿಡಿಯೋದವರು ಭಾರತದಲ್ಲಿ ತಮ್ಮ ಗುಂಡಿಯನ್ನು ತಾವೇ ತೊಡಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇನ್ನೂ ಕೆಲವು ‘1500 ರೂಪಾಯಿ ಕೊಟ್ಟ ಮೇಲೂ ಜಾಹೀರಾತು ನೋಡಬೇಕು ಎಂದರೆ ಅರ್ಥವೇನು? ಇದರ ಬದಲು ಪೈರಸಿ ಕಾಪಿ ನೋಡಿದರೆ ಉತ್ತಮ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಹೇಗಿದೆ ಫ್ಯಾಮಿಲಿ ಮ್ಯಾನ್ 3’; ಮನೋಜ್ ನಟನೆಯ ಸೀರಿಸ್ ನೋಡಿದವರು ಹೇಳಿದ್ದಿಷ್ಟು
ಅಮೇಜಾನ್ ಪ್ರೈಮ್ ವಿಡಿಯೋ ಪ್ರೈಮ್ ಮೆಂಬರ್ ಶಿಪ್ ಪಡೆಯಲು ಈಗ ನೀವು 1499 ರೂಪಾಯಿ ಮಾತ್ರ ಪಾವತಿಸಿದರೆ ಸಾಲುವುದಿಲ್ಲ. ಹೆಚ್ಚುವರಿಯಾಗಿ 699 ರೂಪಾಯಿ ನೀಡಬೇಕು. ಅಂದರೆ ಮಾತ್ರ ಜಾಹೀರಾತು ರಹಿತವಾಗಿ ಸಿನಿಮಾ/ಸರಣಿ ಪ್ರಸಾರ ಕಾಣಿಸುತ್ತದೆ. ಇದು ಸಿನಿಮಾ ನೋಡುವ ಅನುಭವ ಕೊಲ್ಲುತ್ತಿದೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.