ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಮೆರಿಕ ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಕೊರತೆಯನ್ನು ನಿಭಾಯಿಸಲು ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವಂತೆ ಅಮೆರಿಕವೇ ಈಗ ಸೂಚನೆ ನೀಡಿದೆ.
ಮಧ್ಯಪ್ರಾಚ್ಯ ಸಂಘರ್ಷ 10ನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಇರಾನ್ ಮೇಲಿನ ದಾಳಿಗೆ ಅಮೆರಿಕ ದಿನವೊಂದಕ್ಕೆ ಸುಮಾರು 8 ಸಾವಿರ ಕೋಟಿ ರು. ಖರ್ಚು ಮಾಡಿದ್ದು, ಇಲ್ಲಿವರೆಗಿನ ಒಟ್ಟು ವೆಚ್ಚ 55 ಸಾವಿರ ಕೋಟಿ ರು. ಆಗಿದೆ ಎಂದು ವರದಿಯಾಗಿದೆ.

ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ ಲೆಕ್ಕಾಚಾರದ ಪ್ರಕಾರ ಒಂದು ದಿನದ ವಾಯುದಾಳಿಗೆ 276 ಕೋಟಿ ರು., ನೌಕಾಪಡೆಯ ಕಾರ್ಯಾಚರಣೆಗೆ 138 ಕೋಟಿ ರು. ಮತ್ತು ಭೂಕಾರ್ಯಾಚರಣೆಗೆ 14 ಕೋಟಿ ರು. ಖರ್ಚಾಗುತ್ತಿದೆ. ಈ ಕದನ ಸದ್ಯದಲ್ಲಿ ನಿಲ್ಲುವ ಲಕ್ಷಣ ಇಲ್ಲವಾದ್ದರಿಂದ ವೆಚ್ಚ ಏರಿಕೆಯಾಗುತ್ತಲೇ ಸಾಗಲಿದೆ. ಅದರಲ್ಲೂ ಅಧ್ಯಕ್ಷ ಟ್ರಂಪ್ ಅವರು ಇದು ಸುಮಾರು 3 ತಿಂಗಳು ನಡೆಯಲಿದೆ ಎಂದಿದ್ದು, ಅದಕ್ಕೆ ಮಾಡುವ ಖರ್ಚಿಗಾಗಿ ಅವರು ಸಂಸತ್ತಿನ ಅನುಮತಿ ಕೇಳಬೇಕಾಗಿ ಬರಬಹುದು ಎನ್ನಲಾಗಿದೆ.

ಇರಾನ್ ದಾಳಿಗೆ ಅಮೆರಿಕದ ನೆಲೆಗಳಲ್ಲಿ ನಿಯೋಜನೆಗೊಂಡಿದ್ದ 2 ರಾಡಾರ್‌ಗಳು ನಾಶವಾಗಿವೆ. ಕತಾರ್‌ನಲ್ಲಿ 10 ಸಾವಿರ ಕೋಟಿ ರು. ಹಾಗೂ ಜೋರ್ಡನ್‌ನಲ್ಲಿ 28 ಸಾವಿರ ಕೋಟಿ ರು. ಮೌಲ್ಯದ ಥಾಡ್ ವ್ಯವಸ್ಥೆ ನಾಶದಿಂದಾಗಿ ಒಟ್ಟು 38 ಸಾವಿರ ಕೋಟಿ ರು. ನಷ್ಟವಾಗಿದೆ.

ನ್ಯೂಯಾರ್ಕ್/ ವಾಷಿಂಗ್ಟನ್: ಹಿಂದೊಮ್ಮೆ ಭಾರತ ರಷ್ಯಾದ ತೈಲ ಖರೀದಿ ವಿರೋಧಿಸಿದ್ದ ಅಮೆರಿಕ ಇದೀಗ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲಗಳ ಬೆಲೆ ಏರಿಕೆ, ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ರಷ್ಯಾದ ತೈಲ ಖರೀದಿಸುವಂತೆ ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಇದನ್ನೂ ಓದಿ: ಸಾಕುನಾಯಿ ಬಿಟ್ಟು ದುಬೈನಿಂದ ವಲಸಿಗರ ಪಲಾಯನ!

ಅಮೆರಿಕದ ಇಂಧನ ಸಚಿವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಕ್ರಿಸ್ ರೈಟ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಚೀನಾದ ಸಂಸ್ಕರಣಾಗಾರಗಳಲ್ಲಿ ಇಳಿಸಲು ಸಮುದ್ರದಲ್ಲಿ ಕಾಯುತ್ತಿರುವ ರಷ್ಯಾದ ಕಚ್ಚಾ ಸರಕುಗಳನ್ನು ಖರೀದಿಸುವ ಬಗ್ಗೆ ಭಾರತೀಯ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ಚೀನಾದಲ್ಲಿ ತೈಲ ಇಳಿಸಲು ಆರು ವಾರ ಕಾಯುವ ಬದಲು ಅದನ್ನು ಭಾರತೀಯ ಸಂಸ್ಕರಣಾಗಾರಗಳಲ್ಲಿ ಇಳಿಸಿ, ತೈಲ ಕೊರತೆ ಭಯವನ್ನು ನಿವಾರಿಸಬೇಕಿದೆ’ ಎಂದಿದ್ದಾರೆ. ಇದೇ ವೇಳೆ ರಷ್ಯಾದ ಬಗ್ಗೆ ಅಮೆರಿಕ ನೀತಿಗಳು ಬದಲಾಗಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಇರಾನ್ ತೈಲ ಘಟಕದ ಮೇಲೆ ಇಸ್ರೇಲ್ ದಾಳಿಗೆ ಅಮೆರಿಕ ಕೆಂಡ

Source link
ಇರಾನ್ ಮೇಲೆ ದಾಳಿಗೆ ದಿನಕ್ಕೆ ಅಮೆರಿಕ ₹8,000 ಕೋಟಿ ಖರ್ಚು! ಈವರೆಗೆ ದೊಡ್ಡಣ್ಣನಿಗಾದ ನಷ್ಟವೆಷ್ಟು?