ಇಸ್ರೇಲ್ ಅಮೆರಿಕಾದ ಇರಾನ್ ಮೇಲೆ ನಡೆಸಿದ ಜಂಟಿ ದಾಳಿ ವೇಳೆ ಇರಾನ್ನ ಶಾಲಾ ಕಟ್ಟಡದ ಮೇಲೆ ಬಾಂಬ್ ಬಿದ್ದು 165 ಮಕ್ಕಳು ಸಾವನ್ನಪ್ಪಿದ್ದರು ಅವರೆಲ್ಲರನ್ನು ಒಂದೇ ಜಾಗದಲ್ಲಿ ಇರಿಸಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ.

ಟೆಹ್ರಾನ್: ಶಾಲೆಯೊಂದರ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟ 165ಕ್ಕೂ ಹೆಚ್ಚು ಬಾಲಕಿಯರನ್ನು ಒಂದೇ ಜಾಗದಲ್ಲಿ ಸಾಮೂಹಿಕವಾಗಿ ಸಮಾಧಿ ಮಾಡಲಾಯ್ತು

ಇರಾನ್ ಸಾಮೂಹಿಕವಾಗಿ ಪುಟ್ಟ ಪುಟ್ಟ ಸಮಾಧಿಗಳನ್ನು ತೋಡಿ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ರಂಪ್ ನೀಡಿದ ‘ರಕ್ಷಣೆ’ಯ ಭರವಸೆ ಈ ರೀತಿ ಕಾಣುತ್ತದೆ’ ಎಂದು ಆಕ್ರೋಶ ಹೊರ ಹಾಕಿದೆ.

ಇವು ನಿರಪರಾಧಿ ಬಾಲಕಿಯರಿಗಾಗಿ ತೋಡಲಾದ ಸಮಾಧಿಗಳು. ಟ್ರಂಪ್ ನೀಡಿದ ‘ರಕ್ಷಣೆ’ಯ ಭರವಸೆ ಈ ರೀತಿ ಕಾಣುತ್ತದೆ ಎಂದು ಇರಾನ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದೆ.

ಫೆ.28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಜಂಟಿ ದಾಳಿ ಆರಂಭಿಸಿದ್ದವು. ಈ ವೇಳೆ ಮಿನಾಬ್ ನಗರದ ಶಾಲೆಯೊಂದರ ಕಟ್ಟಡ ಮೇಲೆ ಬಾಂಬ್ ಬಿದ್ದು ಶಾಲೆ ಸಂಪೂರ್ಣವಾಗಿ ನಾಶವಾಗಿ, ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು.

ಅವರಿಗಾಗಿ ತೋಡಿದ ಸಮಾಧಿಯ ಚಿತ್ರಗಳನ್ನು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಫ್ಟ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಇದು ಟ್ರಂಪ್ ನೀಡಿದ ‘ರಕ್ಷಣೆ’ಯ ಭರವಸೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಇಸ್ರೇಲ್ ಇರಾನ್ ಯುದ್ಧ: ಭಾರತಕ್ಕೆ ಮತ್ತೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ

Source link
165 ಶಾಲಾ ಮಕ್ಕಳನ್ನು ಒಂದೇ ಸ್ಥಳದಲ್ಲಿ ಸಮಾಧಿ : ಇದು ಅಮೆರಿಕಾ ನೀಡಿದ ರಕ್ಷಣೆಯ ಭರವಸೆ ಎಂದ ಇರಾನ್