ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ


ಜನ ನಾಯಕನ್ (ಜನ ನಾಯಗನ್) ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರ ಜನವರಿ 9 ರಂದು ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಆದ ಸಮಸ್ಯೆಯಿಂದ ತೊಂದರೆಯಾಗುತ್ತಿದೆ.ಸಿನಿಮಾ ರಿಲೀಸ್ ಆದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಫ್ಯಾನ್ಸ್ ಇದ್ದಾರೆ. ಈಗ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್ ಕಡೆಯಿಂದ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿಲ್ಲ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ‘ಜನ ನಾಯಕನ್’ ಸಿನಿಮಾ ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ. ಇದಾದ ಬಳಿಕ ಅವರು ರಾಜಕೀಯದ ಕಡೆ ಹೊರಳಲಿದ್ದಾರೆ. ಅವರು ಪಕ್ಷ ಕೂಡ ಆರಂಭಿಸಿದ್ದು, ಚುನಾವಣಾ ರ್ಯಾಲಿ ನಡೆಸುತ್ತಿದ್ದಾರೆ.

ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ ಅಮೇಜಾನ್ ಪ್ರೈಮ್ ವಿಡಿಯೋ ‘ಜನ ನಾಯಗನ್’ ಚಿತ್ರದ ಹಕ್ಕನ್ನು 120 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಸಿನಿಮಾದ ಮೂಲ ರಿಲೀಸ್ ದಿನಾಂಕ ಜನವರಿ 9. ಇದಕ್ಕೆ ಅನುಗುಣವಾಗಿ ಅಮೇಜಾನ್ ಅವರು ಒಟಿಟಿ ರಿಲೀಸ್ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಆದರೆ, ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ರಿಲೀಸ್ ಆಗಿಲ್ಲ. ಈ ಒಟಿಟಿ ಸಂಸ್ಥೆಯಿಂದ ನಿರ್ಮಾಪಕರಿಗೆ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ.

ಅಮೇಜಾನ್ ಪ್ರೈಮ್ ವಿಡಿಯೋದವರು ಕಾನೂನಾತ್ಮಕವಾಗಿ ಹೋರಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲವಾದ ಒಪ್ಪಂದದ ಮೊತ್ತದಲ್ಲಿ ಒಂದಷ್ಟು ಹಣವನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಈ ವಿಷಯದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

ಇದನ್ನೂ ಓದಿ: ವಿಳಂಬವಾಗುತ್ತಿದೆ ‘ಜನ ನಾಯಕನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ

ಜನ ನಾಯಕನ್ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದೇ ಇರುವ ವಿಷಯದಲ್ಲಿ ತಂಡದವರು ಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿಯೂ ತಂಡಕ್ಕೆ ಹಿನ್ನಡೆ ಆಗುತ್ತಿದೆ. ಒಂದೊಮ್ಮೆ ತಮಿಳುನಾಡು ಚುನಾವಣಾ ವಿಧಾನಸಭೆ ದಿನಾಂಕ ಘೋಷಣೆ ಆದರೆ, ಸಿನಿಮಾಗೆ ಹಿನ್ನಡೆ ಆಗಲಿದೆ. ಚಿತ್ರ ಪ್ರದರ್ಶನ ಅಸಾಧ್ಯವಾಗಿದೆ. ಈ ಚಿಂತೆ ಕೂಡ ನಿರ್ಮಾಪಕರನ್ನು ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:03 am, ಗುರುವಾರ, 22 ಜನವರಿ 26



Source link

Leave a Reply

Your email address will not be published. Required fields are marked *