ಅಮೃತಧಾರೆ ಧಾರಾವಾಹಿಯಲ್ಲಿ, ಮಲ್ಲಿಯನ್ನು ಪ್ರೀತಿಯ ಬಲೆಗೆ ಬೀಳಿಸಲು ಜೈದೇವ ಕಳುಹಿಸಿದ ಶಿಷ್ಯನೇ ಅವಳ ಪ್ರೀತಿಯಲ್ಲಿ ಬಿದ್ದಂತಿದೆ. ಮಲ್ಲಿಯ ತಿರಸ್ಕಾರವನ್ನೇ ಅವಳ ಒಪ್ಪಿಗೆ ಎಂದು ಜೈದೇವ ಭಾವಿಸಿ, ಪ್ರೇಮಿಗಳಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾನೆ.

ಸದ್ಯ ಅಮೃತಧಾರೆ ಸೀರಿಯಲ್ (Amrutadhaare Serial)ನಲ್ಲಿ ಜೈದೇವ, ಮಲ್ಲಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲು ಶಿಷ್ಯನನ್ನು ಕಳಿಸಿದ್ದಾನೆ. ಆದರೆ, ಅವನು ನಿಜವಾಗಿಯೂ ಮಲ್ಲಿಯ ಲವ್ನಲ್ಲಿ ಬಿದ್ದಂತಿದೆ.

ಆದರೆ, ಹೇಳಿಕೇಳಿ ಅವಳು ಮಲ್ಲಿ. ಈತನ ಲವ್ ರಿಜೆಕ್ಟ್ ಮಾಡುತ್ತಿದ್ದಾಳೆ. ಇದಾಗಲೇ ಯುವಕನ ಮೇಲೆ ಅವಳಿಗೆ ಪ್ರೀತಿ ಹುಟ್ಟಿರುವುದು ತಿಳಿಯುತ್ತದೆ. ಆದರೂ ನೇರವಾಗಿ ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ.

ಆಕೆಯ ಬದಲಾವಣೆಯನ್ನು ಭೂಮಿಕಾ ಗಮನಿಸುತ್ತಿದ್ದಾಳೆ. ಮಲ್ಲಿಗೆ ಯಾರದ್ದೋ ಮೇಲೆ ಲವ್ ಆಗಿದೆ ಎಂದು ಅವಳಿಗೆ ಡೌಟ್ ಬರುತ್ತಿದೆ. ಆದರೂ ಅದನ್ನು ತೋರಿಸಿಕೊಂಡಿಲ್ಲ.

ಆದರೆ, ಪದೇ ಪದೇ ಮಲ್ಲಿ ತನ್ನನ್ನು ರಿಜೆಕ್ಟ್ ಮಾಡುತ್ತಿರುವುದರಿಂದ ಇವನಿಗೆ ಟೆನ್ಷನ್ ಶುರುವಾಗಿ ಜೈದೇವನ ಬಳಿ ಬಂದು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಾನೆ. ನನ್ನ ಕಾಲ್ ಅನ್ನು ಪದೇ ಪದೇ ಅವರು ಕಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಕೊನೆಗೆ, ಅಷ್ಟೇ ಅಲ್ಲ ಬಾಸ್, ಇನ್ನೊಂದು ಸಲ ಕಾಲ್ ಮಾಡಿದ್ರೆ ಬಂದು ಬಾರಿಸಿಬಿಡ್ತೀನಿ ಎಂದರು ಎಂದು ಗೋಳು ತೋಡಿಕೊಂಡಿದ್ದಾನೆ. ಆಗ ಜೈದೇವ ಮನಸ್ಸಿನಲ್ಲಿ ಲೋ ಹುಚ್ಚ, ಹುಡುಗಿಯರು ಬಾರಿಸಿಬಿಡ್ತೀನಿ ಎಂದರೆ ಬೀಳ್ತಾ ಇದ್ದಾರೆ ಎಂದೇ ಅರ್ಥ ಎನ್ನುವ ಮೂಲಕ, ಲವ್ ಮಾಡ್ತಿರೋರಿಗೆ ಭರ್ಜರಿ ಟಿಪ್ಸ್ ಕೊಟ್ಟಿದ್ದಾನೆ!

ನಾನು ತಾಳಿ ಕಟ್ಟಿರೋಳು ಅವಳು. ಅಷ್ಟು ಸುಲಭದಲ್ಲಿ ಬಿದ್ದರೆ ನನಗೂ ಮರ್ಯಾದೆ ಇರಲ್ಲ. ಬಾರಿಸಿಬಿಡ್ತೀನಿ ಎನ್ನೋ ತನಕ ಬಂದಿದ್ದಾಳೆ ಎಂದರೆ ಬೀಳ್ತಾಳೆ ಎಂದು ಅರ್ಥ, ಬೀಳಲಿ ಬೀಳಲಿ ಎಂದು ಅಂದುಕೊಂಡಿದ್ದಾನೆ. ಒಟ್ಟಿನಲ್ಲಿ ತಮ್ಮ ಹುಡುಗಿ ಹೀಗೆ ಹೇಳಿದ್ರೆ ಅವಳು ಲವ್ ಮಾಡ್ತಾ ಇದ್ದಾಳೆ ಅಂತ ಅರ್ಥ ಎಂದು ತಿಳಿದುಕೊಂಡಿರೋ ಲವರ್ಸ್ ಜೈದೇವನ ಟಿಪ್ಸ್ಗೆ ಖುಷಿ ಪಟ್ಟುಕೊಳ್ತಿದ್ದಾರೆ.

Source link
'ಬಾರಿಸಿಬಿಡ್ತೀನಿ' ಅಂದ್ರೆ ಹುಡುಗಿ ಬಿದ್ದಿದ್ದಾಳೆ ಎಂದೇ ಅರ್ಥವಂತೆ! Amrutadhaare ಜೈದೇವನ ಲವ್ ಪಾಠ ಕೇಳಿ