Amruthadhaare: ಗೌತಮ್​ನೇ ಅಪ್ಪ ಎಂಬ ಸತ್ಯ ಗೊತ್ತಾಗಿ ಹೋಯ್ತು: ಆಲ್ಬಂ ನೋಡಿ ಮಿಂಚುಗೆ ಶಾಕ್​!

Amruthadhaare: ಗೌತಮ್​ನೇ ಅಪ್ಪ ಎಂಬ ಸತ್ಯ ಗೊತ್ತಾಗಿ ಹೋಯ್ತು:  ಆಲ್ಬಂ ನೋಡಿ ಮಿಂಚುಗೆ ಶಾಕ್​!

Amruthadhaare: ಗೌತಮ್​ನೇ ಅಪ್ಪ ಎಂಬ ಸತ್ಯ ಗೊತ್ತಾಗಿ ಹೋಯ್ತು:  ಆಲ್ಬಂ ನೋಡಿ ಮಿಂಚುಗೆ ಶಾಕ್​!
ಅಮೃತಧಾರೆ ಧಾರಾವಾಹಿಯಲ್ಲಿ, ಆಲ್ಬಂ ಮೂಲಕ ಗೌತಮ್ ತನ್ನ ಅಪ್ಪ ಎಂಬ ಸತ್ಯವನ್ನು ಆಕಾಶ್ ಕಂಡುಕೊಂಡಿದ್ದಾನೆ. ತಂದೆ-ಮಗನ ಭಾವನಾತ್ಮಕ ಪುನರ್ಮಿಲನದಿಂದ ಭೂಮಿಕಾ ಸಂತಸಗೊಂಡರೆ, ಗೌತಮ್ ಮತ್ತು ಆಕಾಶ್ ಒಟ್ಟಿಗೆ ಇರುವುದನ್ನು ನೋಡಿದ ಮಿಂಚುಗೆ ನೋವಾಗಿದೆ, ಇದು ಕಥೆಯಲ್ಲಿ ಹೊಸ ಸಂಘರ್ಷವನ್ನು ಸೃಷ್ಟಿಸಿದೆ.
ಅಮೃತಧಾರೆಯ (Amruthadhaare) ಯಲ್ಲಿ ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ಭೂಮಿಕಾ ಮತ್ತು ಗೌತಮ್​ರನ್ನು ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಲೇ ಇದ್ದರು. ಆ ಆಸೆ ಈಡೇರುವ ಕಾಲ ಕೂಡಿ ಬಂದಿದೆ.

ಹೌದು. ಕೊನೆಗೂ ಆ ಅಮೃತ ಘಳಿಗೆ ಕೂಡಿ ಬಂದಿದೆ. ಆಕಾಶ್​ಗೆ ಗೌತಮ್​ನೇ ತನ್ನ ಅಪ್ಪ ಎನ್ನುವ ಸತ್ಯ ಗೊತ್ತಾಗಿದೆ. ಮನೆಯಲ್ಲಿ ಇರುವ ಸೂಟ್​ಕೇಸ್​ನಲ್ಲಿ ಇದ್ದ ಆಲ್ಬಂ ನೋಡಿದ್ದಾನೆ ಆಕಾಶ್​. ಅದರಲ್ಲಿ ಗೌತಮ್​ ಮತ್ತು ಭೂಮಿಕಾ ಮದುವೆ ಫೋಟೋ ಕಂಡಿದೆ.

ಆಗ ಗೌತಮ್​ನೇ ತನ್ನ ಅಪ್ಪ ಎನ್ನುವ ಸತ್ಯ ತಿಳಿದಿದೆ. ಓಡಿ ಹೋಗಿ ಅಪ್ಪಾ ಎನ್ನುತ್ತಾ ಗೌತಮ್​ನನ್ನು ಅಪ್ಪಿಕೊಂಡಿದ್ದಾನೆ. ಇದನ್ನು ನೋಡಿ ಗೌತಮ್​ಗೆ ಅಚ್ಚರಿಯಾಗಿದ್ರೆ, ಭೂಮಿಕಾ ಖುಷಿಯಲ್ಲಿ ಇದ್ದಾಳೆ.

ತಾನು ಗೌತಮ್​ನಿಂದ ದೂರ ಇದ್ದರೆ, ಅವರು ಖುಷಿಯಾಗಿರುತ್ತಾರೆ ಎಂದು ಭೂಮಿಕಾ ಅಂದುಕೊಂಡಿದ್ದು ಸುಳ್ಳಾಗಿತ್ತು. ತಾನಿಲ್ಲದೇ ಗೌತಮ್​ ಬದುಕಲ್ಲ ಎನ್ನುವ ಅರಿವಾಗುತ್ತಿದ್ದಂತೆಯೇ ಪಶ್ಚಾತ್ತಾಪ ಪಟ್ಟಿದ್ದಳು. ಈ ಘಟನೆ ಅವಳಿಗೆ ಖುಷಿ ಕೊಟ್ಟಿದೆ.

ಆದರೆ ಅದೇ ಇನ್ನೊಂದೆಡೆ, ಮಿಂಚುಗೂ ಮನೆಯಲ್ಲಿ ಆಲ್ಬಂ ಸಿಕ್ಕಿದೆ. ಅದರಲ್ಲಿ, ಆಕೆ ಗೌತಮ್​ ಮತ್ತು ಆಕಾಶ್​ ಒಟ್ಟಿಗೇ ಇರುವುದನ್ನು, ಇಬ್ಬರೂ ಖುಷಿಯಲ್ಲಿ ಆಟ ಆಡುವುದನ್ನೆಲ್ಲಾ ನೋಡಿದ್ದಾಳೆ. ಇದನ್ನು ನೋಡಿ ಆಕೆಗೆ ನೋವಾಗಿದೆ.

ಅಪ್ಪ ಆಕಾಶ್​ನನ್ನು ತನಗಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದಾನೆ ಎಂದು ಅನ್ನಿಸಿರುವ ರೀತಿಯಲ್ಲಿ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ಇದೇ ಬೇಸರದಿಂದ ಮಿಂಚು ಮನೆ ಬಿಟ್ಟು ಹೋಗುತ್ತಾಳಾ ಎನ್ನುವ ಸಂದೇಹ ಕೂಡ ಕಾಡುತ್ತಿದೆ.

ಇದನ್ನು ನೋಡಿದ ವೀಕ್ಷಕರು ಪ್ಲೀಸ್​ ಹಾಗೆ ಮತ್ತೆ ಮಾಡಬೇಡಿ. ಅಪ್ಪ-ಮಗ ಒಂದಾಗಿರುವ ಖುಷಿಯ ನಡುವೆಯೇ, ಮಿಂಚು ಮನೆ ಬಿಟ್ಟು ಹೋಗುವ ಹಾಗೆ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಅಮೃತಧಾರೆ, ಹೊಸ ತಿರುವಿನ ಜೊತೆ ರೋಚಕತೆಯನ್ನು ಉಂಟು ಮಾಡುತ್ತಿದೆ. ಇಬ್ಬರೂ ಒಂದಾಗಿ, ಶಕುಂತಲಾ ಮತ್ತು ಜೈದೇವ್​ಗೆ ಬುದ್ಧಿ ಕಲಿಸಲಿ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *