17

Image Credit : Instagram
ಅಮೃತಧಾರೆ ಟ್ವಿಸ್ಟ್
ಅಮೃತಧಾರೆ (Amruthadhaare) ಇದೀಗ ಭಾರಿ ಟ್ವಿಸ್ಟ್ ಪಡೆದುಕೊಂಡಿದೆ. ಅಜ್ಜಿ ಈಗ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡುವ ಮಾಸ್ಟರ್ಪ್ಲ್ಯಾನ್ ಹಾಕಿದ್ದಾಳೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.
27
Image Credit : Instagram
ಒಂದಾದ ಭೂಮಿಕಾ ಮತ್ತು ಗೌತಮ್
ಅಜ್ಜಿಯನ್ನು ನೋಡಲು ಭೂಮಿಕಾ ಮತ್ತು ಗೌತಮ್ ಒಂದಾಗಿದ್ದಾರೆ. ಇಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಇದಕ್ಕೂ ಮುನ್ನ ಆ ಇಬ್ಬರು ಮಕ್ಕಳು ಇವರದ್ದೇ ಮಕ್ಕಳು ಎಂದು ಅಜ್ಜಿ ತಿಳಿದುಕೊಳ್ಳಬೇಕು ಎನ್ನುವ ರೀತಿಯಲ್ಲಿ ಆಕಾಶ್ ಮತ್ತು ಮಿಂಚು ಟ್ರಯಲ್ ಮಾಡೋಣ ಎಂದು ಹೇಳಿದ್ದಾರೆ.
37
Image Credit : Instagram
ಆಕಾಶ್-ಮಿಂಚು ಡ್ರಾಮಾ
ಅದೇ ರೀತಿ, ಆಕಾಶ್ ಡ್ಯಾಡಿ ಅಂತ ಗೌತಮ್ನನ್ನು ಹೋಗಿ ಬಿಗಿದಪ್ಪಿಕೊಂಡಿದ್ದರೆ, ಮಿಂಚು ಮಮ್ಮಿ ಎಂದು ಭೂಮಿಕಾಳನ್ನು ಅಪ್ಪಿಕೊಂಡಿದ್ದಾಳೆ. ಇವರಿಬ್ಬರು ಡ್ರಾಮಾದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
47
Image Credit : Instagram
ಅಜ್ಜಿಯ ನಾಟಕ
ಅಲ್ಲಿ ಅಜ್ಜಿ ಹಾಸಿಗೆ ಹಿಡಿದವರ ರೀತಿ ಮಲಗಿದ್ದಾಳೆ. ಭಾಗ್ಯಳನ್ನು ಉದ್ದೇಶಿಸಿ ಅಜ್ಜಿ, ನೋಡು ಸೆರಗನ್ನು ಹಲ್ಲಿನಿಂದ ಕಚ್ಚಿಟ್ಟುಕೊಂಡು ಅಳ್ತಾ ಇರು ಎಂದು ಐಡಿಯಾ ಹೇಳಿದ್ದಾಳೆ.
57
Image Credit : Instagram
ಬಿಕ್ಕಿ ಬಿಕ್ಕಿ ಅತ್ತ ಭಾಗ್ಯಮ್ಮ
ಅದಳಂತೆ ಭಾಗ್ಯಮ್ಮ ಸೆರಗನ್ನು ಹಲ್ಲಿನಿಂದ ಕಚ್ಚಿಹಿಡಿದು ಅಜ್ಜಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಂತೆ ನಾಟಕ ಮಾಡುತ್ತಿದ್ದಾಳೆ. ಅಜ್ಜಿ ಇನ್ನೇನು ಕೊನೆಯ ಉಸಿರು ಚೆಲ್ಲುವಂತೆ ಮಲಗಿಕೊಂಡಿದ್ದಾಳೆ.
67
Image Credit : Instagram
ಅಜ್ಜಿ ಎಂದ ಗೌತಮ್
ಇತ್ತ ಅಜ್ಜಿಯನ್ನು ನೋಡಲು ಬಂದ ಗೌತಮ್ ಮತ್ತು ಭೂಮಿಕಾ ಅಜ್ಜಿಯನ್ನು ಮಾತನಾಡಿಸಿದ್ದಾರೆ. ಇನ್ನೇನು ಕೊನೆಯ ಕ್ಷಣ ಎನ್ನುವಂತೆ ಅಜ್ಜಿ ಇಬ್ಬರನ್ನೂ ಆಶೀರ್ವದಿಸಿ ನೂರ್ಕಾಲ ಹೀಗೆ ಚೆನ್ನಾಗಿ ಬಾಳಿ ಎಂದು ಆಶೀರ್ವಾದ ಮಾಡಿದ್ದಾಳೆ.
77
Image Credit : Instagram
ಹೈಲೆವೆಲ್ ಡ್ರಾಮಾ
ಅಲ್ಲಿಗೆ ಅಜ್ಜಿ ಮತ್ತು ಮರಿಮೊಮ್ಮಕ್ಕಳ ಡ್ರಾಮಾ ಹೈಲೆವೆಲ್ ಹೋಗಿದೆ. ಒಟ್ಟಿನಲ್ಲಿ ಭೂಮಿಕಾ ಮತ್ತು ಗೌತಮ್ ಒಂದಾದರೆ ಸಾಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.