Amruthadhaare: ಭೂಮಿಕಾ ಪುತ್ರಿ ಈ ಬಾಲಕಿನಾ? ಹಾಗಿದ್ರೆ ಮಿಂಚು? DNA ಪರೀಕ್ಷೆ ಮಾಡಿಸಲು ಫ್ಯಾನ್ಸ್​ ಒತ್ತಾಯ

Amruthadhaare:  ಭೂಮಿಕಾ ಪುತ್ರಿ ಈ ಬಾಲಕಿನಾ? ಹಾಗಿದ್ರೆ ಮಿಂಚು? DNA ಪರೀಕ್ಷೆ ಮಾಡಿಸಲು ಫ್ಯಾನ್ಸ್​ ಒತ್ತಾಯ

Amruthadhaare:  ಭೂಮಿಕಾ ಪುತ್ರಿ ಈ ಬಾಲಕಿನಾ? ಹಾಗಿದ್ರೆ ಮಿಂಚು? DNA ಪರೀಕ್ಷೆ ಮಾಡಿಸಲು ಫ್ಯಾನ್ಸ್​ ಒತ್ತಾಯ
‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ತಮ್ಮ ಕಳೆದುಹೋದ ಮಗಳಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ. ಹಲವು ಮಕ್ಕಳ ಡಿಎನ್​ಎ ಪರೀಕ್ಷೆ ವಿಫಲವಾದ ನಂತರ, ಪೊಲೀಸರು ಇದೀಗ ಮತ್ತೊಬ್ಬ ಬಾಲಕಿಯನ್ನು ತೋರಿಸಿದ್ದು, ಆಕೆಯೇ ನಿಜವಾದ ಮಗಳೇ ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲದ ಹಂತ ತಲುಪಿದೆ. ಮಗಳ ಹುಡುಕಾಟಕ್ಕಾಗಿ ಭೂಮಿಕಾ ಮತ್ತು ಗೌತಮ್​ ಒಂದಾಗಿದ್ದಾರೆ. ಆದರೆ ಮಗಳು ಮಾತ್ರ ಇದುವರೆಗೂ ಸಿಗಲಿಲ್ಲ.

ಇದಾಗಲೇ ಗೌತಮ್​ ಎಷ್ಟೋ ಅನಾಥ ಮಕ್ಕಳನ್ನು ದತ್ತು ಪಡೆದವರ ಮನೆಗೆ ಹೋಗಿ ಬಂದಾಗಿದೆ. ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ಆದರೂ ಯಾರದ್ದೂ ಮ್ಯಾಚ್​ ಆಗಿರಲಿಲ್ಲ. ಈಗ ಅವನ ಜೊತೆ ಭೂಮಿಕಾ ಸಾಥ್​ ಕೊಟ್ಟಿದ್ದಾಳೆ.

ಇದೀಗ, ಇನ್ನೊಬ್ಬರ ಮನೆಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇವಳೇ ಆ ಬಾಲಕಿ ಎಂದು ಹುಡುಗಿಯನ್ನು ತೋರಿಸಿದ್ದಾರೆ. ಹಾಗಿದ್ದರೆ ಈಕೆನೇ ಗೌತಮ್​ ಮತ್ತು ಭೂಮಿಕಾ ರಿಯಲ್​ ಮಗಳಾ ಎನ್ನುವ ಕುತೂಹಲ ಸದ್ಯಕ್ಕಿದೆ.

ಅದು ಡಿಎನ್​ಎ ಪರೀಕ್ಷೆಯಿಂದ ಸಾಬೀತಾಗಬೇಕಿದೆ ಅಷ್ಟೇ. ಈ ಬಗ್ಗೆ ನೊಂದುಕೊಂಡಿರುವ ಭೂಮಿಕಾಗೆ ಗೌತಮ್​ ಸಮಾಧಾನ ಮಾಡಿದ್ದಾನೆ. ತಾಳ್ಮೆಯಿಂದ ಇರಬೇಕು. ಇಂಥ ಅದೆಷ್ಟೋ ಘಟನೆ ನಾನು ಕಂಡಿದ್ದೇನೆ ಎಂದಿದ್ದಾನೆ.

ಈಗ ಗೌತಮ್​ ಮನೆಯಲ್ಲಿ ಇರುವ ಮಿಂಚುನೇ ಇವರ ಮಗಳು ಎಂದೇ ಸೀರಿಯಲ್​ ಪ್ರೇಮಿಗಳು ಹೇಳ್ತಿದ್ದಾರೆ. ಆದರೆ ವಿಚಿತ್ರ ಎಂದರೆ ಆಕೆಯ ಡಿಎನ್​ಎ ಟೆಸ್ಟ್​ ಯಾಕೆ ಮಾಡಿಸಿಲ್ಲ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಈಗ ನೋಡಿರೋ ಬಾಲಕಿನೇ ಮಗಳಾಗಿರಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *