Headlines

Amruthadhaare Serial: ಅವ್ರೇ ನನ್​ ಗಂಡ ಎಂದ ಭೂಮಿಕಾ- ಬೆಚ್ಚಿಬಿದ್ದ ವಠಾರದ ಮಂದಿ!

Amruthadhaare Serial: ಅವ್ರೇ ನನ್​ ಗಂಡ ಎಂದ ಭೂಮಿಕಾ- ಬೆಚ್ಚಿಬಿದ್ದ ವಠಾರದ ಮಂದಿ!

Amruthadhaare Serial: ಅವ್ರೇ ನನ್​ ಗಂಡ ಎಂದ ಭೂಮಿಕಾ- ಬೆಚ್ಚಿಬಿದ್ದ ವಠಾರದ ಮಂದಿ!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು, ಭೂಮಿಕಾ ತನ್ನ ಗಂಡ ಗೌತಮ್ ಎಂದು ವಠಾರದವರ ಮುಂದೆ ಸತ್ಯ ಬಹಿರಂಗಪಡಿಸಿದ್ದಾಳೆ. ಇನ್ನೊಂದೆಡೆ, ಜೈದೇವ್‌ಗೆ ಶಕುನಿ ಮಾಮನ ನಿಜಬಣ್ಣ ಬಯಲಾಗಿದ್ದು, ಆತ ಪೇಚಿಗೆ ಸಿಲುಕಿದ್ದಾನೆ.
ಅಮೃತಧಾರೆಯಲ್ಲಿ (Amruthadhaare Serial) ಇದೀಗ ಗೌತಮ್​ ಮತ್ತು ಭೂಮಿಕಾ ಒಂದಾಗುವ ಕಾಲ ಬಂದಾಗಿಬಿಟ್ಟಿದೆ. ಇಬ್ಬರೂ ಸೇರಿ ಸೀತಾರಾಮ ಕಲ್ಯಾಣ ಮಾಡುತ್ತಿದ್ದಾರೆ. ಮಕ್ಕಳು ಕೂಡ ಅಪ್ಪ-ಅಮ್ಮ ಎಂದು ಬಾಯ್ತುಂಬ ಹೇಳಿಯಾಗಿದೆ.

ಇದೀಗ ಭೂಮಿಕಾಳ ಮನೆಯಲ್ಲಿ ಕಿಲಕಿಲ ಇರೋದನ್ನು ನೋಡಿ ವಠಾರದ ಮಂದಿಗೆ ಅದರಲ್ಲಿಯೂ ಮಹಿಳೆಯರಿಗೆ ಡೌಟ್​ ಬಂದಿದೆ. ತುಂಬಾ ಜನ ಇದ್ದ ಹಾಗಿತ್ತು. ಏನು ವಿಷ್ಯ ಎಂದು ಕೇಳಿದ್ದಾರೆ ಮಹಿಳೆಯರು. ಅಷ್ಟಕ್ಕೂ ಮಹಿಳೆಯರು ಅಂದ್ರೆ ಕಮ್ಮಿಯೇನಿಲ್ಲವಲ್ಲ. ಐದು ಜನ ಮಾತನಾಡಿದ ಹಾಗಿತ್ತಲ್ಲ, ನೀವು ಮೂವರೇ ಇರುವವರು ಅಲ್ವಾ ಎಂದುಪ್ರಶ್ನಿಸಿದ್ದಾರೆ.

ಅದಕ್ಕೆ ಭೂಮಿಕಾ, ಹೌದು. ನನ್ನ ಗಂಡ ಮತ್ತು ಮಕ್ಕಳು ಇದ್ದರು. ಅದಕ್ಕಾಗಿಯೇ ತುಂಬಾ ಜನ ಎಂದು ನಿಮಗೆ ಅನ್ನಿಸಿದೆ ಎಂದಿದ್ದಾಳೆ. ಆಗ ವಠಾರದವರು ಗಂಡನಾ, ನಾವು ನೋಡೇ ಇಲ್ವಲ್ಲಾ ಎಂದಿದ್ದಾರೆ.

ಇದನ್ನು ಕೇಳಿದ ಭೂಮಿಕಾ, ನೀವು ನೋಡಿರ್ತೀರಾ, ಆದರೆ ಅವರೇ ನನ್ನ ಗಂಡ ಎನ್ನೋದು ನಿಮಗೆ ಗೊತ್ತಿಲ್ಲವಷ್ಟೇ ಎಂದಾಗ, ವಠಾರದ ಮಂದಿ ಶಾಕ್​ ಆಗಿದ್ದಾರೆ.

ಅಷ್ಟೊತ್ತಿಗೆ ಗೌತಮ್​ ಮನೆಯಿಂದ ಹೊರಕ್ಕೆ ಫೋನ್​ ಮಾಡುತ್ತಾ ಬಂದಾಗ, ಭೂಮಿಕಾ ನೋಡಿ ಅವರೇ ನನ್ನ ಗಂಡ ಎಂದಾಗ, ಕುಳಿತ ಎಲ್ಲಾ ವಠಾರದವರು ನಿಂತುಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡು ಬೆಚ್ಚಿಬಿದ್ದಿದ್ದಾರೆ. ಅವರಿಗೆ ಏನು, ಎತ್ತ ಎಂದು ತಿಳಿಯದಾಗಿದೆ.

ಅದೇ ಇನ್ನೊಂದೆಡೆ, ಶಕುನಿ ಮಾಮಾ ಲಕ್ಷ್ಮೀಕಾಂತನ ಮೇಲೆ ಜೈದೇವ್​ಗೆ ಡೌಟ್​ ಬಂದಿದೆ. ಅವನ ಫೋನ್​ ಕಸಿದು ನೋಡಿದಾಗ ಆನಂದ್​ ಫೋನ್​ ಮಾಡಿರುವುದು ತಿಳಿದಿದೆ. ಹೇಗೆ ತಪ್ಪಿಸಿಕೊಳ್ಳೋದು ಗೊತ್ತಾಗದೇ ಲಕ್ಷ್ಮೀಕಾಂತ ಪೇಚಿಗೆ ಸಿಲುಕಿದ್ದಾನೆ. ಒಂದು ವೇಳೆ ಅವನು ಬಾಯಿಬಿಟ್ಟರೆ ಭೂಮಿಕಾ-ಗೌತಮ್​ ಒಂದಾಗಲು ಇನ್ನೇನು ಕಂಟಕ ಎದುರಾಗುತ್ತದೆಯೋ ನೋಡಬೇಕಿದೆ.

Source link

Leave a Reply

Your email address will not be published. Required fields are marked *