ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!

ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!

ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!

Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌, ಭೂಮಿಕಾ ದೂರ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ. ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್‌ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಹಾಕುತ್ತಿದ್ದರು, ಅದಕ್ಕೆ ಛಾಯಾ ಸಿಂಗ್‌ ತಿರುಗೇಟು ಕೊಟ್ಟಿದ್ದಾರೆ.

ಗೌತಮ್‌ ಹಾಗೂ ಭೂಮಿಕಾಗೂ ಮಗ ಇದ್ದರೂ ಕೂಡ, ಆ ಮಗನಿಗೆ ತಂದೆ ಪ್ರೀತಿ ಸಿಗ್ತಿಲ್ಲ, ಗೌತಮ್‌ಗೂ ಕೂಡ ಹೆಂಡ್ತಿ, ಮಗನ ಜೊತೆ ಇರುವ ಭಾಗ್ಯ ಇಲ್ಲ. ಒಟ್ಟಿನಲ್ಲಿ ವೀಕ್ಷಕರಿಗೆ ಸದ್ಯದ ಎಪಿಸೋಡ್‌ಗಳು ಬೇಸರ ತಂದಿವೆ. ಹೀಗಾಗಿ ಕೆಲವರು ಭೂಮಿ ಪೋಸ್ಟ್‌ಗಳಿಗೆ ನೆಗೆಟಿವ್‌ ಕಾಮೆಂಟ್‌ ಮಾಡಿದ್ದರು.

ಉಳಿದ ಸೆಲೆಬ್ರಿಟಿಗಳಿಗೆ ಹೋಲಿಕೆ ಮಾಡಿದರೆ ಛಾಯಾ ಸಿಂಗ್‌ ಅವರು ಅಷ್ಟಾಗಿ ಸೋಶಿಯಲ್‌ ಮೀಡಿಯಾವನ್ನು ಬಳಕೆ ಮಾಡೋದಿಲ್ಲ, ಎಲ್ಲದಕ್ಕೂ ರಿಯಾಕ್ಟ್‌ ಕೂಡ ಮಾಡೋದಿಲ್ಲ. ಈಗ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಈ ಪೋಸ್ಟ್‌ಗೆ ಸೀರಿಯಲ್‌ ಸಂಬಂಧಿತ ನೆಗೆಟಿವ್‌ ಕಾಮೆಂಟ್‌ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನನ್ನ ಹಿತೈಷಿಗಳಾದ ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ. ದಯವಿಟ್ಟು ವಾದಬೇಡ. ನಾವು ಪ್ರಜಾಸತ್ತಾತ್ಮಕ ದೇಶದಲ್ಲಿದ್ದೇವೆ ಮತ್ತು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವತಂತ್ರ ಹಕ್ಕು ಹೊಂದಿದ್ದಾರೆ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.

“ನನ್ನ ಕೋರಿಕೆ ಇಷ್ಟೇ…ವಾದ ವಿವಾದಗಳನ್ನು ಮಾಡಬೇಡಿ…..ನೀವು ಎಲ್ಲರೂ ನನ್ನ ಕುಟುಂಬ, ಮತ್ತು ನನ್ನ ಕುಟುಂಬದವರು ಯಾರನ್ನೂ ಅವಮಾನಿಸಲ್ಲ ಅಥವಾ ಬೇರೆಯವರ ಮನಸ್ಸಿಗೆ ನೋವನ್ನು ಉಂಟುಮಾಡುವುದಿಲ್ಲವೆಂದು ನಾನು ನಂಬಿದ್ದೇನೆ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.

“ನಮ್ಮ ಮೌನವೇ ನಮ್ಮ ಶಕ್ತಿ ಮತ್ತು ಸಾಮರ್ಥ್ಯವೆಂದು ಎಲ್ಲರಿಗೂ ತೋರಿಸಿ.

ನೀವು నిజವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರೆ, ದಯವಿಟ್ಟು ಅನವಶ್ಯಕ ಕಾಮೆಂಟ್‌ಗಳನ್ನು ತೆಗೆದುಹಾಕಿ, ಸಂಬಂಧಪಟ್ಟ ಯಾರಿಗೂ, ನನ್ನ ಕುಟುಂಬದ ಪರವಾಗಿ ಕ್ಷಮೆ ಕೋರುತ್ತೇನೆ. ದೇವರು ಎಲ್ಲರಿಗೂ ಆಶೀರ್ವದಿಸಲಿ” ಎಂದು ನಟಿ ಛಾಯಾ ಸಿಂಗ್‌ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *