Amruthadhaare Serial: ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್, ಭೂಮಿಕಾ, ಭಾಗ್ಯ; ನಿರ್ದೇಶಕರಿಗೆ ಅವಾರ್ಡ್‌ ಕೊಡಿ ಎಂದ ವೀಕ್ಷಕರು | Amruthadhaare Kannada Serial Written Update Bhagya Started To Talk

Amruthadhaare Serial: ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್, ಭೂಮಿಕಾ, ಭಾಗ್ಯ; ನಿರ್ದೇಶಕರಿಗೆ ಅವಾರ್ಡ್‌ ಕೊಡಿ ಎಂದ ವೀಕ್ಷಕರು | Amruthadhaare Kannada Serial Written Update Bhagya Started To Talk


15

ಭಾಗ್ಯಮ್ಮಂಗೆ ಸತ್ಯ ಗೊತ್ತಾಯ್ತು

Image Credit : zee kannada facebook

ಭಾಗ್ಯಮ್ಮಂಗೆ ಸತ್ಯ ಗೊತ್ತಾಯ್ತು

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಇಬ್ಬರೂ ಒಂದೇ ವಠಾರದಲ್ಲಿದ್ದರೂ ಕೂಡ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ ಮೊಮ್ಮಗನನ್ನು ಮಗ ಮಾತನಾಡಿಸುವ ಹಾಗೆಯೂ ಇಲ್ಲ, ಮುದ್ದಾಡುವ ಹಾಗಿಲ ಎಂದು ಭಾಗ್ಯಮ್ಮಳಿಗೆ ಗೊತ್ತಾಗಿದೆ. ಈಗ ಭಾಗ್ಯಮ್ಮ ಬದುಕಿನಲ್ಲಿ ಒಂದು ಮ್ಯಾಜಿಕ್‌ ಆಗಿದೆ.

25

ಗೌತಮ್‌-ಭೂಮಿ ಒಂದಾಗೋದು ಯಾವಾಗ?

Image Credit : zee kannada facebook

ಗೌತಮ್‌-ಭೂಮಿ ಒಂದಾಗೋದು ಯಾವಾಗ?

ಹೌದು, ಜೀ ಕನ್ನಡ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್‌ ಮಾಡಿದೆ. ಅದರಲ್ಲಿ ಭೂಮಿಕಾ, ಗೌತಮ್‌, ಭಾಗ್ಯಮ್ಮ ಮೂವರು ಒಂದೇ ಕಡೆ ಸೇರಿದ್ದಾರೆ. ಅಲ್ಲಿ ಏನಾಗಲಿದೆ ಎನ್ನುವ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ. ಭೂಮಿಕಾ, ಗೌತಮ್‌ ಒಂದಾಗೋದು ಯಾವಾಗ ಎಂಬ ಪ್ರಶ್ನೆಯೇ ಎದ್ದು ಕಾಣುತ್ತಿದೆ.

35

ಮಗ-ಸೊಸೆಯನ್ನು ಒಂದು ಮಾಡಬೇಕು

Image Credit : zee kannada facebook

ಮಗ-ಸೊಸೆಯನ್ನು ಒಂದು ಮಾಡಬೇಕು

ಆನಂದ್‌ ಮನೆಯಲ್ಲಿ ಬದುಕುತ್ತಲಿರುವ ಭಾಗ್ಯಮ್ಮಳಿಗೆ ಮಗ-ಸೊಸೆ ಹತ್ತಿರ ಇದ್ದೂ ದೂರ ಆಗಿ ಬದುಕುತ್ತಿರುವ ವಿಷಯ ಗೊತ್ತಾಗಿದೆ. ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ. ತಾಯಿ ಎಲ್ಲಿ ಎಂದು ಗೌತಮ್‌ ಹುಡುಕುತ್ತಿದ್ದಾನೆ.

45

ಭೂಮಿಯನ್ನು ನೋಡಿದ ಭಾಗ್ಯ

Image Credit : zee kannada facebook

ಭೂಮಿಯನ್ನು ನೋಡಿದ ಭಾಗ್ಯ

ಭಾಗ್ಯಮ್ಮ ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನಕ್ಕೆ ಬಂದಿದ್ದಾಳೆ. ಅಲ್ಲಿ ಭೂಮಿಕಾ ಕೂಡ ಇದ್ದಾಳೆ. ಆಗ ಭೂಮಿಕಾ ಸೀರೆಗೆ ಬೆಂಕಿ ಹಚ್ಚಿಕೊಂಡಿದೆ. ಅದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದೆ. ಮಾತೇ ಆಡದ ಭಾಗ್ಯಮ್ಮ ಈಗ ಭೂಮಿಕಾ ಎಂದು ಕೂಗಿದ್ದಾಳೆ. ಶಕುಂತಲಾ ನೀಡಿದ ಹಿಂಸೆಗೆ ಭಾಗ್ಯಮ್ಮಗೆ ಮಾತು ಬರದಂತೆ ಆಗಿತ್ತು.

55

ಗೌತಮ್-ಭೂಮಿ ಒಂದಾಗಲಿದ್ದಾರಾ?

Image Credit : zee kannada facebook

ಗೌತಮ್-ಭೂಮಿ ಒಂದಾಗಲಿದ್ದಾರಾ?

ಈಗ ಭಾಗ್ಯಮ್ಮ ಭೂಮಿಕಾ ಎಂದು ಕರೆದಿದ್ದಾಳೆ. ಅತ್ತೆ ಕರೆದಿರೋದು ಭೂಮಿಗೆ ಕೇಳಿಸಿದೆ. ಅವಳು ತನ್ನ ಸೆರಗಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿಕೊಂಡು ಅತ್ತೆ ಎಂದು ಮಾತನಾಡಿಸಲು ಮುಂದಾಗಿದ್ದಾಳೆ. ಅಲ್ಲಿ ಗೌತಮ್‌ ಕೂಡ ಬಂದಿದ್ದಾನೆ. ಗೌತಮ್‌, ಭೂಮಿಕಾ, ಭಾಗ್ಯಮ್ಮ ಈ ಮೂವರ ಮಿಲನ ಆಗಲಿದೆಯಾ ಎಂದು ಕಾದು ನೋಡಬೇಕಿದೆ. ಭಾಗ್ಯಮ್ಮ ಮಾತು ಕೇಳಿ ಗೌತಮ್-‌ಭೂಮಿಕಾ ಒಂದಾಗಲಿದ್ದಾರಾ ಎಂಬ ಕುತೂಹಲವಿದೆ.

ಈ ಪ್ರೋಮೋ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *