Headlines

Amruthadhaare: ಒಂದೆಡೆ ಜೈದೇವ್​ನಿಂದ ಮಲ್ಲಿಗೆ ಮುಕ್ತಿ: ಇನ್ನೊಂದೆಡೆ ಶುರುವಾಯ್ತು ಅನುರಾಗ; ಮುಗಿಯತ್ತಾ ಸೀರಿಯಲ್​?

Amruthadhaare: ಒಂದೆಡೆ ಜೈದೇವ್​ನಿಂದ ಮಲ್ಲಿಗೆ ಮುಕ್ತಿ: ಇನ್ನೊಂದೆಡೆ ಶುರುವಾಯ್ತು ಅನುರಾಗ; ಮುಗಿಯತ್ತಾ ಸೀರಿಯಲ್​?

Amruthadhaare: ಒಂದೆಡೆ ಜೈದೇವ್​ನಿಂದ ಮಲ್ಲಿಗೆ ಮುಕ್ತಿ: ಇನ್ನೊಂದೆಡೆ ಶುರುವಾಯ್ತು ಅನುರಾಗ; ಮುಗಿಯತ್ತಾ ಸೀರಿಯಲ್​?

ಅಮೃತಧಾರೆ ಸೀರಿಯಲ್ ರೋಚಕ ಹಂತ ತಲುಪಿದ್ದು, ಮಲ್ಲಿ ಡಿವೋರ್ಸ್ ಪೇಪರ್ ಮೂಲಕ ಜೈದೇವ್‌ಗೆ ಶಾಕ್ ನೀಡಿದ್ದಾಳೆ. ಇನ್ನೊಂದೆಡೆ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್‌ನ ಆರೈಕೆ ಮಾಡುತ್ತಿರುವ ಭೂಮಿಕಾಳನ್ನು ನೋಡಿ, ಇವರಿಬ್ಬರು ಒಂದಾಗುವ ಸೂಚನೆ ಸಿಕ್ಕಿದೆ. ಸೀರಿಯಲ್ ಮುಕ್ತಾಯ ಆಗ್ತಿದೆಯಾ?

ಅಮೃತಧಾರೆ (Amruthadhaare) ಸೀರಿಯಲ್​ ಈಗ ರೋಚಕ ಹಂತ ತಲುಪಿದೆ. ಆಸ್ತಿಗೆ ಮಲ್ಲಿ ಸಹಿ ಹಾಕಿಸಿಕೊಳ್ಳುವ ಸಂಬಂಧ ಜೈದೇವ್​ ಅವಳನ್ನು ಮನೆಗೆ ಕರೆದಿದ್ದ. ಇದೇ ಒಳ್ಳೆಯ ಸಮಯ ಎಂದು ಗೌತಮ್​ ಜೈದೇವ್​ನಿಗೆ ಹಳ್ಳ ತೋಡಲು ಪ್ಲ್ಯಾನ್​ ಮಾಡಿದ್ದ.

ಅದೇ ರೀತಿ, ಮಲ್ಲಿ ಡಿವೋರ್ಸ್​ ಪೇಪರ್​ ಹಿಡಿದು ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಅವಳು ಆಸ್ತಿ ಪೇಪರ್​ಗೆ ಸಹಿ ಹಾಕಲು ಬಂದಿದ್ದಾಳೆ ಎಂದು ಖುಷಿಯಾಗಿದ್ದ ಜೈದೇವ್​ಗೆ ಶಾಕ್​ ಆಗಿದೆ. ಡಿವೋರ್ಸ್​ ಪೇಪರ್​ಗೆ ಸಹಿ ಹಾಕಿದ್ರೆ ಆಸ್ತಿ ಪೇಪರ್​ಗೆ ಸಹಿ ಹಾಕುವುದಾಗಿ ಮಲ್ಲಿ ಹೇಳಿದ್ದಾಳೆ.

ಅದೇ ಇನ್ನೊಂದೆಡೆ, ದಿನವೂ ಗೌತಮ್​ನನ್ನು ನೋಡುತ್ತಿದ್ದ ಭೂಮಿಕಾ, ಆತ ಮನೆಯಿಂದ ಹೊರಕ್ಕೆ ಬರದೇ ಇರುವುದಕ್ಕೆ ಬೇಸರವಾಗಿದೆ. ಕೊನೆಗೆ, ಮಿಂಚುಗೆ ಹೋಗಿ ವಿಷಯ ಕೇಳಿದಾಗ ಪಪ್ಪನಿಗೆ ಹುಷಾರಿಲ್ಲ ಎಂದಿದ್ದಾಳೆ.

ಗಾಬರಿಯಿಂದ ಓಡಿಹೋದ ಭೂಮಿಕಾ, ಗೌತಮ್​ನನ್ನು ಮುಟ್ಟಿ ನೋಡಿದಾಗ ಜ್ವರ ಬಂದಿರುವುದು ತಿಳಿದಿದೆ. ಆತನ ಹಣೆಗೆ ತಣ್ಣೀರಿನ ಪಟ್ಟಿ ಇಟ್ಟಿದ್ದಾಳೆ. ಇದನ್ನು ಆಕಾಶ್​ ಮತ್ತು ಮಿಂಚು ಅಚ್ಚರಿಯಿಂದ ನೋಡಿದ್ದಾರೆ.

ಅಲ್ಲಿಗೆ ಭೂಮಿಕಾ ಮತ್ತು ಗೌತಮ್​ ಒಂದಾಗುವುದು ಗ್ಯಾರೆಂಟಿ ಎಂದಾಯ್ತು. ಅದೇ ಇನ್ನೊಂದೆಡೆ ಮಲ್ಲಿಗೆ ಜೈದೇವ್​ನಿಂದ ಮುಕ್ತಿ ಸಿಕ್ಕರೆ ಅಲ್ಲಿಗೆ ಆ ಸಮಸ್ಯೆಯೂ ಪರಿಹಾರ ಆಗತ್ತೆ. ಇನ್ನು ಸೀರಿಯಲ್​ನಲ್ಲಿ ಏನೂ ಉಳಿಯುವುದಿಲ್ಲ.

ಹಾಗಿದ್ದರೆ ಸೀರಿಯಲ್​ ಮುಗಿಯತ್ತಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡತೊಡಗಿದೆ. ಅಷ್ಟಕ್ಕೂ ಟಿಆರ್​ಪಿ ಹೆಚ್ಚಿಗೆ ಇರುವ ಅಮೃತಧಾರೆ ಸೀರಿಯಲ್​ ಅನ್ನು ಅಷ್ಟು ಸುಲಭದಲ್ಲಿ ಮುಗಿಸುವುದಿಲ್ಲ ಎನ್ನುವುದು ಕೂಡ ಅಷ್ಟೇ ದಿಟ.

ಇನ್ನೂ ಒಂದು ಏನೋ ಟ್ವಿಸ್ಟ್ ತಂದು ಸೀರಿಯಲ್​ ಎಳೆಯಬಹುದು. ಅಷ್ಟಕ್ಕೂ ಗೌತಮ್​ನ ಮಗಳು ಇನ್ನೂ ಸಿಕ್ಕಿಲ್ಲ. ಅವಳು ಯಾರು? ಮಿಂಚುನೇ ಮಗಳಾ ಅಥ್ವಾ ಅವಳು ಬೇರೆಯವಳಾ ಎನ್ನುವುದು ಕೂಡ ತಿಳಿಯಬೇಕಿದೆ.

ಗೌತಮ್​ ಮತ್ತು ಭೂಮಿಕಾರನ್ನು ಆದಷ್ಟು ಬೇಗ ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಿದ್ದರೂ, ಈ ಸೀರಿಯಲ್​ ಅಷ್ಟು ಬೇಗ ಮುಗಿಯುವುದು ಬೇಡ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವುದು ಕಮೆಂಟ್ಸ ನೋಡಿದರೆ ತಿಳಿಯುತ್ತದೆ.

ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *