Amruthadhaare: ಕಾರಿನ ಮೇಲೆ ಮಕ್ಕಳ ಕಿತಾಪತಿ-ಸ್ಟಿಕ್ಕರ್​ ನೋಡಿ ಹೌಹಾರಿದ ಗೌತಮ್​!

Amruthadhaare: ಕಾರಿನ ಮೇಲೆ ಮಕ್ಕಳ ಕಿತಾಪತಿ-ಸ್ಟಿಕ್ಕರ್​ ನೋಡಿ ಹೌಹಾರಿದ ಗೌತಮ್​!

Amruthadhaare: ಕಾರಿನ ಮೇಲೆ ಮಕ್ಕಳ ಕಿತಾಪತಿ-ಸ್ಟಿಕ್ಕರ್​ ನೋಡಿ ಹೌಹಾರಿದ ಗೌತಮ್​!

ಅಮೃತಧಾರೆ ಧಾರಾವಾಹಿಯಲ್ಲಿ, ಭೂಮಿಕಾ ಮತ್ತು ಮಕ್ಕಳು ಗೌತಮ್‌ನ ಪ್ರೀತಿಯ ಕಾರನ್ನು ಹುಡುಕಿದ್ದಾರೆ. ಆದರೆ, ಮಕ್ಕಳು ಕಾರಿನ ಮೇಲೆ ‘ಭೂಮಿಕಾ ಗೌತಮ್’ ಎಂದು ಸ್ಟಿಕ್ಕರ್ ಅಂಟಿಸಿದ್ದು, ಇದನ್ನು ನೋಡಿ ಗೌತಮ್ ಕೋಪಗೊಂಡಿದ್ದಾನೆ. ಗೌತಮ್ ಸ್ಟಿಕ್ಕರ್ ತೆಗೆಯಲು ಮುಂದಾದಾಗ ಭೂಮಿಕಾ ಎಂಟ್ರಿ ಕೊಟ್ಟಿದ್ದಾಳೆ.

ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿ ಗೌತಮ್​ನ ಪ್ರೀತಿಯ ಕಾರನ್ನು ಭೂಮಿಕಾ ಮತ್ತು ಮಕ್ಕಳು ಸೇರಿ ಹುಡುಕಿ ತಂದುಕೊಟ್ಟಿದ್ದಾರೆ. ಈ ಕಾರಿನ ಮೇಲೆ ಗೌತಮ್​ಗೆ ಸಿಕ್ಕಾಪಟ್ಟೆ ಅಟ್ಯಾಚ್​ಮೆಂಟ್​ ಇತ್ತು. ಕೊನೆಗೂ ಕಾರು ಸಿಕ್ಕಿದೆ.

ಇದೀಗ ಗೌತಮ್​ ಮತ್ತು ಭೂಮಿಕಾ ಯಾರು ಎನ್ನುವುದು ಮಕ್ಕಳಿಗೂ ತಿಳಿದಿದೆ. ಇದೇ ಕಾರಣಕ್ಕೆ ಮಿಂಚು ಮತ್ತು ಆಕಾಶ್​ ಸೇರಿ ಕಾರಿನ ಮೇಲೆ ಸ್ಟಿಕ್ಕರ್​ ಅಂಟಿಸಿದ್ದಾರೆ. ಇದನ್ನು ನೋಡಿ ಗೌತಮ್​ ಕಂಗಾಲಾಗಿ ಹೋಗಿದ್ದು, ಅದನ್ನು ತೆಗೆಯುವಂತೆ ತಾಕೀತು ಮಾಡಿದ್ದಾನೆ. ಆದರೆ ಮಕ್ಕಳು ಮಾತ್ರ ಅದನ್ನು ತೆಗೆಯುವುದೇ ಇಲ್ಲ ಎಂದಿದ್ದಾರೆ.

ಅಷ್ಟಕ್ಕೂ ಆ ಕಾರಿನ ಮೇಲೆ ಮಕ್ಕಳು ಭೂಮಿಕಾ ಗೌತಮ್​ ಎಂದು ಸ್ಟಿಕ್ಕರ್​ ಅಂಟಿಸಿ, ಪಕ್ಕದಲ್ಲಿ ಮಿಂಚು- ಆಕಾಶ್​ ಎಂದು ಬರೆದಿದ್ದಾರೆ. ಇದು ಬೇಡ, ಮೇಡಂಗೆ ಕೋಪ ಬರುತ್ತದೆ. ಇದನ್ನು ತೆಗೆಯಿರಿ ಎಂದು ಗೌತಮ್​ ಏನೇ ಹೇಳಿದ್ರೂ ಮಕ್ಕಳು ಕೇಳಲಿಲ್ಲ.

ಅದೇ ವೇಳೆ ಮಿಂಚು ತನ್ನ ಕೈಯಲ್ಲಿ ಒಂದು ಸ್ಟಿಕ್ಕರ್​ ಇಟ್ಟುಕೊಂಡಿದ್ದಳು. ಅದು ಏನು ಎಂದು ಕೇಳಿದಾಗ ಅದರ ಮೇಲೆ ಹ್ಯಾಪ್ಪಿ ಫ್ಯಾಮಿಲಿ ಎಂದು ಇತ್ತು. ಅದನ್ನು ಕಸಿದುಕೊಂಡ ಗೌತಮ್​, ಇವೆಲ್ಲಾ ಬೇಡ ಎಂದಿದ್ದಾರೆ.

ಇನ್ನೇನು ಸ್ಟಿಕ್ಕರ್​ ಕೀಳಬೇಕು ಎಂದು ಗೌತಮ್​ ಹೊರಟಾಗ ಅಲ್ಲಿಗೆ ಭೂಮಿಕಾ ಬಂದಿದ್ದಾಳೆ. ಅವಳು ಏನು ಮಾಡುತ್ತಾಳೆ ಎನ್ನುವುದು ಇನ್ನಷ್ಟೇ ನೋಡಬೇಕಿದೆ.

Source link

Leave a Reply

Your email address will not be published. Required fields are marked *